ಗಂಗ್ನಮ್ ಸ್ಟೈಲ್ ವಿಡಿಯೋ ಹಿಂದಿಕ್ಕಿ ವಿಶ್ವದಾಖಲೆ ಬರೆದ 'ಸೀ ಯು ಅಗೈನ್'

ಬೆಂಗಳೂರು, ಜುಲೈ 12: ಯೂಟ್ಯೂಬಿನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಅತಿ ಹೆಚ್ಚು ವೀಕ್ಷಣೆ ಪಡೆದ ದಾಖಲೆ ಹೊಂದಿದ್ದ 'ಗಂಗ್ನಮ್ ಸ್ಟೈಲ್' ವಿಡಿಯೋವನ್ನು ಫಾಸ್ಟ್ ಅಂಡ್ ಫ್ಯೂರಿಯಸ್ 7 ಸ್ಮರಣೆಯ 'ಸೀ ಯೂ ಅಗೈನ್' ವಿಡಿಯೋ ಹಿಂದಿಕ್ಕಿದೆ.

ಸಾಹಸಿ ನಟ ಪಾಲ್ ವಾಕರ್ ಸದಾ ಸ್ಮರಣೀಯ

ಗಂಗ್ನಮ್ ಸ್ಟೈಲ್ ನ ಹಾಡು, ಕುಣಿತದ ಮೂಲಕ ಸೈ ಚೆಡೆಲಿಕ್ ಅವರು ಹೊಸ ಇತಿಹಾಸ ನಿರ್ಮಿಸಿ ಐದಾರು ವರ್ಷಗಳು ಕಳೆದಿದೆ.

See You Again' tops 'Gangnam Style' as most-watched YouTube video

ಯೂಟ್ಯೂಬಿನಲ್ಲಿ ಕೊರಿಯಾ ಮೂಲದ ಈ ಗಾಯಕನ ವಿಡಿಯೋ 2,894,993,739 ವೀಕ್ಷಣೆ ಪಡೆದು ವಿಶ್ವದಾಖಲೆ ನಿರ್ಮಿಸಿತ್ತು. ಆದರೆ, ಈಗ ಈ ದಾಖಲೆಯನ್ನು ಫಾಸ್ಟ್ ಅಂಡ್ ಫ್ಯೂರಿಯಸ್ 7 ಚಿತ್ರಕ್ಕಾಗಿ ನಿರ್ಮಿಸಿದ ಸ್ಮರಣೆ ವಿಡಿಯೋ ಮುರಿದಿದೆ.

ನಟ ಪಾಲ್ ವಾಕರ್ ಅವರ ದುರಂತ ಸಾವಿನ ನೋವಿನಲ್ಲಿ ಅಭಿಮಾನಿಗಳು ಈ ವಿಡಿಯೋವನ್ನು ಹೆಚ್ಚೆಚ್ಚು ನೋಡಿದ್ದಾರೆ. ಹೀಗಾಗಿ ಎರಡು ವರ್ಷಗಳಲ್ಲಿ ಈ ರೀತಿ ಹೊಸ ದಾಖಲೆ ಬರೆಯಲು ಸಾಧ್ಯವಾಗಿದೆ. ವಿಜ್ ಖಲೀಫಾ ಅವರ 'ಸೀ ಯು ಅಗೈನ್' ವಿಡಿಯೋ 2,900,792,674 ಬಾರಿ ವೀಕ್ಷಣೆ ಪಡೆದುಕೊಂಡಿದೆ.


ಉಳಿದಂತೆ, ಲೂಯಿಸ್ ಫೊನ್ಸಿ ಅವರ 'ಡೆಸ್ಪಾಸಿಟೋ' ಜನವರಿ ತಿಂಗಳ ಎಣಿಕೆಯಂತೆ 2,489,526,081 ವೀಕ್ಷಣೆ ಪಡೆದುಕೊಂಡು ರೇಸಿಗೆ ಎಂಟ್ರಿ ಕೊಟ್ಟಿದೆ. ಜಸ್ಟೀನ್ ಬೀಬರ್ ಅವರ 'ಸ್ಸಾರಿ', ಮಾರ್ಕ್ ರೊನ್ಸನ್ ಹಾಗೂ ಬ್ರೂನೋ ಮಾರ್ಸ್ ' ಅಪ್ ಟೌನ್ ಫಂಕ್ ಅಲ್ಬಂಗಳು ಟಾಪ್ 5ರೊಳಗೆ ಸ್ಥಾನ ಪಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+