India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ಗ್ರಾಹಕರೇ ಗಮನಿಸಿ, ಆಧಾರ್ -ಪ್ಯಾನ್ ಲಿಂಕ್ ಹೀಗೆ ಮಾಡಿ!

|
Google Oneindia Kannada News

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಬಹುಮುಖ್ಯ ಪ್ರಕಟಣೆಯನ್ನು ಹೊರಡಿಸಿದೆ. ಒಂದು ಪ್ಯಾನ್ ಹಾಗೂ ಆಧಾರ್‌ನೊಂದಿಗೆ ಲಿಂಕ್ ಮಾಡಲು ಮನವಿ ಮಾಡಿದೆ. ಮತ್ತೊಂದು ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಪಿನ್ ಅಥವಾ ಗ್ರೀನ್ ಪಿನ್ ಅನ್ನು ಸುಲಭವಾಗಿ ಜನರೇಟ್‌ ಮಾಡಲು ತಿಳಿಸಿದೆ.

ಎಸ್‌ಬಿಐ ತನ್ನ ಗ್ರಾಹಕರಿಗೆ ಟ್ವಿಟ್ಟರ್ ಮೂಲಕ ನೀಡಿರುವ ಪ್ರಕಟಣೆಯಂತೆ ಜೂನ್ 30ರೊಳಗೆ ಪ್ಯಾನ್ ಹಾಗೂ ಆಧಾರ್ ಜೋಡಣೆ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯವಾಗಲಿದೆ.

PAN ಹಾಗೂ Aadhaar ಜೋಡಣೆ ಮಾಡಲು ವಿಧಾನ ಹೀಗಿದೆ:
* ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ತಾಣ incometaxindiaefiling.gov.inಗೆ ಲಾಗಿನ್ ಆಗಿ. (ಒಂದೆರಡು ದಿನ ಈ ವೆಬ್ ತಾಣ ಸರಿಯಾಗಿ ಕಾರ್ಯ ನಿರ್ವಹಿಸದೆ ಇರಬಹುದು. ನಂತರ ಪ್ರಯತ್ನಿಸಿ)
* ನೋಂದಣಿ ಮಾಡಿಕೊಳ್ಳಿ, ನಿಮ್ಮ ಪ್ಯಾನ್ ನಿಮ್ಮ ಯೂಸರ್ ಐಡಿಯಾಗಿ ಬಳಸಿ.
* ಯೂಸರ್ ಐಡಿ, ಪಾಸ್ವರ್ಡ್ ಹಾಗೂ ಹುಟ್ಟಿದ ದಿನಾಂಕ ಬಳಸಿ ಲಾಗಿನ್ ಆಗಿ.
* ಒಂದು ವಿಂಡೋ ಪಾಪ್ ಅಪ್ ಆಗಲಿದೆ. ಒಂದು ವೇಳೆ ವಿಂಡೋ ಪಾಪ್ ಅಪ್ ಆಗದಿದ್ದರೆ, ಮೆನು ಬಾರ್ >> Profile Settings>> ಲಿಂಕ್ ಆಧಾರ್ ಕ್ಲಿಕ್ ಮಾಡಿ.

* ಹುಟ್ಟಿದ ದಿನಾಂಕ, ಪುರುಷ/ಸ್ತ್ರೀ ಮುಂತಾದ ವಿವರಗಳನ್ನು ಪರಿಶೀಲಿಸಿ.
* ಆಧಾರ್ ಹಾಗೂ ಪ್ಯಾನ್ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ.
* ಮಾಹಿತಿ ಸರಿ ಇದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ Link Now ಬಟನ್ ಕ್ಲಿಕ್ ಮಾಡಿ.
* ಪ್ಯಾನ್ ಹಾಗೂ ಆಧಾರ್ ಯಶಸ್ವಿಯಾಗಿ ಲಿಂಕ್ ಆಗಿರುವ ಬಗ್ಗೆ ಸಂದೇಶವೊಂದು ಪಾಪ್ ಅಪ್ ಆಗಲಿದೆ.

English summary
According to SBI, customers should link their PAN with Aadhaar by June 30 to avoid any inconvenience and continue enjoying a seamless banking service. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X