ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ರಿಟೇಲ್‌ನಲ್ಲಿ 7,500 ಕೋಟಿ ಹೂಡಿಕೆ ಮಾಡಲಿರುವ ಸಿಲ್ವರ್ ಲೇಕ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ರಿಲಯನ್ಸ್ ಜಿಯೋ ಮಾದರಿಯಲ್ಲಿ ತನ್ನ ರೀಟೆಲ್ ಕ್ಷೇತ್ರಕ್ಕೂ ವಿದೇಶಿ ಹೂಡಿಕೆದಾರರನ್ನು ಸೆಳೆಯಲು ರಿಲಯನ್ಸ್ ಪ್ರಯತ್ನಿಸುತ್ತಿದ್ದು, ಖಾಸಗಿ ಇಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಪಾರ್ಟ್‌ನರ್ಸ್ 7,500 ಕೋಟಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ನ ಚಿಲ್ಲರೆ ವಿಭಾಗದಲ್ಲಿ ಶೇಕಡಾ 1.75% ಪಾಲನ್ನು ಹೂಡಿಕೆ ಮಾಡಲಿದೆ.

ಹೂಡಿಕೆ ರಿಲಯನ್ಸ್ ರಿಟೇಲ್ ಅನ್ನು ಪೂರ್ವ-ಹಣದ ಇಕ್ವಿಟಿ ಮೌಲ್ಯವಾದ 4.21 ಲಕ್ಷ ಕೋಟಿಗಳ ಮೌಲ್ಯದಲ್ಲಿರಿಸಿದೆ ಎಂದು ಆರ್ಐಎಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಜಿಯೋ ರೀತಿಯಲ್ಲಿ ರಿಟೇಲ್ ವ್ಯಾಪಾರಕ್ಕೂ ದೈತ್ಯ ಕಂಪನಿಗಳನ್ನ ಸೆಳೆಯಲು ರಿಲಯನ್ಸ್ ಯೋಜನೆಜಿಯೋ ರೀತಿಯಲ್ಲಿ ರಿಟೇಲ್ ವ್ಯಾಪಾರಕ್ಕೂ ದೈತ್ಯ ಕಂಪನಿಗಳನ್ನ ಸೆಳೆಯಲು ರಿಲಯನ್ಸ್ ಯೋಜನೆ

ಪ್ರಕಟಣೆಯ ನಂತರ, ಆರ್ಐಎಲ್ ಷೇರುಗಳು ಬಿಎಸ್ಇಯಲ್ಲಿ ಬೆಳಿಗ್ಗೆ 9.30 ಕ್ಕೆ ಶೇಕಡಾ 1.3 ನಷ್ಟು ಏರಿಕೆಗೊಂಡು 2,132 ಕೋಟಿಗೆ ತಲುಪಿದೆ. ವಿಶ್ವದ ಅತಿದೊಡ್ಡ ಟೆಕ್ ಹೂಡಿಕೆದಾರರಾದ ಸಿಲ್ವರ್ ಲೇಕ್ ಈ ಹಿಂದೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇಕಡಾ 2.08 ರಷ್ಟು ಪಾಲನ್ನು ಪಡೆದುಕೊಂಡಿದೆ.

Silver Lake To Invest Rs 7500 Crore In Reliance Retail

ಜಿಯೋ ಪ್ಲಾಟ್‌ಫಾರ್ಮ್‌ಗಳ ಎಲ್ಲಾ 13 ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಗೆ ಆರ್‌ಐಎಲ್ ಈ ಹಿಂದೆ ತನ್ನ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ಘಟಕದಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ನೀಡಿತ್ತು ಎಂದು ಮಿಂಟ್ ವರದಿಯೊಂದು ತಿಳಿಸಿದೆ.

ಈ ಹೂಡಿಕೆದಾರರಲ್ಲಿ ಫೇಸ್‌ಬುಕ್, ಗೂಗಲ್, ಕೆಕೆಆರ್, ಸಿಲ್ವರ್ ಲೇಕ್ ಮತ್ತು ಟಿಪಿಜಿ ಸೇರಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಆರ್‌ಐಎಲ್ ಒಟ್ಟು1.52 ಟ್ರಿಲಿಯನ್ ಮೊತ್ತವನ್ನು ತನ್ನ ಡಿಜಿಟಲ್ ಘಟಕವಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು ಶೇಕಡಾ 33 ರಷ್ಟು ಪಾಲನ್ನು ಪಡೆದುಕೊಂಡಿತು.

English summary
Private equity firm Silver Lake Partners will invest ₹7,500 crore in the retail arm of Reliance Industries Ltd (RIL) for a 1.75% stake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X