ಏರ್ಟೆಲ್ -ಕಾರ್ಬನ್ ನಿಂದ ಕಡಿಮೆ ವೆಚ್ಚದ ಸ್ಮಾರ್ಟ್ ಫೋನ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 17: ಕಡಿಮೆ ವೆಚ್ಚದ ಸ್ಮಾರ್ಟ್ ಫೋನ್ (2 ಸಾವಿರ ರೂಪಾಯಿಯೊಳಗೆ) ಕ್ಷೇತ್ರದಲ್ಲಿ ಜಿಯೋಗೆ ಪೈಪೋಟಿ ನೀಡಲು ಭಾರತದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ಮುಂದಾಗಿದೆ.

ಕಾರ್ಬನ್ A1 Indian ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

ದೇಶಿ ಮಾರುಕಟ್ಟೆಯ ಅಗ್ರಗಣ್ಯ ಸಂಸ್ಥೆ ಕಾರ್ಬನ್ ಜತೆ ಒಪ್ಪಂದ ಮಾಡಿಕೊಂಡಿರುವ ಭಾರ್ತಿ ಏರ್ ಟೆಲ್ ಎರಡು ಹೊಸ 4ಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. 4ಜಿ ಸ್ಮಾರ್ಟ್ಫೋನ್ ಎ40 ಇಂಡಿಯನ್ ಫೋನ್ ಬಿಡುಗಡೆ ಮಾಡಿ ಯಶಸ್ಸು ಕಂಡ ಬಳಿಕ ಇನ್ನಷ್ಟು ಸ್ಮಾರ್ಟ್ ಫೋನ್ ಗಳನ್ನು 'ನನ್ನ ಮೊದಲ ಸ್ಮಾರ್ಟ್ ಫೋನ್' ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಕಾರ್ಬನ್ A41 ಪವರ್ ಸ್ಮಾರ್ಟ್ ಫೋನ್ ಮಾಹಿತಿಗೆ ಕ್ಲಿಕ್ ಮಾಡಿ

Smartphones Under Rs. 2,000: Airtel, Karbonn Launch A1 Indian, A41 Power

ಎ 1 ಇಂಡಿಯನ್ ಮೊಬೈಲ್ ಎಂ ಆರ್ ಪಿ ಬೆಲೆ 4,390 ರೂಪಾಯಿಯಾಗಿದ್ದು, ಇಫೆಕ್ಟಿವ್ ಬೆಲೆ 1,799 ರೂಪಾಯಿಯಾಗಿದೆ. ಎ41 ಪವರ್ ಮೊಬೈಲ್ ಎಂ ಆರ್ ಪಿ ಬೆಲೆ 4290 ರೂಪಾಯಿಯಾಗಿದ್ದು, 1849 ರೂಪಾಯಿಗೆ ಸಿಗ್ತಿದೆ. ಎರಡೂ ಸ್ಮಾರ್ಟ್ಫೋನ್ ಗೆ 4 ಇಂಚಿನ ಸ್ಕ್ರೀನ್ ನೀಡಲಾಗಿದೆ.

ಪ್ರೀಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ನಿಂದ ಭರ್ಜರಿ ಆಫರ್ !

ಡ್ಯುಯೆಲ್ ಸಿಮ್ ನ ಈ ಎರಡೂ ಮೊಬೈಲ್ 1 ಜಿಬಿ RAM ಹೊಂದಿದೆ. ಈ ಎರಡು ಮೊಬೈಲ್ ಖರೀದಿ ಮಾಡಿಗ್ರಾಹಕರು 169 ರೂಪಾಯಿ ರೀಚಾರ್ಜ್ ಮಾಡಬೇಕಾಗುತ್ತದೆ. ಅನಿಯಮಿತ ಕರೆ, 5ಜಿಬಿ ಡೇಟಾ ಲಭ್ಯವಾಗಲಿದೆ. ವ್ಯಾಲಿಡಿಸಿ 28 ದಿನಗಳ ತನಕ ಇರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Airtel and Vodafone have followed up with their own Jio Phone rivals. After launching Karbonn A40 Indian, Airtel has launched new devices under its 'Mera Pehla Smartphone' initiative, in partnership with domestic handset maker Karbonn.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ