34 ಸಾವಿರ ಕೋಟಿ ರು. ಮೌಲ್ಯದ ಸಹಾರಾ ಆ್ಯಂಬಿ ವ್ಯಾಲಿ ಮಾರಾಟಕ್ಕೆ ಆದೇಶ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 17: ಸಹಾರಾ ಕಂಪನಿಗೆ ಸೇರಿದ, ಸುಮಾರು 34 ಸಾವಿರ ಕೋಟಿ ರು. ಮೌಲ್ಯದ ಆಂಬಿ ವ್ಯಾಲಿ ಟೌನ್ ಶಿಪ್ ಅನ್ನು ಮಾರಾಟ ಮಾಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ.

ಪುಣೆಯಲ್ಲಿರುವ ಈ ಟೌನ್ ಶಿಪ್ ನ ಹರಾಜನ್ನು ಏ. 28ರೊಳಗೆ ನಡೆಸುವಂತೆ ಗಡುವು ವಿಧಿಸಲಾಗಿದೆ.

SC appoints liquidator to auction Sahara's Rs 34,000-cr Aamby Valley

ಆಂಬಿ ವ್ಯಾಲಿ ಟೌನ್ ಶಿಪ್ ನ ಹರಾಜು ಮಾಡುವಂತೆ ಬಾಂಬೆ ಹೈಕೋರ್ಟ್ ನ ಅಧಿಕೃತ ಲಿಕ್ವಿಡೇಟರ್ ಗೆ ಜವಾಬ್ದಾರಿ ನೀಡಲಾಗಿದೆ. ಲಿಕ್ವಿಡೇಟರ್ ಅವರು ಈ ಹರಾಜು ಪ್ರಕ್ರಿಯೆ ನಡೆಸಿ ಅದರಲ್ಲಿ ಬಂದ ಹಣವನ್ನು ಸೆಬಿ (ಸೆಕ್ಯೂರಿಟಿ ಆ್ಯಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ) ಸಂಸ್ಥೆಯಲ್ಲಿರುವ ಸಹಾರಾ ಮರುಪಾವತಿ ಖಾತೆಗೆ ತುಂಬಬೇಕೆಂದು ನ್ಯಾಯಪೀಠ ಸೂಚಿಸಿದೆ.

ಕಳೆದ ತಿಂಗಳು ಸೆಬಿಗೆ ಸಹಾರಾ ನೀಡಬೇಕಿರುವ ಸುಮಾರು 5 ಸಾವಿರ ಕೋಟಿ ರು. ಹಣ ಬಾಕಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಹಣ ಪಾವತಿಗೆ ಏ. 17ರವೆಗೆ ಗಡುವು ನೀಡಿತ್ತು. ಆದರೆ, ಈ ಗಡುವಿನೊಳಗೆ ಹಣ ತುಂಬುವಲ್ಲಿ ಸಹಾರಾ ವಿಫಲವಾಗಿರುವುದರಿಂದ ಆಂಬಿ ವ್ಯಾಲಿ ಟೌನ್ ಶಿಪ್ ಹರಾಜಿಗೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ರಂಜನ್ ಗೊಗೋಯ್ ಹಾಗೂ ಎ.ಕೆ. ಸಿಕ್ರಿ ಅವರುಳ್ಳ ನ್ಯಾಯಪೀಠ ಆದೇಶಿಸಿದೆ.

SC appoints liquidator to auction Sahara's Rs 34,000-cr Aamby Valley

ಆಂಬಿ ವ್ಯಾಲಿ ಟೌನ್ ಶಿಪ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಹಾರಾ ಪರಿವಾರವು ಇನ್ನು 48 ಗಂಟೆಗಳಲ್ಲಿ ಹರಾಜು ನಡೆಸುವ ಅಧಿಕಾರವಿರುವ ಬಾಂಬೆ ಹೈಕೋರ್ಟ್ ನ ಲಿಕ್ವಿಡೇಟರ್ ಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court today asked Bombay High Court's official liquidator to sell the Rs 34,000 crore worth of properties of the Aamby Valley owned by the Sahara Group and directed its chief Subrata Roy to personally appear before it on April 28.
Please Wait while comments are loading...