ಎಸ್ ಬಿಐ, ಐಸಿಐಸಿಐ ಬ್ಯಾಂಕ್ ನಿಂದ ಗೃಹಸಾಲದ ಸಕತ್ ಆಫರ್

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ನವೆಂಬರ್ 2: ದೀಪಾವಳಿ ಸಂಭ್ರಮಿಸುವುದಕ್ಕೆ ಇನ್ನಷ್ಟು ಕಾರಣ ಸಿಕ್ಕಂತಾಗಿದೆ. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಹಾಗೂ ಐಸಿಐಸಿಐ ಬ್ಯಾಂಕ್ ನಿಂದ ಹಲವು ಕೊಡುಗೆಗಳನ್ನು ನೀಡಲಾಗಿದೆ. ಬಡ್ಡಿದರದಲ್ಲಿ ಕಡಿತ, ಪ್ರೊಸೆಸಿಂಗ್ ಫೀನಿಂದ ವಿನಾಯಿತಿ ಹಾಗೂ ಓವರ್ ಡ್ರಾಫ್ಟ್ ಕೂಡ ನೀಡಲಾಗುತ್ತಿದೆ.

ಎಸ್ ಬಿಐ 75 ಲಕ್ಷ ರುಪಾಯಿವರೆಗಿನ ಗೃಹಸಾಲದ ಬಡ್ಡಿದರವನ್ನು ಶೇ 0.15ರಷ್ಟು ಇಳಿಸಿದೆ. ಇನ್ನು ಐಸಿಐಸಿಐ ಬ್ಯಾಂಕ್ ಗೃಹ ಸಾಲದ ಜತೆಗೆ ಓವರ್ ಡ್ರಾಫ್ಟ್ ನೀಡುತ್ತದೆ. ಸದ್ಯಕ್ಕೆ ಎಸ್ ಬಿಐ ಗೃಹ ಸಾಲದ ಬಡ್ಡಿ ದರ ಅತಿ ಕಡಿಮೆ ಇದೆ. ಹೊಸದಾಗಿ ಮನೆ ಖರೀದಿಸುವವರು ಹಾಗೂ ಈಗಾಗಲೇ ಸಾಲ ತೆಗೆದುಕೊಂಡವರು ಈ ಬ್ಯಾಂಕ್ ಗೆ ವರ್ಗಾವಣೆ ಮಾಡಿಕೊಳ್ಳುವ ಮೂಲಕ ಅನುಕೂಲ ಪಡೆಯಬಹುದು.[ಮೋದಿ ಆಶಯದಂತೆ ಟಾಟಾದಿಂದ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ]

SBI cuts home loan rate; ICICI offers overdraft

ಎಸ್ ಬಿಐನ ಗೃಹ ಸಾಲದ ಬಡ್ಡಿ ದರ ಶೇ 9.15 ಇದ್ದು, ಮಹಿಳೆಯರಿಗೇ ಶೇ 9.10 ದರದಲ್ಲಿ ನೀಡಲಾಗುತ್ತದೆ. ಇನ್ನು ಐಸಿಐಸಿಐ ಬ್ಯಾಂಕ್ ನಲ್ಲೇ ವೇತನ ಖಾತೆ ಇರುವವರಿಗೆ ಐದು ಲಕ್ಷದಿಂದ ಒಂದು ಕೋಟಿಯವರೆಗೆ ಆಸ್ತಿ ಮೇಲೆ ಸಾಲ ನೀಡಲಾಗುತ್ತದೆ. ಇದರ ಜತೆಗೆ 'ಐಸಿಐಸಿಐ ಬ್ಯಾಂಕ್ ಹೋಮ್ ಓವರ್ ಡ್ರಾಫ್ಟ್' ಎಂಬ ಹೊಸ ಅನುಕೂಲ ಕೂಡ ಮಾಡಿಕೊಡುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
SBI and ICICI have unveiled a host of benefits such as reduction in rates, waiver of processing fee and overdraft facility. SBI has further slashed interest rates by 0.15 per cent for its home loans up to Rs 75 lakh, while ICICI Bank is offering overdraft facility along with home loan.
Please Wait while comments are loading...