ಸಾಲ ಪಡೆದವರಿಗೆ ಶುಭ ಸುದ್ದಿ: ಎಸ್‌ಬಿಐ ಬಡ್ಡಿ ದರ ಇಳಿಕೆ, ಇಎಂಐ ಹೊರೆ ಕಡಿಮೆ
ನವದೆಹಲಿ, ಜುಲೈ 8: ಭಾರತದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬುಧವಾರ ಬೆಳಿಗ್ಗೆ ತನ್ನ ಅಲ್ಪ ವೆಚ್ಚ ಆಧಾರಿತ ಸಾಲ ದರವನ್ನು (ಎಂಸಿಎಲ್‌ಆರ್) ಕಡಿಮೆ ಅವಧಿಯ ಸಾಲಗಳಿಗೆ 5-10 ಬಿಪಿಎಸ್ ಕಡಿಮೆಗೊಳಿಸಿದೆ ಎಂದು ಘೋಷಿಸಿತು (ಅಂದರೆ, ಮೂರು ತಿಂಗಳವರೆಗೆ).
ಬ್ಯಾಂಕಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ಹೊಸ ದರಗಳು ಜುಲೈ 10, 2020 ರಿಂದ ಜಾರಿಗೆ ಬರಲಿವೆ ಮತ್ತು ಕ್ರೆಡಿಟ್ ಆಫ್ ಟೇಕ್ ಮತ್ತು ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಕಡಿಮೆ ಅವಧಿಯ ಸಾಲಗಳ ದರವನ್ನು ಕಡಿತಗೊಳಿಸಿದೆ.
''ಎಸ್‌ಬಿಐ ಪತ್ರಿಕಾ ಪ್ರಕಟಣೆಯ ಪ್ರಕಾರ, "ಇದು ಬ್ಯಾಂಕಿನ ಎಂಸಿಎಲ್‌ಆರ್‌ನಲ್ಲಿ ಸತತ 14 ನೇ ಕಡಿತವಾಗಿದೆ. ಈ ಪರಿಷ್ಕರಣೆಯೊಂದಿಗೆ, ಎಸ್‌ಬಿಐನ ಎಂಸಿಎಲ್‌ಆರ್ 3 ತಿಂಗಳ ಅವಧಿವರೆಗೆ ಶೇ. 6.65 ಕ್ಕೆ ಇಳಿಯುತ್ತದೆ, ಇದು ಬಾಹ್ಯ ಬೆಂಚ್‌ಮಾರ್ಕ್ ಆಧಾರಿತ ಸಾಲ ದರಕ್ಕೆ (ಇಬಿಎಲ್‌ಆರ್) ಸಮನಾಗಿರುತ್ತದೆ'' ಎಂದಿದೆ ಎಸ್‌ಬಿಐ.

ಅಂದರೆ ಮುಂದಿನ ಮೂರು ತಿಂಗಳ ಅವಧಿಗೆ ಈ ದರದಲ್ಲಿ ಶೇ.0.05-0.10 ಕಡಿತದೊಂದಿಗೆ ಬಡ್ಡಿ ದರ ಶೇ.6.65ಕ್ಕೆ ಬಂದು ತಲುಪಿದೆ.
ಯಾವ ಗ್ರಾಹಕರ ಸಾಲ MCLRಗೆ ಲಗತ್ತಿಸಲಾಗಿದೆಯೋ ಆ ಗ್ರಾಹಕರಿಗೆ ಇದರ ಲಾಭ ಸಿಗಲಿದೆ. ಅಂದರೆ, ಅವರ ಬ್ಯಾಂಕ್ ಇಎಂಐ ಒತ್ತಡ ಕಡಿಮೆಯಾಗಲಿದೆ. ಆದರೆ, ಸಾಲದ ರಿಸೆಟ್ ಅವಧಿ ಬಂದ ಬಳಿಕ ಮಾತ್ರ ಇದು ಅನ್ವಯಿಸಲಿದೆ. ಸಾಮಾನ್ಯವಾಗಿ ಬ್ಯಾಂಕ್ ಗಳು 6 ತಿಂಗಳು ಅಥವಾ ಒಂದು ವರ್ಷದ ಅವಧಿಯ ರಿಸೆಟ್ ಪಿರಿಯಡ್ ಆಧರಿಸಿ ಗೃಹ ಸಾಲ ನೀಡುತ್ತವೆ.
1 ವರ್ಷ, 2-ವರ್ಷ, 3-ವರ್ಷಗಳಿಗೆ ಎಂಸಿಎಲ್ಆರ್ ದರ ಕ್ರಮವಾಗಿ ಶೇಕಡಾ 7 ಪಿ.ಎ., ಶೇಕಡಾ 7.2 ಪಿ.ಎ., ಶೇಕಡಾ 7.3 ಪಿ.ಎ. ಎಸ್‌ಬಿಐನ ಎಂಸಿಎಲ್‌ಆರ್ ಬಿಡುಗಡೆಯ ಪ್ರಕಾರ ಮಾರುಕಟ್ಟೆಯಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ.











Click it and Unblock the Notifications