ಮುಂದೆ ಪೆಟ್ರೋಲ್, ರಿಯಲ್ ಎಸ್ಟೇಟ್ ಗಳೂ ಜಿಎಸ್ ಟಿಗೆ: ಜೇಟ್ಲಿ

ಮುಂಬರುವ ದಿನಗಳಲ್ಲಿ ಪೆಟ್ರೋಲ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಜಿಎಸ್ ಟಿ ವ್ಯಾಪ್ತಿಗೆ ತರಲಾಗುತ್ತದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆ. ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೆ.

ನವದೆಹಲಿ, ಜೂನ್ 29: ಮುಂಬರುವ ದಿನಗಳಲ್ಲಿ ಪೆಟ್ರೋಲ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರವನ್ನೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯಾಪ್ತಿಯೊಳಗೆ ತರಲಾಗುವುದು ಎಂದು ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜುಲೈ 1ರಿಂದ ದೇಶಾದ್ಯಂತ ಜಿಎಸ್ ಟಿ ತೆರಿಗೆ ವ್ಯವಸ್ಥೆಯು ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

Sooner or later states will have to bring petroleum under GST, says Arun Jaitley

''ಸದ್ಯದ ಮಟ್ಟಿಗೆ ಜಿಎಸ್ ಟಿ ಕೊಂಚ ಗೊಂದಲಗಳನ್ನು ಉಂಟು ಮಾಡಬಹುದು. ಆದರೆ, ಅದರ ಪರಿಣಾಮದಿಂದ ಜನರಿಗೆ ಒಳಿತೇ ಆಗುತ್ತದೆ. ಒಂದು ಹಂತಕ್ಕೆ ಸಾಗಿ ಹೋದ ನಂತರ ಜಿಎಸ್ ಟಿ ಸ್ಥಿರತೆ ಕಂಡುಕೊಳ್ಳುತ್ತದೆ. ಆಗ ಮಾತ್ರ ಜನರಿಗೆ ಜನರು ಅದರ ಲಾಭಗಳನ್ನು ಪಡೆಯಲು ಸಾಧ್ಯ'' ಎಂದು ಅವರು ತಿಳಿಸಿದರು.

ಇದೇ ವೇಳೆ, ಈಗ ದೇಶದ ಎಲ್ಲಾ ಸರಕು ಮತ್ತು ಸೇವೆಗಳನ್ನು ನಾಲ್ಕು ತೆರಿಗೆ ಸ್ಲಾಬ್ ಗಳಲ್ಲಿ ವರ್ಗೀಕರಣ ಮಾಡಲಾಗಿದೆ. ಶೇ. 5, 12, 18 ಹಾಗೂ 28ರ ಅಡಿಯಲ್ಲಿ ಸರಕು ಮತ್ತು ಸೇವೆಗಳನ್ನು ವರ್ಗೀರಿಸಲಾಗಿದೆ. ಹೀಗೆ ಮಾಡುವುದು ಅನಿವಾರ್ಯವಾಗಿತ್ತು. ಇಲ್ಲವಾದರೆ, ಅದು ಹಣದುಬ್ಬರಕ್ಕೆ ಕಾರಣವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಸದ್ಯದ ಮಟ್ಟಿಗೆ ಜಿಎಸ್ ಟಿ ಅಡಿಯಲ್ಲಿ ತೆರಿಗೆಗೊಳಪಡುವ ಹಾಗೂ ವಿನಾಯ್ತಿ ಪಡೆದಿರುವ ಪದಾರ್ಥಗಳ, ಸೇವೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಆ ಪಟ್ಟಿಯಲ್ಲಿ ಪೆಟ್ರೋಲ್ ಹಾಗೂ ರಿಯಲ್ ಎಸ್ಟೇಟ್ ಸೇರಿಸಿಲ್ಲ.

ಜನರ ಪಾಲಿಗೆ ದುಬಾರಿಯೆನಿಸಿರುವ ಈ ಎರಡು ಕ್ಷೇತ್ರಗಳನ್ನು ಜಿಎಸ್ ಟಿಯಿಂದ ಹೊರಗಿಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗಾಗಲೇ ಆಕ್ಷೇಪಗಳು ಕೇಳಿಬಂದಿದ್ದವು.ಈ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಜೇಟ್ಲಿ ಹೀಗೆ ಉತ್ತರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+