Gold Price on April 24: ಎರಡನೇ ದಿನವು ಚಿನ್ನದ ಬೆಲೆ ಮತ್ತೆ ಕುಸಿತ: ಇಂದಿನ ಚಿನ್ನ-ಬೆಳ್ಳಿ ದರಪಟ್ಟಿ

ಬೆಂಗಳೂರು, ಏಪ್ರಿಲ್ 24: ಚಿನ್ನದ ದರದಲ್ಲಿ ಭಾರೀ ಬದಲಾವಣೆಗೆ ಸಾಕ್ಷಿಯಾದ ಗ್ರಾಹಕರಿಗೆ ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ. ಅಂದರೆ ಚಿನ್ನದ ದರ 1 ಲಕ್ಷ ರೂಪಾಯಿ ಏರಿಕೆ ಬಳಿಕ ಸತತ ಎರಡನೇ ದಿನವು ಇಳಿಕೆ ಆಗಿದೆ. ಬುಧವಾರ ಇಳಿಕೆ ಕಂಡಿದ್ದ ಚಿನ್ನ ಬೆಲೆಯಲ್ಲಿ ಗುರುವಾರವು ಕುಸಿತವಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲಿ ಸಹ ಏಪ್ರಿಲ್ 24ರಂದು ಬಂಗಾರದ ಬೆಲೆಯಲ್ಲಿ ಇಳಿಕೆ ಆಗಿದೆ ಎಂದು ವರದಿ ಆಗಿದೆ.

ಬೆಲೆ ಗಗನಕ್ಕೆ ಏರುತ್ತಿದ್ದಂತೆ ಲಾಭ ಪಡೆಯುವ ಉದ್ದೇಶದಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರು ಚಿನ್ನ ಮಾರಾಟ ಆರಂಭಿಸಿದ್ದಾರೆ. ಹೀಗಾಗಿ ಸತತ ಎರಡನೇ ದಿನವು ಚಿನ್ನದ ಬೆಲೆಯು ಇಳಿಮುಖವಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 90,050 ರೂಪಾಯಿಗೆ ಇಳಿಕೆ ಆಗಿದೆ. ಈ ಚಿನ್ನದಲ್ಲಿ 100 ರೂಪಾಯಿ ಇಳಿಕೆ ಆಗಿದೆ.

Slight Decline in Gold Prices on April 24 What is the Gold Rate Today

ಇಂದು 24ಕ್ಯಾರಟ್ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಇಳಿಕೆ ಆಗಿದೆ. ಮಾರುಕಟ್ಟೆಯಲ್ಲಿ ಈ ಚಿನ್ನದ 10 ಗ್ರಾಂ ದರವು 98,240 ರೂಪಾಯಿ ಇದೆ. ವೇಸ್ಟೇಜ್, ತೆರಿಗೆ, ಇತರ ಸುಂಕ ಸೇರಿ ಚಿನ್ನದ ಬೆಲೆಯಲ್ಲಿ ನಗರದಿಂದ ನಗರಗಳಿಗೆ ಬದಲಾವಣೆ ಆಗಲಿದೆ. ಇದನ್ನು ಗಮನಿಸಿ ಗ್ರಾಹಕರು ಚಿನ್ನ ಖರೀದಿಸಬೇಕಿದೆ.

ಇನ್ನು ಬೆಳ್ಳಿಯ ದರವು 100 ಗ್ರಾಂ ಬೆಲೆ 10,100 ರೂಪಾಯಿ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಬಂಗಾರದ ಬೆಲೆ 10 ಗ್ರಾಂ 90,050 ರೂಪಾಯಿ ಇದೆ. ಬೆಂಗಳೂರಲ್ಲಿ 24 ಕ್ಯಾರೆಟ್ ಗೋಲ್ಡ್ ದರ ಇಂದು 98,355 ರೂಪಾಯಿ ಕಂಡಿದೆ. ಹಿಂದೂಗಳು ಹಾಗೂ ಜೈನರು ಆಚರಿಸುವ ಅಕ್ಷಯ ತೃತೀಯಾ ಈ ಬಾರಿ ಏಪ್ರಿಲ್ 30 ರಂದು ಆಚರಿಸಲಾಗುತ್ತದೆ. ಅಂದು ಚಿನ್ನ ಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತಿತ್ತು. ಆದರೆ ದರ ಒಂದು ಲಕ್ಷ ರೂ. ತಲುಪಿದ ಈ ಹಿನ್ನೆಲೆಯಲ್ಲಿ ಈ ಬಾರಿ ಖರೀದಿ ಪ್ರಮಾಣ ಹೇಗಿರುತ್ತದೋ ಕಾದು ನೋಡಬೇಕು.

Take a Poll

ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ದರ (22 ಕ್ಯಾರಟ್ 10 ಗ್ರಾಂ)

ಬೆಂಗಳೂರು: 90,050 ರೂಪಾಯಿ

ದೆಹಲಿ: 90,200 ರೂಪಾಯಿ

ಕೇರಳ: 90,050 ರೂಪಾಯಿ

ಮುಂಬೈ: 90,050 ರೂಪಾಯಿ

ಜೈಪುರ: 90,200 ರೂಪಾಯಿ

ಉತ್ತರ ಪ್ರದೇಶ: 91,150 ರೂಪಾಯಿ

ಕೋಲ್ಕತಾ: 90,050 ರೂಪಾಯಿ

ಅಹ್ಮದಾಬಾದ್: 90,100 ರೂಪಾಯಿ

ಭುವನೇಶ್ವರ್: 90,050 ರೂಪಾಯಿ

ಮಹಾರಾಷ್ಟ್ರ: 90,900 ರೂಪಾಯಿ

ನಗರವಾರು 100 ಗ್ರಾಂ ಬೆಳ್ಳಿ ದರ ವಿವರ

ಬೆಂಗಳೂರು : 10,100 ರೂಪಾಯಿ

ದೆಹಲಿ : 10,100 ರೂಪಾಯಿ

ಜೈಪುರ : 10,100 ರೂಪಾಯಿ

ಮುಂಬೈ : 10,100 ರೂಪಾಯಿ

ಕೇರಳ : 11,100 ರೂಪಾಯಿ

ಪುಣೆ : 10,100 ರೂಪಾಯಿ

ಕೋಲ್ಕತಾ: 10,100 ರೂಪಾಯಿ

ಲಕ್ನೋ : 10,100 ರೂಪಾಯಿ

ಅಹ್ಮದಾಬಾದ್ : 10,100 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+