ಟಾಟಾದಿಂದ 148 ರುಗಳಿಗೆ ಅನಿಯಮಿತ ಕರೆ ಯೋಜನೆ

Posted By:
Subscribe to Oneindia Kannada

ಬೆಂಗಳೂರು, 26 ನೇ ಡಿಸೆಂಬರ್ 2016: ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಟೆಲಿ ಸರ್ವೀಸಸ್ ಲಿಮಿಟೆಡ್(ಟಿಟಿಎಲ್)ನ ಟಾಟಾ ಡೊಕೊಮೊ ಕರ್ನಾಟಕದ ತನ್ನ ಗ್ರಾಹಕರಿಗಾಗಿ ಒಂದು ಆಕರ್ಷಕ ಅನಿಯಮಿತ ಕರೆಗಳ' ಯೋಜನೆಯನ್ನು ಪ್ರಕಟಿಸಿದೆ.

ಈ ಯೋಜನೆಯಲ್ಲಿ ಗ್ರಾಹಕರು ಕೇವಲ 148 ರೂಪಾಯಿಗಳಿಗೆ ಅನಿಯಮಿತವಾದ ಎಸ್ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಮಾಡಬಹುದು. ಈ ಯೋಜನೆ ಪ್ರೀ-ಪೇಯ್ಡ್ ಗ್ರಾಹಕರಿಗೆ ಲಭ್ಯವಿದ್ದು, ಇದರನ್ವಯ ತಡೆರಹಿತವಾಗಿ ಮಾತನಾಡಬಹುದು. ಅಲ್ಲದೇ ಇದರ ಜೊತೆಗೆ 3ಜಿ ಡೇಟಾವನ್ನೂ(ಆಯ್ದ ಪ್ಯಾಕ್ ಗಳಲ್ಲಿ) ಮಾರುಕಟ್ಟೆಯಲ್ಲಿಯೇ ಅತ್ಯುತ್ತಮ ದರದಲ್ಲಿ ಬಳಸಬಹುದಾಗಿದೆ. [ಡೊಕೊಮೊದಿಂದ 350 ರುಗಳಿಗೆ, ಪೋಸ್ಟ್-ಪೇ ಆಫರ್]

ಈ ಹೊಸ ಕರೆ ಯೋಜನೆಗಳ ಪ್ರಕಾರ ಟಾಟಾ ಡೊಕೊಮೊ ಗ್ರಾಹಕರು 348 ರೂಪಾಯಿಗಳಲ್ಲಿ 5 ಜಿಬಿ 3ಜಿ ಡೇಟಾದೊಂದಿಗೆ 28 ದಿನಗಳ ವಾಯಿದೆಯೊಂದಿಗೆ ಯಾವುದೇ ನೆಟ್‍ವರ್ಕ್ ಗೆ ಅನಿಯಮಿತವಾದ ಎಸ್ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಮಾಡಬಹುದು.

Tata Docomo rolls out new unlimited calling plans Karnataka Kerala

ಅದೇ ರೀತಿ, 298 ರೂಪಾಯಿಗಳಲ್ಲಿ 2ಜಿಬಿ 3ಜಿ ಡೇಟಾದೊಂದಿಗೆ ಅನಿಯಮಿತ ಕರೆಗಳ ಸೇವೆಯನ್ನು 28 ದಿನಗಳ ವಾಯಿದೆಯೊಂದಿಗೆ ಪಡೆಯಬಹುದು. ಇನ್ನೂ ಹೆಚ್ಚುವರಿಯಾಗಿ ಈ ಯೋಜನೆಗಳಡಿ ಪ್ರೀ-ಪೇ ಗ್ರಾಹಕರು ಕೇವಲ 148 ರೂಪಾಯಿಗಳಲ್ಲಿ 14 ದಿನಗಳವರೆಗೆ 500 ಎಂಬಿ 3ಜಿ ಡೇಟಾದೊಂದಿಗೆ ಅನಿಯಮಿತವಾದ ಎಸ್ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಮಾಡಲು ಅವಕಾಶವಿದೆ. ಈ ಎಲ್ಲಾ ಯೋಜನೆಗಳ ಹೊರತಾಗಿ ಗ್ರಾಹಕರು ಕೇವಲ 103 ರೂಪಾಯಿಗಳ ರೀಚಾರ್ಜ್ ನಲ್ಲಿ ದೇಶಾದ್ಯಂತ ಇರುವ ಟಾಟಾ ಡೊಕೊಮೊ ಗ್ರಾಹಕರಿಗೆ 28 ದಿನಗಳವರೆಗೆ ಆನ್-ನೆಟ್ ಕರೆಗಳನ್ನು ಅನಿಯಮಿತವಾಗಿ 500 ಎಂಬಿ 3ಜಿ ಡೇಟಾದೊಂದಿಗೆ ಮಾಡಬಹುದು.


ಈ ಅನಿಯಮಿತ ಯೋಜನೆಗಳ ಬಗ್ಗೆ ಮಾತನಾಡಿದ ಟಿಟಿಎಸ್‍ಎಲ್ ನ ಕರ್ನಾಟಕ ಮತ್ತು ಕೇರಳ ವೃತ್ತಗಳ ಸಿಬಿಯು ಮುಖ್ಯಸ್ಥರಾದ ಬಾಲಾಜಿ ಪ್ರಕಾಶ್ ಅವರು, 'ಈ ಅನಿಯಮಿತ ಯೋಜನೆಗಳ ಮೂಲಕ ನಮ್ಮ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಗರಿಷ್ಟ ಗುಣಮಟ್ಟದ ಧ್ವನಿ ಮತ್ತು ಡೇಟಾ ಸೇವೆಗಳನ್ನು ನೀಡುತ್ತಿದ್ದೇವೆ. ಅನಿಯಮಿತ ಕರೆಗಳು ಮತ್ತು ಹೇರಳವಾದ ಡೇಟಾ ಸೇವೆಯನ್ನು ಲಭ್ಯವಿರುವ ದರದಲ್ಲಿ ನೀಡುತ್ತಿದ್ದೇವೆ. ನಮ್ಮ ಗ್ರಾಹಕರ ಹೆಚ್ಚಾಗುತ್ತಿರುವ ಬೇಡಿಕೆಗಳಿಗೆ ಈ ಅನಿಯಮಿತ ಯೋಜನೆಗಳು ಸೂಕ್ತ ಎನಿಸಲಿವೆ. ಇದು ನಮ್ಮ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆಯಾಗಿದ್ದು, ಪ್ರಸ್ತುತ ಇರುವ ರಜಾ ಋತುವಿನಲ್ಲಿ ನಮ್ಮ ಗ್ರಾಹಕರು ಅತ್ಯಧಿಕವಾದ ಧ್ವನಿ ಮತ್ತು ಡೇಟಾ ಬಳಕೆ ಮಾಡಲಿ ಎಂಬುದು ನಮ್ಮ ಆಶಯವಾಗಿದೆ. ನಮ್ಮ ಗ್ರಾಹಕಸ್ನೇಹಿ ಸೇವೆಗಳೊಂದಿಗೆ ನಮ್ಮ ಗ್ರಾಹಕರನ್ನು ಸದಾ ಸಂತೋಷದಿಂದ ಇರುವಂತೆ ಮಾಡಲು ನಾವು ಬದ್ಧರಾಗಿದ್ದೇವೆ' ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Docomo on Monday rolled out a slew of unlimited STD and Local calls calling plans for its customers across karnataka and Kerala.
Please Wait while comments are loading...