ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಇ ಕಾಮರ್ಸ್ ಕ್ಷೇತ್ರಕ್ಕೆ ಬೃಹತ್ ಬಂಡವಾಳ

|
Google Oneindia Kannada News

ನವದೆಹಲಿ, ಅ. 29: ಭಾರತದ ಇ ಕಾಮರ್ಸ್ ವ್ಯವಹಾರದಲ್ಲಿ ಹೆಸರು ಗಳಿಸಿರುವ ಸ್ನಾಪ್ ಡೀಲ್ ಸಂಸ್ಥೆಯಲ್ಲಿ ಜಪಾನ್ ನ ಸಾಫ್ಟ್ ಬ್ಯಾಂಕ್ 627 ಮಿಲಿಯನ್ ಡಾಲರ್ ತೊಡಗಿಸಲಿದೆ.

ಇ ಕಾಮರ್ಸ್ ವ್ಯವಹಾರದಲ್ಲಿ ಇದೊಂದು ಬೃಹತ್ ಒಪ್ಪಂದವಾಗಿದ್ದು ಸುಮಾರು 3,600 ಕೋಟಿ ರೂ. ಹೂಡಿಕೆ ನಿರ್ಧರಿತವಾಗಿದೆ. ಮುಂಬರುವ ದಿನಗಳಲ್ಲಿ ಮೊಬೈಲ್ ತಂತ್ರಜ್ಞಾನಕ್ಕೆ ಸಂಭಂಧಿಸಿದ ಮೂರ್ನಾಲ್ಕು ಬೃಹತ್ ಖರೀದಿಗೂ ಸ್ನಾಪ್ ಡೀಲ್ ತೀರ್ಮಾನ ತೆಗೆದುಕೊಂಡಿದೆ. ಈ ಬಗ್ಗೆ ವಿಶೇಷ ಘಟಕವೊಂದನ್ನು ತೆರಯಲು ಕಂಪನಿ ಯೋಜನೆ ಹಾಕಿಕೊಂಡಿದೆ.[ಫ್ಲಿಪ್ ಕಾರ್ಟಿಗೆ ಸಾವಿರ ಕೋಟಿ ದಂಡ! ಸುಳ್ಳೇ ಸುಳ್ಳು]

snapdeal

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಸಾಫ್ಟ್ ಬ್ಯಾಂಕ್ ಅಧ್ಯಕ್ಷ ಮಸಾಯೋಶಿ ಸನ್, ನಾವು ಭಾರತದಲ್ಲಿ ಹೂಡಿಕೆ ಮಾಡಲು ಸಿದ್ಧರಿದ್ದೇವೆ. ಮುಂದಿನ ದಶಕದಲ್ಲಿ ಭಾರತದ ಎಲ್ಲ ವಿಭಾಗಗಳು ಅಭಿವೃದ್ಧಿ ಪಥದಲ್ಲಿ ಸಾಗುವ ವಿಶ್ವಾಸ ನಮಗಿದೆ. ಹಾಗಾಗಿ ಇಷ್ಟು ದೊಡ್ಡ ಮೊತ್ತದ ಹಣ ಹೂಡಿಕೆಗೆ ತೀರ್ಮಾನಿಸಿದ್ದೇವೆ. ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಹೂಡಿಕೆ ಮಾಡಲು ಯಾವ ಹಿಂಜರಿಕೆ ನಮಗಿಲ್ಲ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಭಾರತ ಮೂಲದ ಇ ಕಾಮರ್ಸ್ ಸಂಸ್ಥೆ ಫ್ಲಿಫ್ ಕಾರ್ಟ್ ಒಂದು ಮಿಲಿಯನ್ ಡಾಲರ್ ಹೂಡಿಕೆ ಹೆಚ್ಚಳ ಮಾಡುತ್ತಿದ್ದೇವೆ ಎಂದು ಹೇಳಿತ್ತು. ಅಲ್ಲದೇ ಅಮೆರಿಕ ಮೂಲದ ಅಮೆಜಾನ್ ಸಹ 2 ಮಿಲಿಯನ್ ಡಾಲರ್ ಬಂಡವಾಳ ಹೂಡುತ್ತಿದ್ದೇವೆ ಎಂದು ಎಂದು ತಿಳಿಸಿತ್ತು.

ಸ್ನಾಪ್ ಡೀಲ್ ಭಾರತದದಲ್ಲಿ ವೇಗವಾಗಿ ಬೆಳೆಯುತ್ತಿರುವ ಇ ಕಾಮರ್ಸ್ ಸಂಸ್ಥೆಯಾಗಿದೆ. ಈಗಾಗಲೇ 25 ಲಕ್ಷಕ್ಕಿಂತ ಹೆಚ್ಚು ರಜಿಸ್ಟರ್ ಮಾಡಿಕೊಂಡಿರಯವ ಗ್ರಾಹಕರು ಮತ್ತು 50 ಸಾವಿರ ಉದ್ದಿಮೆದಾರರನ್ನು ಹೊಂದಿದೆ.[ಇ ಕಾಮರ್ಸ್ ಕ್ಷೇತ್ರದವರಿಗೆ ಎಫ್ ಡಿಐ ಭಯ ಬೇಡ]

ಭಾರತದಾದ್ಯಂತ ಸ್ನಾಪ್ ಡೀಲ್ ತನ್ನ ಶಾಖೆಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಬೆಂಗಳೂರಲ್ಲಿ ವ್ಯವಹಾರ ನಡೆಸುತ್ತಿದ್ದು ಸದ್ಯದಲ್ಲಿಯೇ ಹೈದ್ರಾಬಾದ್ ಮತ್ತು ಪುಣೆಗೂ ವ್ಯಾಪಾರ ವಿಸ್ತರಿಸಲಿದೆ.

ಸಿಬ್ಬಂದಿ ಸಂಖ್ಯೆಯಲ್ಲೂ ಹೆಚ್ಚಳ ಮಾಡಿಕೊಳ್ಳಲಿದ್ದೇವೆ. 15 ನಗರಗಳ 40 ಕೇಂದ್ರಗಳಲ್ಲಿ ಈಗಾಗಲೇ ಸೇವೆ ಲಭ್ಯವಿದೆ. ಇನ್ನು ಹೆಚ್ಚಿನ ವಹಿವಾಟು ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಸ್ನಾಪ್ ಡೀಲ್ ಸಿಇಒ ಕುನಾಲ್ ಬಾಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಮೋದಿ ಭೇಟಿಯ ನಂತರ ವಿದೇಶಿ ಬ್ಯಾಂಕ್ ಒಂದು ಬೃಹತ್ ಪ್ರಮಾಣದ ಬಂಡವಾಳ ತೊಡಗಿಸಲು ಸಿದ್ಧವಾಗಿದೆ ಎಂದೇ ಹೇಳಬಹುದು.

English summary
India's e-commerce space, Snapdeal will raise $627 million from Japan's SoftBank, a major investor in the global internet space. This will make SoftBank the largest investor in Snapdeal, a company statement said. The e-commerce major also announced that it will look at three-four acquisitions in the coming few months in mobile technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X