ಬಿಗ್ ಬಾಸ್ಕೆಟ್‌ನಲ್ಲಿ ದೊಡ್ಡ ಹೂಡಿಕೆ ಮಾಡಲಿರುವ ಟಾಟಾ ಗ್ರೂಪ್
ನವದೆಹಲಿ, ಜನವರಿ 20: ಭಾರತದ ಅತಿದೊಡ್ಡ ಆನ್‌ಲೈನ್ ಕಿರಾಣಿ ಕಂಪನಿಯಾದ ಬಿಗ್ ಬಾಸ್ಕೆಟ್‌ನಲ್ಲಿ ಬಹುಪಾಲು ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ಟಾಟಾ ಗ್ರೂಪ್ ಮಾತುಕತೆ ನಡೆಸಿದೆ. ಇದರ ಭಾಗವಾಗಿ 200 ರಿಂದ 250 ಮಿಲಿಯನ್‌ನಷ್ಟು ಹಣವನ್ನು ಬಿಗ್ ಬಾಸ್ಕೆಟ್‌ನಲ್ಲಿ ಹೂಡಿಕೆಗೆ ಮಾತುಕತೆ ಅಂತಿಮವಾಗಿ ಎಂದು ಮೂಲಗಳು ತಿಳಿಸಿವೆ.
ಟಾಟಾ ಒಟ್ಟು 1.2 ಬಿಲಿಯನ್ ಮೊತ್ತದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಷೇರುಗಳ ಮಾರಾಟದಲ್ಲಿ ಬಿಗ್‌ಬಾಸ್ಕೆಟ್‌ನಲ್ಲಿ ಶೇಕಡಾ 60ರಷ್ಟು ಪಾಲನ್ನು ಪಡೆಯುತ್ತದೆ ಎಂದು ಹೇಳಲಾಗಿದೆ.
ಉಪ್ಪಿನಿಂದ, ಸಾಫ್ಟ್‌ವೇರ್‌ವರೆಗೂ ತನ್ನ ಸಂಸ್ಥೆಯನ್ನು ಹೊಂದಿರುವ ಟಾಟಾ ಗ್ರೂಪ್ ಬಿಗ್‌ಬಾಸ್ಕೆಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಎರಡು ದೊಡ್ಡ ಹೂಡಿಕೆದಾರರಾದ ಅಲಿಬಾಬಾ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಅಬ್ರಾಜ್ ಗ್ರೂಪ್‌ಗೆ ಸಂಪೂರ್ಣ ನಿರ್ಗಮನವನ್ನು ಒದಗಿಸುವ ಸಾಧ್ಯತೆಯಿದೆ ಎಂದು ಈ ಕುರಿತು ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಟಾಟಾ ಗ್ರೂಪ್, ಬಿಗ್‌ಬಾಸ್ಕೆಟ್ ವಕ್ತಾರರಿಗೆ ಕಳುಹಿಸಲಾದ ಇಮೇಲ್ ನಲ್ಲಿ ಕೇಳಲಾದ ಪ್ರಶ್ನೆಗೆ ಎರಡು ಸಂಸ್ಥೆಗಳು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.












Click it and Unblock the Notifications