ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11.83 ಕೋಟಿ ರು ಲಾಭಗಳಿಕೆ ಮಾಡಿದ ಸುಕೋ ಬ್ಯಾಂಕ್

By ರೋಹಿಣಿ ಬಳ್ಳಾರಿ
|
Google Oneindia Kannada News

ಬಳ್ಳಾರಿ, ಏಪ್ರಿಲ್ 02: ಸುಕೋ ಬ್ಯಾಂಕ್ ಒಟ್ಟು 1346 ಕೋಟಿ ರೂಪಾಯಿ ವ್ಯವಹಾರ ನಡೆಸಿ 11.83 ಕೋಟಿ ರೂಪಾಯಿ ಲಾಭಗಳಿಕೆ ಮಾಡಿದೆ ಎಂದು ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2020-21ರ ಆರ್ಥಿಕ ಸಾಲಿನಲ್ಲಿ ಬ್ಯಾಂಕ್ ಒಟ್ಟು 858 ಕೋಟಿ ರೂಪಾಯಿ ಠೇವಣಿ ಸಂಗ್ರಹ ಮಾಡಿ, 488 ಕೋಟಿ ರೂಪಾಯಿಗಳ ಸಾಲ ನೀಡಿ ಒಟ್ಟು 11.83 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದರು.

ಆದಾಯ ತೆರಿಗೆ ಇಲಾಖೆಗೆ 2.47 ಕೋಟಿ ರೂಪಾಯಿ ಮುಂಗಡ ತೆರಿಗೆ ಪಾವತಿಸಿದ ನಂತರ ಬ್ಯಾಂಕ್ 3.35 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದ್ದು, ಷೇರು ಬಂಡವಾಳಗಾರರಿಗೆ ಶೇ. 9 ರಷ್ಟು ಡಿವಿಡೆಂಡ್ (ಲಾಭಾಂಶ) ನೀಡಲು ಸರ್ವ ಸದಸ್ಯರ ಸಭೆಗೆ ಶಿಫಾರಸ್ಸು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸುಕೋ ಬ್ಯಾಂಕ್‍ನ 28 ಶಾಖೆಗಳಲ್ಲೂ ಏಪ್ರಿಲ್ ಕೊನೆಯ ವಾರದಿಂದ ಸ್ವತಂತ್ರವಾದ ಐಎಫ್‍ಎಸಿ ಸಂಖ್ಯೆಯನ್ನು ದೈನಂದಿನ ವ್ಯವಹಾರದಲ್ಲಿ ಬಳಕೆ ಮಾಡಿಕೊಳ್ಳಲು ತಂತ್ರಜ್ಞಾನದ ಉನ್ನತೀಕರಣ ಸಿದ್ಧತೆ ನಡೆದಿದೆ. ಸ್ವತಂತ್ರವಾದ ಐಎಫ್‍ಎಸಿ ಸಂಖ್ಯೆಯ ಬಳಕೆಯಿಂದಾಗಿ ಗ್ರಾಹಕರು ತ್ವರಿತವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದರು.

SUCO Bank achieves Rs 11.83 Cr profit in FY 2020-21

ಬ್ಯಾಂಕ್‍ನ ವ್ಯವಹಾರವನ್ನು ವಿಸ್ತರಿಸುವ ಹಿನ್ನಲೆಯಲ್ಲಿ ಕನೆಕ್ಟ್ @ ಸುಕೋ ಬ್ಯಾಂಕ್' ಹೊಸ ಪರಿಕಲ್ಪನೆಯನ್ನು ಸಹಕಾರಿ ಕ್ಷೇತ್ರದಲ್ಲಿ ಪ್ರಾರಂಭಿಸಿ ಅನೇಕರಿಗೆ ಸ್ವಾವಲಂಭನೆಯ ಬದುಕನ್ನು ಕಲ್ಪಿಸಲಾಗಿದೆ.

ಸ್ಮಾರ್ಟ್‍ಅಪ್ ಟು ಸೆಲ್ಫ್ ಎಂಪ್ಲಾಯ್ಮೆಂಟ್' ವಿಶೇಷ ಸಾಲ ಯೋಜನೆ ಅಡಿಯಲ್ಲಿ ಮೂರು ವಿಶೇಷ ಸ್ಮಾರ್ಟ್‍ಅಪ್ ಕಂಪನಿಗಳ ಜೊತೆ ಬ್ಯಾಂಕ್ ಒಪ್ಪಂದ ಮಾಡಿಕೊಂಡು ಫ್ರಾಂಚೈಸಿ ಪ್ರಾರಂಭಿಸಲು ನವ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ತಿಳಿಸಿದರು.

English summary
Karnataka based SUCO Bank achieves Rs 11.83 Cr profit and Rs 1346 Crore Transaction during FY 2020-21 said President Mohit Maski.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X