ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಗ್ರಾಹಕರಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 11: ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಆನ್ ಲೈನ್ ನಲ್ಲಿ ಐಎಂಪಿಎಸ್ ಮೂಲಕ ಹಣ ರವಾನಿಸುವ ಗ್ರಾಹಕರ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕಕ್ಕೆ ಕಡಿವಾಣ ಹಾಕಲಾಗಿದೆ.

ಇನ್ಮುಂದೆ 1000 ರೂಪಾಯಿ ತನಕ ಕಳಿಸುವ ಹಣಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಎಸ್ ಬಿಐ ಹೇಳಿದೆ.ಇದಕ್ಕೂ ಮುನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮೂಹದ ಬ್ಯಾಂಕುಗಳಿಂದ ಐಪಿಎಂಎಸ್ ಮಾಡುವಾಗ 5 ರು ಸೇವಾ ತೆರಿಗೆ ವಿಧಿಸಲಾಗುತ್ತಿತ್ತು. ಇದು 1,000ರು ತನಕ ಅನ್ವಯವಾಗುತ್ತಿತ್ತು.

ಸ್ಟೇಟ್ ಬ್ಯಾಂಕ್ ಸೇವಾ ಶುಲ್ಕ ಪರಿಷ್ಕರಣೆ, ನೂತನ ದರಗಳು ಇಲ್ಲಿವೆಸ್ಟೇಟ್ ಬ್ಯಾಂಕ್ ಸೇವಾ ಶುಲ್ಕ ಪರಿಷ್ಕರಣೆ, ನೂತನ ದರಗಳು ಇಲ್ಲಿವೆ

SBI waives charge on IMPS fund transfer of up to Rs 1,000

ಆನ್ ಲೈನ್ ಮೂಲಕ ಹಣ ರವಾನೆ ಮಾಡುವ ಸುಲಭ ವಿಧಾನವನ್ನು ಮೊಬೈಲ್ ಫೋನ್ ಅಥವಾ ಇನ್ಯಾವುದೇ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಹೆಚ್ಚು ಜನ ಬಳಸುತ್ತಿದ್ದಾರೆ.

ಇಂಟರ್ನೆಟ್ ಬ್ಯಾಂಕಿಂಗ್ ಪ್ರೋತ್ಸಾಹಿಸುವ ಉದ್ದೇಶದಿಂದ 1,000ರು ತನಕದ IMPS ಮೇಲಿನ ಚಾರ್ಜ್ ಗಳನ್ನು ತೆಗೆದು ಹಾಕಲಾಗಿದೆ. ಇದು ಸರಕು ಹಾಗೂ ಸೇವಾ ತೆರಿಗೆ ಜಾರಿಗೊಂಡ ಬಳಿಕ ಆಗಿರುವ ಬದಲಾವಣೆ ಎಂದು ಸಂಸ್ಥೆ ಹೇಳಿದೆ.

1,000 ರು ನಿಂದ 1 ಲಕ್ಷ ರು ತನಕದ ಐಎಂಪಿಎಸ್ ಮೇಲೆ 5 ರು ಜತೆಗೆ ಜಿಎಸ್ ಟಿ ಅನ್ವಯವಾಗಲಿದೆ. 1 ರಿಂದ 2 ಲಕ್ಷ ರು ತನಕ 15ರು ತೆರಿಗೆ ಬೀಳಲಿದೆ. ಎಲ್ಲಾ ರೀತಿಯ ವಾಣಿಜ್ಯ ವ್ಯವಹಾರಗಳ ಮೇಲೆ ಶೇ 18ರಷ್ಟು ತೆರಿಗೆ ಬೀಳಲಿದೆ.(ಪಿಟಿಐ)

English summary
Country's largest bank SBI has waived charges for fund transfer of up to Rs 1,000 through its IMPS (Immediate Payment Service) to promote small transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X