ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!

Posted By: Chethan
Subscribe to Oneindia Kannada

ನವದೆಹಲಿ, ಜ. 10: ಕೇಂದ್ರ ಸರ್ಕಾರದ ಅಪನಗದೀಕರಣ ಆದೇಶ ಹೊರಬೀಳುತ್ತಿದ್ದಂತೆ ನಗದು ಆಧಾರಿತ ವ್ಯವಹಾರದಲ್ಲಿ ಬಳಕೆಯಾಗಬೇಕಿದ್ದ ಅಂದಾಜು ಹಣದಲ್ಲಿ 25 ಸಾವಿರ ಕೋಟಿ ರು.ನಷ್ಟು ಹಣ ವಿದ್ಯುನ್ಮಾನ ವ್ಯವಹಾರಗಳ ಮೂಲಕ ಹರಿದಾಡಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ (ಎಸ್ ಬಿಐ) ಆರ್ಥಿಕ ಸಂಶೋಧನಾ ಇಲಾಖೆ ತಿಳಿಸಿದೆ.

ಅಪನಗದೀಕರಣದ ಪರಿಣಾಮಗಳನ್ನು ದಾಖಲಿಸಲು ಎಸ್ ಬಿಐನ ಆರ್ಥಿಕ ಸಂಶೋಧನಾ ಇಲಾಖೆಯು ಕಳೆದ ತಿಂಗಳ 30ರಿಂದ ಈ ತಿಂಗಳ 3ರವರೆಗೆ ಸಮೀಕ್ಷೆಯೊಂದನ್ನು ನಡೆಸಿದ್ದು, ಆ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

SBI Survey says, Cash deals worth Rs 25,000 cr move to digital mode post note ban

ಅಪನಗದೀಕರಣಕ್ಕೂ ಮುನ್ನ ಸಾಮಾನ್ಯವಾಗಿ ನಗದು ರೂಪದಲ್ಲಿ ನಡೆಯುತ್ತಿದ್ದ ಒಟ್ಟಾರೆ ವ್ಯವಹಾರದ ಶೇ. 15ರಷ್ಟು ಭಾಗವು ಡಿಜಿಟಲ್ ವ್ಯವಹಾರಕ್ಕೆ ಪರಿವರ್ತನೆಗೊಂಡಿದ್ದು, ಈ ಮೂಲಕ ಒಟ್ಟಾರೆ 25 ಸಾವಿರ ಕೋಟಿಯಷ್ಟು ಡಿಜಿಟಲ್ ಪೇಮೆಂಟ್ ನಡೆದಿದೆ. ಈ ಡಿಜಿಟಲ್ ವಹಿವಾಟಿನಲ್ಲಿ ಆನ್ ಲೈನ್ ಬ್ಯಾಂಕಿಂಗ್ ಮಾತ್ರವಲ್ಲದೇ, ಎಂ ವ್ಯಾಲೆಟ್ ಸೇವೆಗಳಿಗೂ ಹಣ ವರ್ಗಾವಣೆ, ರಿಟೇಲ್ ಮಾರಾಟ ಮಳಿಗೆಗಳಲ್ಲಿ ಕ್ರೆಡಿಟ್, ಅಥವಾ ಡೆಬಿಟ್ ಕಾರ್ಡುಗಳ ಉಪಯೋಗಗಳೂ ಸೇರಿವೆ ಎಂದು ಎಸ್ ಬಿಐ ಆರ್ಥಿಕ ಸಂಶೋಧನಾ ಇಲಾಖೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Post demonetisation, cash-based transactions worth Rs 25,000 crore have moved to the digital mode, says a survey.
Please Wait while comments are loading...