ತಲ್ಲಣಿಸಿತು ಮುಂಬೈ ಷೇರು ಮಾರುಕಟ್ಟೆ: 1600 ಅಂಶ ಕುಸಿತ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 9: ಬುಧವಾರ ಬೆಳಗ್ಗೆಯೇ ಭಾರತದ ಷೇರು ಮಾರುಕಟ್ಟೆ ತಲ್ಲಣಗೊಂಡಿದೆ. ಒಂದು ಕಡೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮುನ್ನಡೆ ಕಂಡಿರುವುದು, ಮತ್ತೊಂದು ಕಡೆ ಭಾರತದಲ್ಲಿ 500, 1000 ರುಪಾಯಿ ನೋಟುಗಳ ಚಲಾವಣೆ ಹಿಂಪಡೆದಿರುವ ನಿರ್ಧಾರಗಳು ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಬೆಳಗ್ಗೆ ವ್ಯವಹಾರ ಆರಂಭವಾದ ಕೆಲವೇ ಸಮಯದಲ್ಲಿ ಸೆನ್ಸೆಕ್ಸ್ 1,600 ಅಂಶಗಳ ಕುಸಿತ ಕಂಡರೆ, ನಿಫ್ಟಿ 470 ಅಂಶಗಳಷ್ಟು ಕುಸಿಯಿತು. 'ಹೌದು, ಇಂದಿನ ಕುಸಿತಕ್ಕೆ ಎರಡೂ ಕಾರಣ ಇದೆ. ಆದರೆ ಅಮೆರಿಕಾ ಚುನಾವಣೆ ಫಲಿತಾಂಶವೇ ಹೆಚ್ಚು ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದು ಮಾಡುವ ಘೋಷಣೆ ದೀರ್ಘಾವಧಿ ದೃಷ್ಟಿಯಿಂದ ಬಹಳ ಒಳ್ಳೆಯ ನಿರ್ಧಾರ. ಅದಕ್ಕೆ ಮಾರುಕಟ್ಟೆ ಪ್ರತಿಕ್ರಿಯೆ ಹೀಗಿದೆ ಅನ್ನೋ ಕಾರಣಕ್ಕೆ ಯೋಚನೆ ಮಾಡುವ ಅಗತ್ಯ ಇಲ್ಲ.

Kripal

'ನೋಟುಗಳನ್ನು ರದ್ದು ಮಾಡುವುದರಿಂದ ಹಣದ ಚಲಾವಣೆ ಕಡಿಮೆ ಆಗುತ್ತದೆ. ಇದರಿಂದ ಹಣದುಬ್ಬರದ ಪ್ರಮಾಣ ತಗ್ಗುತ್ತದೆ. ಆರ್ ಬಿಐ ಬಡ್ಡಿದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ದಿನದ ಕೊನೆಗೆ ಇದರಿಂದ ದೇಶಕ್ಕೆ ಹಾಗೂ ಜನಸಾಮಾನ್ಯರಿಗೇ ಅನುಕೂಲ. ಇದೊಂದು ನಿರ್ಧಾರದಿಂದ ಕಪ್ಪು ಹಣದ ಚಲಾವಣೆ ನಿಂತುಹೋಗುತ್ತೆ ಎಂದು ಭಾವಿಸಬೇಕಿಲ್ಲ. ಆದರೆ ಇದೊಂದು ಪ್ರಮುಖ ನಿರ್ಧಾರ ಅನ್ನುವ ಬಗ್ಗೆ ಎರಡು ಮಾತಿಲ್ಲ' ಎಂದು ಒನ್ ಇಂಡಿಯಾ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು ಷೇರು ದಲ್ಲಾಳಿ ಹಾಗೂ ಅಂಕಣಕಾರರಾದ ಕೆ.ಜಿ.ಕೃಪಾಲ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sensex falls 1600 points citing America presidential election result. And declaration by Prime minister Narendra to stop 500, 1000 rupee circulation is also have an impact, said by columnist K.G.Kripal.
Please Wait while comments are loading...