ಟಾಟಾ ಸಂಸ್ಥೆ ಮಾರುಕಟ್ಟೆ ಮೌಲ್ಯ 55 ಸಾವಿರ ಕೋಟಿ ರು ಕುಸಿತ
ಮುಂಬೈ, ಅಕ್ಟೋಬರ್ 27: ಟಾಟಾ ಸಮೂಹದ ಚೇರ್ಮನ್ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ಹೊರಕ್ಕೆ ಕಳಿಸುತ್ತಿದ್ದಂತೆ ಟಾಟಾ ಸಮೂಹದ ಮಾರುಕಟ್ಟೆ ಮೌಲ್ಯ ನೆಲಕಚ್ಚುತ್ತಿದೆ. ಕಳೆದ ಮೂರು ದಿನಗಳಿಂದ ಸಂಸ್ಥೆಯ ಮೌಲ್ಯ 55,000 ಕೋಟಿ ರು ಕಳೆದುಕೊಂಡಿದೆ.
ಟಾಟಾ ಸಮೂಹದ ಷೇರುಗಳು ಕಳೆದ ಮೂರು ದಿನಗಳಿಂದ ಇಳಿಮುಖದ ಹಾದಿಯಲ್ಲಿವೆ. ದೇಶದ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕೂಡಾ ಇದರಿಂದ ಹೊರತಾಗಿಲ್ಲ.

ಟಾಟಾ ಮೋಟರ್ಸ್ ಲಿಮಿಟೆಡ್ ಶೇ 3.3ರಷ್ಟು, ಟಿಸಿಎಸ್ ಶೇ 1ರಷ್ಟು, ಟಾಟಾ ಸ್ಟೀಲ್ ಲಿ ಶೇ 2.7, ಟಾಟಾ ಕಮ್ಯೂನಿಕೇಷನ್ ಲಿ ಶೇ 2, ಇಂಡಿಯನ್ ಹೋಟೆಲ್ ಕೊ ಲಿಮಿಟೆಡ್ ಶೇ 10, ಟಾಟಾ ಪವರ್ ಕಂಪನಿ ಲಿ ಶೇ 2.9 ಹಾಗೂ ಟಾಟಾ ಬೆವರೇಜಸ್ ಶೇ 5.3ರಷ್ಟು ಕುಸಿತ ಕಂಡಿದೆ.












Click it and Unblock the Notifications