ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಗೆ ಸೆಡ್ಡು ಹೊಡೆಯಲು ಏರ್ ಟೆಲ್ ನಿಂದ ಉಚಿತ ಆಫರ್

ರಿಲಯನ್ಸ್ ಜಿಯೋ ನೀಡುತ್ತಿರುವ ಆಫರ್ ಗೆ ಸ್ಪರ್ಧೆ ನೀಡಲು ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಮುಂದಾಗಿದೆ. ತನ್ನ 4ಜಿ ಗ್ರಾಹಕರಿಗೆ ಉಚಿತ ಡೇಟಾ ಆಫರ್ ಘೋಷಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 04: ರಿಲಯನ್ಸ್ ಜಿಯೋ ನೀಡುತ್ತಿರುವ ಆಫರ್ ಗೆ ಸ್ಪರ್ಧೆ ನೀಡಲು ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಮುಂದಾಗಿದೆ. ತನ್ನ 4ಜಿ ಗ್ರಾಹಕರಿಗೆ ಉಚಿತ ಡೇಟಾ ಆಫರ್ ಘೋಷಿಸಿದೆ.

ಭಾರ್ತಿ ಏರ್ ಟೆಲ್ ಗ್ರಾಹಕರಿಗೆ ಪ್ರತಿ ತಿಂಗಳಿಗೆ 3ಜಿಬಿ 4G ಇಂಟರ್ನೆಟ್ ಉಚಿತವಾಗಿ ಸಿಗಲಿದೆ. ಈ ಉಚಿತ ಆಫರ್ ಜನವರಿ 4ರಿಂದ ಆರಂಭವಾಗಿದ್ದು, 2017ರ ಫೆ.28 ರೊಳಗೆ ಈ ಆಫರ್ ಪಡೆದ ಗ್ರಾಹಕರು ಡಿಸೆಂಬರ್ 31ರ ವರೆಗೆ ಉಚಿತ 4ಜಿ ಇಂಟರ್ನೆಟ್ ಬಳಕೆ ಮಾಡಬಹುದು.

* ಭಾರತದ ಎಲ್ಲಾ ಟೆಲಿಕಾಂ ಗ್ರಾಹಕರಿಗೆ ಇದು ಲಭ್ಯವಿದೆ.
* 4ಜಿ ಮೊಬೈಲ್ ಇಂಟರ್ನೆಟ್ ಬಳಕೆ ಮಾಡುವ ಹ್ಯಾಂಡ್ ಸೆಟ್ ಇದ್ದರೆ ಸಾಕು.
* ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಬ್ಬರಿಗೂ ಆಫರ್ ಸಿಗಲಿದೆ.
* ಪ್ರತಿ ತಿಂಗಳ ಡಾಟಾ ಪ್ಲ್ಯಾನ್ ಹಾಕಿಸಿಕೊಂಡರೆ ಮಾತ್ರ ಈ ಉಚಿತ ಸೇವೆ ಸಿಗಲಿದೆ
* 2017ರ ಫೆಬ್ರವರಿ 28 ರೊಳಗೆ ಈ ಆಫರ್ ಪಡೆದುಕೊಳ್ಳಬೇಕು.
* ಡಿಸೆಂಬರ್ 31, 2017ರ ತನಕ ಆಫರ್ ಲಭ್ಯವಿರುತ್ತದೆ.

Tariff war: Bharti Airtel offers free monthly data for a year

ಪ್ರೀಪೇಯ್ಡ್ ಗ್ರಾಹಕರಿಗೆ
* ತಿಂಗಳಿಗೆ 345 ರೂ. ರಿಚಾರ್ಜ್ ಮಾಡಿಸಿದರೆ 1ಜಿಬಿ ಡಾಟಾ ಪಡೆಯುತ್ತಿದ್ದಾರೆ. ಈ ಆಫರ್ ನಿಂದ 3 ಜಿಬಿ ಅಧಿಕ ಡಾಟಾ ಸಿಗಲಿದೆ.
* ಉಚಿತ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳು ಸಿಗಲಿದ್ದು, ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ.
* ಡಿಸೆಂಬರ್ 31, 2017ರೊಳಗೆ 13 ಬಾರಿ ರೀಚಾರ್ಜ್ ಮಾಡಿಸಿಕೊಳ್ಳಬಹುದು.

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ತಿಂಗಳ ಪ್ಲ್ಯಾನ್ (549 ರಿಚಾರ್ಜ್) ಅಡಿ 3 ಜಿಬಿ ಉಚಿತ ಡಾಟಾ ಪಡೆಯಬಹುದು. MyPlan Infinity Plan ಅಡಿಯಲ್ಲಿ ಇದು ಲಭ್ಯವಿದೆ ಎಂದು ಏರ್‌ಟೆಲ್ ನಿರ್ದೇಶಕ(Market Operation) ಅಜಯ್ ಪುರಿ ಹೇಳಿದ್ದಾರೆ.

English summary
Tariff war: In order to compete with Reliance Jio, country’s largest telecom operator Bharti Airtel on Tuesday announced 3GB free monthly data for a year for users switching to its network by February 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X