ಜೆಟ್ ಏರ್ ವೇಸ್ ಖರೀದಿಗೆ ಟಾಟಾ ಸನ್ಸ್ ನಲ್ಲಿ ಲೆಕ್ಕಾಚಾರ ಶುರು

ಮುಂಬೈ, ನವೆಂಬರ್ 13: ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ಖರೀದಿಗೆ ಟಾಟಾ ಸನ್ಸ್ ಮುಂದಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಈ ಬಗ್ಗೆ ಈಗಾಗಲೇ ಎರಡೂ ಕಡೆಯಿಂದ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ ಎಂದು ತಿಳಿಸಲಾಗಿದೆ.

ಈ ಚರ್ಚೆಯು ಖಾಸಗಿಯಾಗಿ ಇರಲಿದೆ. ಒಪ್ಪಂದ ಅಂತಿಮ ಆಗುವ ತನಕ ಯಾವುದೇ ಮಾಹಿತಿ ಹೊರಗೆ ಬಿಟ್ಟುಕೊಡದಿರಲು ನಿರ್ಧಾರ ಮಾಡಲಾಗಿದೆ. ಟಾಟಾ ಸನ್ಸ್ ನ ಚೀಫ್ ಫೈನಾನ್ಷಿಯಲ್ ಆಫೀಸರ್ (ಸಿಎಫ್ ಒ) ಸೌರಭ್ ಅಗರ್ ವಾಲ್ ಹಾಗೂ ಜೆಟ್ ಏರ್ ವೇಸ್ ನ ಅಧ್ಯಕ್ಷ ನರೇಶ್ ಗೋಯಲ್ ಮಧ್ಯೆ ಚರ್ಚೆ ನಡೆಸಲಿದ್ದಾರೆ.

ಟಾಟಾ ಸನ್ಸ್ ನಿಂದ ಇದಕ್ಕಾಗಿಯೇ ತಂಡವೊಂದನ್ನು ರಚಿಸಿಕೊಂಡು, ಜೆಟ್ ಏರ್ ವೇಸ್ ಜತೆಗಿನ ಮಾತುಕತೆಗೆ ಸಿದ್ಧತೆ ನಡೆಸಲಾಗುತ್ತಿದೆ. ಅದಕ್ಕಾಗಿ ಇನ್ನೂ ಕೆಲ ವಾರಗಳ ಸಮಯ ಹಿಡಿಸುತ್ತದೆ. ಅಂದಹಾಗೆ ಜೆಟ್ ಏರ್ ವೇಸ್ ಸತತವಾಗಿ ಮೂರನೇ ತ್ರೈ ಮಾಸಿಕ ಕೂಡ ಭಾರೀ ನಷ್ಟ ಅನುಭವಿಸಿದೆ.

Tata Sons begins due diligence to buy Jet Airways: Media Report

ಆ ಕಾರಣಕ್ಕೆ ಹೆಚ್ಚು ಲಾಭ ಇಲ್ಲದ ಮಾರ್ಗಗಳಲ್ಲಿ ವಿಮಾನ ಹಾರಾಟ ನಿಲ್ಲಿಸಲು ಯೋಜನೆ ರೂಪಿಸಿದೆ. ವೆಚ್ಚ ಕಡಿಮೆ ಮಾಡಿಕೊಂಡು, ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಲಾಭದಾಯಕ ಆಗುವ ಮಾರ್ಗಗಳಲ್ಲಿ ಮಾತ್ರ ವಿಮಾನ ಹಾರಾಟ ನಡೆಸುವುದಕ್ಕೆ ಚಿಂತನೆ ಮಾಡಲಾಗುತ್ತಿದೆ.

ಹೆಚ್ಚುತ್ತಿರುವ ತೈಲ ಬೆಲೆ, ತೈಲದ ಮೇಲಿನ ತೆರಿಗೆ ಹೆಚ್ಚಳ, ದುರ್ಬಲ ರುಪಾಯಿ ಮೌಲ್ಯ, ಕಡಿಮೆ ಪ್ರಯಾಣ ದರ ಹಾಗೂ ದರ ಸ್ಪರ್ಧೆ ಇವೆಲ್ಲವೂ ಸೇರಿಕೊಂಡು ಜೆಟ್ ಏರ್ ವೇಸ್ ಗೆ ನಷ್ಟ ಅನುಭವಿಸುವಂತೆ ಮಾಡಿವೆ. ಅಂದಹಾಗೆ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದು ವಿಮಾನಯಾನ ಕ್ಷೇತ್ರ. ಪ್ರತಿ ವರ್ಷ ಇಪ್ಪತ್ತು ಪರ್ಸೆಂಟ್ ಪ್ರಗತಿ ದಾಖಲಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+