ಮೈರಾ ಮೆಡಿಸಿನ್ಸ್ ವಿರುದ್ಧ ದೂರು ದಾಖಲಿಸಿದ ಎನ್ ಜಿಒ

Posted By:
Subscribe to Oneindia Kannada

ಬೆಂಗಳೂರು, ಜನವರಿ ೨೦: ಬೆಂಗಳೂರಿನ ಇ-ಫಾರ್ಮಸಿ ಆಪ್ ಕಂಪನಿ ಮೈರಾ ಮೆಡಿಸಿನ್ಸ್ ವಿರುದ್ಧ ದೆಹಲಿ ಮೂಲದ ಸ್ವದೇಶ್ ಸೇವಾ ಸಂಸ್ಥ ಎಂಬ ಎನ್‍ಜಿಒ ದೂರು ನೀಡಿದೆ. ಶೆಡ್ಯೂಲ್ ಎಚ್ ಮತ್ತು ನಿರ್ಬಂಧಿತ ಔಷಧಗಳನ್ನು ಮೌಲಿಕ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡುತ್ತಿರುವ ಆರೋಪವನ್ನು ಹೊರೆಸಿ ದೂರು ನೀಡಲಾಗಿದೆ. ಕರ್ನಾಟಕದ ಔಷಧ ನಿಯಂತ್ರಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಸ್ವದೇಶ್ ಸೇವಾ ಸಂಸ್ಥಾದ ಪ್ರತಿನಿಧಿ ರಾಹುಲ್ ಸಿಂಗ್, ಕರ್ನಾಟಕದ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ನಿರ್ಬಂಧಿತ ಹಾಗೂ ಶೆಡ್ಯೂಲ್ ಎಚ್ ವಿಭಾಗಕ್ಕೆ ಸೇರಿದ ಔಷಧಗಳನ್ನು ಮಾರಾಟ ಮಾಡುತ್ತಿರುವುದರ ವಿರುದ್ಧ ದೂರು ನೀಡಿದ್ದರು.

ಕಾನೂನು ಮತ್ತು ಎಫ್‍ಡಿಎ ನಿಯಮಗಳ ಪ್ರಕಾರ ಈ ಔಷಧಗಳನ್ನು ನೋಂದಾಯಿತ ವೈದ್ಯರ ಮೌಲಿಕ ಪ್ರಿಸ್ಕ್ರಿಪ್ಷನ್ ಇಲ್ಲದೆ ನೇರವಾಗಿ ರೋಗಿಗಳಿಗೆ ಮಾರಾಟ ಮಾಡುವಂತಿಲ್ಲ.[ಔಷಧಿ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ತಡೆ]

Swadesh Seva Santha filed a complaint against Myra Medicine

ಮೈರಾ ಮೆಡಿಸಿನ್ಸ್ ಸಂಸ್ಥೆಯನ್ನು ಸಾಕ್ಷ್ಯದೊಂದಿಗೆ ಸಿಲುಕಿಸಲು ಎನ್‍ಜಿಒ ಹಲವು ಆರ್ಡರ್ ಗಳನ್ನು ಆಪ್ ಮೂಲಕ ನೀಡಿತು. ನಿರ್ಬಂಧಿತ ಔಷಧಗಳಾದ ಕೊರೆಕ್ಸ್, ಶೆಡ್ಯೂಲ್ ಎಚ್ ಔಷಧಗಳಾದ ಮೊಕ್ಸಿಕೈಂಡ್ ಸಿವಿ 625ಎಂಜಿ, ಜಲ್ರಾ ಎಂ 50/500ಎಂಜಿ, ಡಾವೊನಿಲ್ 5ಎಂಜಿ ಮತ್ತು ನ್ಯೂರೊಕೈಂಡ್ 500ಎಂಸಿಜಿ ಒಳಗೊಂಡು ಹಲವು ಔಷಧಗಳನ್ನು ವೈದ್ಯರ ಮಾರ್ಗದರ್ಶನವಿಲ್ಲದೆ ಪೂರೈಸಿತು.

ಔಷಧಗಳು ಮತ್ತು ಪ್ರಸಾಧನಗಳ ಕಾಯ್ದೆ 1940, ಔಷಧಗಳು ಮತ್ತು ಪ್ರಸಾಧನಗಳ ನಿಯಮಗಳು 1945 ಮತ್ತು ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೊಟ್ರೊಪಿಕ್ ಸಬ್‍ಸ್ಟೆನ್ಸಸ್ ಆಕ್ಟ್, 1985ರ ಅನ್ವಯ ಅಂತಹ ನಿರ್ಬಂಧಿತ ಔಷಧಗಳು ಮತ್ತು ಶೆಡ್ಯೂಲ್ ಎಚ್ ಔಷಧಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
NGO, Swadesh Seva Santha filed a complaint against Myra Medicine for allegedly selling banned medicines in Karnataka.. Myra Medicine, a startup based in Bengaluru, delivers medicines to customers’ doorsteps at a 15% discount.
Please Wait while comments are loading...