ಟಾಟಾ ಮೋಟರ್ಸ್, ಮೈಕ್ರೋಸಾಫ್ಟ್ ಸಮ್ಮಿಲನ: ನಾವು ತಿಳಿಯಬೇಕಾದ 5 ಅಂಶಗಳು

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 16: ಇನ್ನು ಕೆಲವೇ ದಿನಗಳಲ್ಲಿ ಕಾರು ಡ್ರೈವ್ ಮಾಡುವುದೊಂದು ಹಬ್ಬವೆನಿಸಲಿದೆ. ಕಾರು ಚಲಾಯಿಸುತ್ತಿದ್ದರೆ ಪ್ರಯಾಣ ಮುಗಿದ ಮೇಲೆ ಮತ್ತೊಂದು ರೌಂಡ್ ಹೋದರೆ ಹೇಗೆ ಎಂಬ ಆಸೆಯೂ ಚಾಲಕರಲ್ಲಿ ಮೂಡುವ ದಿನಗಳು ದೂರವಿಲ್ಲ.

ಏಕೆಂದರೆ, ಭಾರತದಲ್ಲಿ ಇಂಥದ್ದೊಂದು ಡ್ರೈವಿಂಗ್ ಸ್ನೇಹಿ ತಂತ್ರಜ್ಞಾ ರೂಪಿಸಲು ಭಾರತದ ಹೆಮ್ಮೆಯ ಟಾಟಾ ಮೋಟಾರ್ಸ್ ಹಾಗೂ ಮೈಕ್ರೋ ಸಾಫ್ಟ್ ಕಂಪನಿಗಳು ಕೈ ಜೋಡಿಸಿದ್ದು, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಡ್ರೈವಿಂಗ್ ಅನುಭೂತಿ ನೀಡುವಂಥ ಕಾರುಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿವೆ.

ಇದರ ಅವಶ್ಯಕತೆಯೇನು?
ಚಾಲಕ ಸ್ನೇಹಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳಾಗುತ್ತಿವೆ. ಜಗತ್ತಿನ ಹಲವಾರು ಕಾರು ತಯಾರಿಕಾ ಕಂಪನಿಗಳು, ಮತ್ತಷ್ಟು ಮಗದಷ್ಟು ವಿಶೇಷತೆಗಳುಳ್ಳ ತಂತ್ರಜ್ಞಾನಗಳನ್ನು ಕೊಡಲು ಈಗಾಗಲೇ ಸಿದ್ಧವಾಗತ್ತಿವೆ.

ಅಂದಹಾಗೆ, ಕಾರು ಉದ್ಯಮದಲ್ಲಿ ಚಾಲಕ ಸ್ನೇಹಿ ತಂತ್ರಜ್ಞಾನ ಹುಟ್ಟಿದ್ದು ಈಗ ಮಾತ್ರವಲ್ಲ. ಅದಕ್ಕೆ ದಶಕಗಳ ಇತಿಹಾಸವಿದೆ. ಇಂದು ನಾವು ನಮ್ಮ ಕಾರುಗಳಲ್ಲಿ ಕಾಣುವ ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, ರಿವರ್ಸ್ ಪಾರ್ಕಿಂಗ್ ಎಲ್ ಸಿಡಿ ಡಿಸ್ ಪ್ಲೇ, ಆಟೋ ಗೇರ್, ಬ್ಲೂ ಟೂತ್ ಕಾಲ್ ರಿಸೀವಿಂಗ್ ಆಪ್ಷನ್... ಹೀಗೆ ಮುಂತಾದ ಹಲವಾರು ಸೌಕರ್ಯಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಜಾರಿಗೆ ಬಂದು ತುಂಬಾ ವರ್ಷಗಳೇ ಕಳೆದಿವೆ.

ಈಗ, ಭಾರತದಲ್ಲಿಯೂ ಅಂಥದ್ದೊಂದು ಬೂಮ್ ಸೃಷ್ಟಿಸುವುದು ಟಾಟಾ ಕಂಪನಿಯ ಇರಾದೆಯಾಗಿದ್ದು, ಅದಕ್ಕಾಗಿಯೇ ಮೈಕ್ರೋಸಾಫ್ಟ್ ಕಂಪನಿಯೊಂದಿಗೆ ಕೈ ಜೋಡಿಸಿದೆ.

ಅದೊಂದು ಕಲೆ

ಅದೊಂದು ಕಲೆ

ಡ್ರೈವಿಂಗ್ ಸೀಟ್ ಅನ್ನೋದು ಯಾವುದೇ ವಾಹನದಲ್ಲಿ ಪ್ರಮುಖವಾದ ಆಸನ. ಅದು ಕಾರು ಆಗಿರಲಿ, ವಿಮಾನವಾಗಿರಲಿ (ಅಲ್ಲಿ ಕಾಕ್ ಪಿಟ್ ಅಂತ ಕರೆಯುತ್ತಾರೆ) ಚಾಲಕನ ಜವಾಬ್ದಾರಿ ಮಹತ್ವವಾದದ್ದು. ಹಾಗಾಗಿಯೇ, ಅಲ್ಲಿ ಸುಲಭ ಚಾಲನೆಗೆ ಪೂರಕವಾದ ವಾತಾವರಣ, ತಂತ್ರಜ್ಞಾನ ಅಭಿವೃದ್ಧಿಗೆ ಈಗ ಬಹುತೇಕ ಎಲ್ಲಾ ಕಾರು ಕಂಪನಿಗಳೂ ಕೈ ಹಾಕಿವೆ.

ದೈತ್ಯ ಸಂಸ್ಥೆಯ ಹರಸಾಹಸ

ದೈತ್ಯ ಸಂಸ್ಥೆಯ ಹರಸಾಹಸ

ಗೂಗಲ್ ಸಂಸ್ಥೆ ಮಿಕ್ಕೆಲ್ಲಾ ಕಂಪನಿಗಳಿಗಿಂತ ಮುಂದೆ ಹೋಗಿ, ಚಾಲಕ ರಹಿತ ಕಾರುಗಳ ಆವಿಷ್ಕಾರಕ್ಕೆ ಮುಂದಾಗಿದೆ. ಆದರೆ ಅದು ಅಷ್ಟು ಸುಲಭವಾದ ಕಾರ್ಯವಲ್ಲ. ಆದರೂ, ಪ್ರಯತ್ನಗಳು ಸಾಗಿವೆ.

ಚಾಲಕರಿಗೆ ವರದಾನ

ಚಾಲಕರಿಗೆ ವರದಾನ

ಇದೀಗ, ಟಾಟಾ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳ ಒಗ್ಗೂಡುವಿಕೆಯಿಂದ ಭವಿಷ್ಯದಲ್ಲಿ ಭಾರತೀಯ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮತ್ತಷ್ಟು ಸೌಲಭ್ಯಗಳುಳ್ಳ ಕಾರು ಚಾಲನೆ ಸಾಧ್ಯವಾಗಲಿದೆ ಎಂಬುದೊಂದು ನಿರೀಕ್ಷೆ ಹುಟ್ಟಿಕೊಂಡಿದೆ.

ಹೆಚ್ಚಿನ ಸಾಧನೆಗೆ ಪ್ರಯತ್ನ

ಹೆಚ್ಚಿನ ಸಾಧನೆಗೆ ಪ್ರಯತ್ನ

ಭಾರತೀಯ ಕಾರು ಉದ್ಯಮವನ್ನು ಮಾರುತಿ ಸುಝುಕಿ, ಹುಂಡೈ ಆಳುತ್ತಿದ್ದರೂ ಇತ್ತೀಚೆಗಿನ ತನ್ನ ಖ್ಯಾತ ಮಾಡೆಲ್ ಗಳಾದ ಬೋಲ್ಟ್, ಟಿಯಾಗೋ ಮಾಡೆಲ್ ಗಳಿಂದ ಸ್ಪರ್ಧೆಯಲ್ಲಿ ತಾನಿರುವುದನ್ನು ಟಾಟಾ ಸಾಬೀತುಪಡಿಸಿದೆ.

ಹೊಸತೊಂದು ಭಾಷ್ಯಕ್ಕೆ ದೈತ್ಯರು ಸಜ್ಜು

ಹೊಸತೊಂದು ಭಾಷ್ಯಕ್ಕೆ ದೈತ್ಯರು ಸಜ್ಜು

ಟಾಟಾ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳು ಕೈಜೋಡಿಸಿರುವುದನ್ನು ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಟಾಟಾ ಮೋಟರ್ಸ್ ಕಾರ್ಯಾಧ್ಯಕ್ಷ ಗುಯೆಂಟರ್ ಬುಷೆಕ್ ಹಾಗೂ ಮೈಕ್ರೋಸಾಫ್ಟ್ ನ ಭಾರತ ಶಾಖೆಯ ಅನಂತ್ ಮಹೇಶ್ವರಿ, ಮುಂದಿನ ದಿನಗಳಲ್ಲಿ ಭಾರತೀಯ ಗ್ರಾಹಕರಿಗೆ ಫನ್ ಡ್ರೈವಿಂಗ್ ಹಾಗೂ ವ್ಯಾಲ್ಯೂ ಆ್ಯಡೆಡ್ ಸೌಲಭ್ಯಗಳುಳ್ಳ ಕಾರುಗಳು ಲಭ್ಯವಾಗಲಿವೆ ಎಂದು ಆಶಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tata Motors Ltd and Microsoft India on Thursday announced a strategic collaboration on the technology front.
Please Wait while comments are loading...