ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಟಾಟಾ: ಇನ್ಫಿಗೆ 4ನೇ ಸ್ಥಾನ

Posted By:
Subscribe to Oneindia Kannada

ನವದೆಹಲಿ, ಮೇ 17: ಬ್ರಾಂಡ್ ಫೈನಾನ್ಸ್ ಎಂಬ ಕಂಪನಿಯು ನಡೆಸಿದ ಗ್ರಾಹಕ ಅಭಿಪ್ರಾಯ ಆಧಾರಿತ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಭಾರತದ ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಹೊರಹೊಮ್ಮಿದೆ. ಇನ್ನು, ಕನ್ನಡಿಗರ ಹೆಮ್ಮೆಯ ಸಾಫ್ಟ್ ವೇರ್ ಕಂಪನಿಯಾದ ಇನ್ಫೋಸಿಸ್, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ.

ಕಳೆದ ವರ್ಷವೂ ಇದೇ ಕಂಪನಿಯಿಂದ ಇದೇ ಮಾದರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಟಾಟಾ ಕಂಪನಿ ನಂಬರ್ ಒನ್ ಕಂಪನಿಯಾಗಿ ಹೊರಹೊಮ್ಮಿತ್ತು.

Tata most valuable brand, Infosys at 4

ಸಮೀಕ್ಷೆಯಲ್ಲಿ ಏರ್ ಟೆಲ್ ಸಂಸ್ಥೆಯು ದೇಶದ ಎರಡನೇ ವಿಶ್ವಾಸಾರ್ಹ ಸಂಸ್ಥೆಯಾಗಿ ಹೊರಹೊಮ್ಮಿದ್ದರೆ, ಸರ್ಕಾರದ ಸ್ವಾಮ್ಯದ ಎಲ್ ಐಸಿ ಗ್ರಾಹಕರ ಮೂರನೇ ವಿಶ್ವಾಸಾರ್ಹ ಕಂಪನಿ ಎನಿಸಿದೆ.

ಕಳೆದ ವರ್ಷದ ಸಮೀಕ್ಷೆಯಲ್ಲಿ ಟಾಟಾ ಕಂಪನಿಯು ಅಗ್ರಸ್ಥಾನದಲ್ಲಿದ್ದರೂ, ಈ ವರ್ಷ ಆ ಸ್ಥಾನವನ್ನು ಟಾಟಾ ಕಂಪನಿ ಕಳೆದುಕೊಳ್ಳಬಹುದೆಂಬ ಅನುಮಾನವಿತ್ತು. ಅದಕ್ಕೆ ಕಾರಣ, ಇತ್ತೀಚೆಗೆ ಟಾಟಾ ಸಮೂಹ ಕಂಪನಿಗಳಲ್ಲಿ ಆದ ಒಳಜಗಳ.

ಕಂಪನಿಯ ಮುಖ್ಯಸ್ಥರಾಗಿದ್ದ ಸೈರಸ್ ಮಿಸ್ತ್ರಿಯವರನ್ನು ಕಂಪನಿಯಿಂದ ಹೊರಹಾಕಿದ್ದು ಆನಂತರ, ರತನ್ ಟಾಟಾ ಅವರೇ ಕಂಪನಿಯ ಜವಾಬ್ದಾರಿ ಹೊತ್ತಿದ್ದು ಹಾಗೂ ಆನಂತರದ ಮಿಸ್ತ್ರಿ ಅವರು ಕಾನೂನು ಸಮರ ಸಾರಿದ್ದು... ಇವೇ ಮುಂತಾದ ವಿಚಾರಗಳಿಂದಾಗಿ, ಟಾಟಾ ಕಂಪನಿಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳಲು ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ, ಹಾಗಾಗಿಲ್ಲ. ಈಗಲೂ 150 ವರ್ಷಗಳ ಹಿಂದಿನ ಟಾಟಾ ಕಂಪನಿಯ ಮೇಲೆ ಜನರ ವಿಶ್ವಾಸ ಅಚಲವಾಗಿದೆ ಎಂದು ಬ್ರಾಂಡ್ ಫೈನಾನ್ಸ್ ಕಂಪನಿ ಹೇಳಿಕೊಂಡಿದೆ.

ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಜನರ ನಂಬಿಕೆ ಗಳಿಸಿದ ಟಾಪ್ 10 ಕಂಪನಿಗಳು ಇಲ್ಲಿವೆ.

1. ಟಾಟಾ
2. ಏರ್ ಟೆಲ್
3. ಎಲ್ಐಸಿ
4. ಇನ್ಫೋಸಿಸ್
5. ಎಸ್ ಬಿಐ
6. ರಿಲಯನ್ಸ್
7. ಎಲ್ ಆ್ಯಂಡ್ ಟಿ
8. ಇಂಡಿಯನ್ ಆಯಿಲ್
9. ಎಚ್ ಸಿಎಲ್
10. ಮಹಿಂದ್ರಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The House of Tatas has retained its position as India’s leading brand in valuation firm Brand Finance’s annual study of the country’s top 100 names.
Please Wait while comments are loading...