ಕ್ಷಣಗಳಲ್ಲಿ ಕೊಚ್ಚಿಹೋದ ಷೇರು ಹೂಡಿಕೆದಾರರ 2.24 ಲಕ್ಷ ಕೋಟಿ

Posted By:
Subscribe to Oneindia Kannada

ಶುಕ್ರವಾರ ಬೆಳ್ಳಂ ಬೆಳಗ್ಗೆ ಷೇರು ಮಾರುಕಟ್ಟೆ ಭಾರೀ ಮಟ್ಟದಲ್ಲಿ ಕುಸಿತ ಕಂಡಿತು. ಸೆನ್ಸೆಕ್ಸ್ ಐನೂರಕ್ಕೂ ಹೆಚ್ಚು ಅಂಶಗಳು ನೆಲ ಕಚ್ಚಿದರೆ, ನಿಫ್ಟಿ ನೂರೈವತ್ತಕ್ಕೂ ಹೆಚ್ಚು ಅಂಶ ಕಳೆದುಕೊಂಡಿತು. ಕಣ್ಣು ಮುಚ್ಚಿ ತೆಗೆಯುವುದರೊಳಗೆ ಹೂಡಿಕೆದಾರರ 2.24 ಲಕ್ಷ ಕೋಟಿ ರುಪಾಯಿ ಕೊಚ್ಚಿ ಹೋಯಿತು. ಇನ್ನು ತಜ್ಞರ ಅಭಿಪ್ರಾಯ ಗಮನಿಸಿದರೆ ಶೇ ಹತ್ತರಿಂದ ಹದಿನೈದರಷ್ಟು ಕುಸಿತದ ಸಾಧ್ಯತೆ ಇದೆ ಎನ್ನುತ್ತಾರೆ.

ಷೇರುಪೇಟೆ: ಸೆಕೆಂಡುಗಳಲ್ಲಿ 5 ಲಕ್ಷ ಕೋಟಿ ಖಲಾಸ್!

ಎಲ್ಲಿಯವರೆಗೆ ಈ ಕುಸಿತ ಮುಂದುವರಿಯುತ್ತದೋ ಎಂದು ಕಾದಿದ್ದು, ಸ್ವಲ್ಪ ತಾಳ್ಮೆಯಿಂದ ಒಳ್ಳೆ ಷೇರುಗಳನ್ನು ಖರೀದಿಸಲು ಸಕಾಲ ಎಂಬ ಸಲಹೆ ಕೂಡ ನೀಡುತ್ತಾರೆ. ಸೆನ್ಸೆಕ್ಸ್ ನ ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ, ಐಟಿಸಿ, ಡಾ ರೆಡ್ಡೀಸ್ ಲ್ಯಾಬ್ಸ್, ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಕುಸಿತ ಕಂಡವು. ಒಂದು ಹಂತದಲ್ಲಿ ಸೆನ್ಸೆಕ್ಸ್ ನ ಎಲ್ಲ ಷೇರುಗಳು ಕೆಂಪಾದವು. ಅರ್ಥಾತ್ ಕುಸಿದವು.

Stock market investors lose Rs 2.24 lakh crore in seconds

ಜಾಗತಿಕ ಮಟ್ಟದಲ್ಲಿಯೇ ಷೇರು ಮಾರುಕಟ್ಟೆಗಳು ಧಡಾಲನೆ ಬಿದ್ದಿರುವುದರಿಂದ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿನ ಪ್ರಭಾವ ಎಂಬುದು ಗೋಚರಿಸುತ್ತಿದೆ. ಅಮೆರಿಕದ ಡೌ ಜೋನ್ಸ್ ಸಾವಿರಕ್ಕೂ ಹೆಚ್ಚು ಅಂಶ, ನಾಸ್ಡಾಕ್ ಇನ್ನೂರೈವತ್ತಕ್ಕೂ ಹೆಚ್ಚು ಅಂಶ ಗುರುವಾರ ನೆಲ ಕಚ್ಚಿದೆ. ಒಟ್ಟಾರೆ ಹೂಡಿಕೆದಾರರು ಎಚ್ಚರ ವಹಿಸುವುದು ಅಗತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BSE had fallen over 550 points in early trade on Friday. The Nifty 50 index fell 166.55 points, to 10,410.30. The index hit sub-10,400 level in the early trade.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ