ಟಾಟಾ ಸನ್ಸ್ ನಿರ್ದೇಶಕ ಸ್ಥಾನದಿಂದಲೂ ಸೈರಸ್ ಮಿಸ್ತ್ರಿ ಔಟ್!

Written By: Ramesh
Subscribe to Oneindia Kannada

ಮುಂಬೈ, ಫೆಬ್ರವರಿ. 07 : ಸೈರಸ್ ಮಿಸ್ತ್ರಿ ಅವರನ್ನು ಈಗಾಗಲೇ ಟಾಟಾ ಸಮೂಹ ಸಂಸ್ಥೆ ಚೇರ್ಮನ್ ಸ್ಥಾನದಿಂದ ಹೊರ ಹಾಕಿದ್ದ ಬೆನ್ನಲ್ಲಿಯೇ ಈಗ ನಿರ್ದೇಶಕರ ಹುದ್ದೆಯಿಂದಲೂ ವಜಾ ಮಾಡಲಾಗಿದೆ.

ಸೋಮವಾರ ನಡೆದ ಟಾಟಾ ಸನ್ಸ್‌ನ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ (ಇಜಿಎಂ) ಭಾಗವಹಿಸಿದ್ದ ಷೇರುದಾರರು, ಮಿಸ್ತ್ರಿ ಅವರನ್ನು ನಿರ್ದೇಶಕ ಹುದ್ದೆಯಿಂದ ಹೊರ ಹಾಕುವ ನಿರ್ಣಯವನ್ನು ಬಹುಮತದಿಂದ ಬೆಂಬಲಿಸಿದರು. [ಟಾಟಾ ಬಂದ್ರು, ಮಿಸ್ತ್ರಿ ಹೋದ್ರು ಏನಿದರ ಗುಟ್ಟು?]

ಟಾಟಾ ಸನ್ಸ್‌ನಲ್ಲಿ ಶೇ 18.5 ರಷ್ಟು ಪಾಲು ಬಂಡವಾಳ ಹೊಂದಿರುವ ಶಪೂರ್ಜಿ ಪಲ್ಲೊಂಜಿ ಕುಟುಂಬದ ಪ್ರಾತಿನಿಧ ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶಕ ಮಂಡಳಿಯಲ್ಲಿ ಇಲ್ಲದಂತಾಗಿದೆ. [ಟಾಟಾ ಸಂಸ್ಥೆಗೆ ರತನ್ ರೀ ಎಂಟ್ರಿ, ಚೇರ್ಮನ್ ಮಿಸ್ತ್ರಿ ಔಟ್![

Tata Sons removes Cyrus Mistry from board of directors

ಪಲ್ಲೊಂಜಿ ನಿರ್ದೇಶಕ ಹುದ್ದೆಯಿಂದ ಕೆಳಗಿಳಿದ 2 ವರ್ಷದ ನಂತರ ಅವರ ಮಗ ಸೈರಸ್ 2006ರಲ್ಲಿ ನಿರ್ದೇಶಕರಾಗಿದ್ದರು. ಪಲ್ಲೊಂಜಿ ಕುಟುಂಬವು ಟಾಟಾ ಸನ್ಸ್‌ನಲ್ಲಿ 1965ರಿಂದಲೂ ಪಾಲು ಬಂಡವಾಳ ಹೊಂದಿದ್ದರೂ, ಮಿಸ್ತ್ರಿ ತಂದೆ ಪಲ್ಲೊಂಜಿ 1980ರಲ್ಲಷ್ಟೇ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾಗಿದ್ದರು.

2016 ರ ಅಕ್ಟೋಬರ್ ನಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಚೇರ್ಮನ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಇವರ ಸ್ಥಾನಕ್ಕೆ ಮಧ್ಯಂತರ ಚೇರ್ಮನ್ ಆಗಿ ರತನ್ ಟಾಟಾ ಅವರು ರೀ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shareholders of Tata Sons, in an extraordinary general meeting (EGM) on Monday afternoon, voted to remove former chairman Cyrus Mistry as director of the company.
Please Wait while comments are loading...