12 ಸಾವಿರದವರೆಗೆ ಟಾಟಾ ಕಾರುಗಳ ಬೆಲೆಯಲ್ಲಿ ಏರಿಕೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಅಕ್ಟೋಬರ್ 19: ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಬೆಲೆಯಲ್ಲಿ 12 ಸಾವಿರ ರುಪಾಯಿವರೆಗೆ ಏರಿಕೆ ಮಾಡಿದೆ. 'ನಾವು ಪ್ರಯಾಣಿಕರ ವಾಹನಗಳ ಬೆಲೆಯನ್ನು ಶೇ 1ರಷ್ಟು ಏರಿಸಿದ್ದು, 5ರಿಂದ 12 ಸಾವಿರ ರುಪಾಯಿ ಏರಿಕೆ ಆಗಿದೆ. ಇನ್ ಪುಟ್ ಕಾಸ್ಟ್ ನಲ್ಲಿ ಏರಿಕೆ ಅಗಿರುವುದರಿಂದ ಇದು ಅನಿವಾರ್ಯ' ಎಂದು ಪ್ರಯಾಣಿಕರ ವಾಹನಗಳ ವಾಣಿಜ್ಯ ಘಟಕದ ಅಧ್ಯಕ್ಷ ಮಯಾಂಕ್ ಪಾರೀಕ್ ಹೇಳಿದ್ದಾರೆ.

ಉಕ್ಕು, ಜಿಂಕ್ ನಂಥ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಟಾಟಾ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. ಟಾಟಾ ಮೋಟಾರ್ಸ್ ಕಂಪನಿಯು ಸಣ್ಣ ಕಾರು ನ್ಯಾನೋ ಮೊದಲುಗೊಂಡು, ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಹ್ಯಾಚ್ ಬ್ಯಾಕ್ ಟಿಯಾಗೊ, ಕ್ರಾಸ್ ಓವರ್ ವಾಹನ ಅರಿಯಾವನ್ನು ಮಾರಾಟ ಮಾಡುತ್ತದೆ. ಅವುಗಳ ಬೆಲೆ 2.15 ಲಕ್ಷದಿಂದ 16.3 ಲಕ್ಷ (ದೆಹಲಿ ಎಕ್ಸ್ ಶೋ ರೂಂ ಬೆಲೆ)ವರೆಗೆ ಇದೆ.

Tata motors passanger vehicles price hike upto 12 thousand

ಮತ್ತೊಂದು ದೇಶಿ ಕಾರು ತಯಾರಿಕಾ ಕಂಪೆನಿಯಾದ ಮಹೀಂದ್ರ ಹಾಗೂ ಮಹೀಂದ್ರದ ಕೆಲವು ಪ್ರಯಾಣಿಕರ ವಾಹನಗಳು ಹಾಗೂ ಸಣ್ಣ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಈ ತಿಂಗಳಿನಿಂದ ಶೇ 1ರಷ್ಟು ಏರಿಕೆ ಆಗಲಿದೆ. ಆಗಸ್ಟ್ ನಲ್ಲಿ ಹುಂಡೈ ಮೋಟಾರ್ ಕಂಪೆನಿಯು ಅದರ ವಿವಿಧ ಮಾಡೆಲ್ ಗಳ ಬೆಲೆಯನ್ನು 20 ಸಾವಿರದವರೆಗೆ ಏರಿಕೆ ಮಾಡಿತ್ತು. ಮಾರುತಿ ಸುಜುಕಿ ಕಂಪನಿ ಕೂಡ ವಿವಿಧ ಮಾಡೆಲ್ ಗಳ ಬೆಲೆಯನ್ನು 20 ಸಾವಿರವರೆಗೆ ಏರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian company Tata Motors has increased prices of its passenger vehicles by up to Rs 12,000 across models. Hyundai, MAhindra and Mahindra and Maruthi suzuki already hiked the price.
Please Wait while comments are loading...