ಮೆಟಾ ಇಂಡಿಯಾ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ನೇಮಕ
ನವದೆಹಲಿ, ನವೆಂಬರ್ 17: ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಕಂಪೆನಿಗೆ ಭಾರತದ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ಅವರನ್ನು ನೇಮಕ ಮಾಡುವುದಾಗಿ ತಿಳಿಸಿದೆ.
ಅಜಿತ್ ಮೋಹನ್ ಪ್ರತಿಸ್ಪರ್ಧಿ ಸ್ನ್ಯಾಪ್ ಇಂಕ್‌ಗೆ ಸೇರಲು ಭಾರತದ ಮುಖ್ಯಸ್ಥ ಹುದ್ದೆಯಿಂದ ರಾಜೀನಾಮೆ ನೀಡಿದ ನಂತರ ಸಂಧ್ಯಾ ಅವರ ನೇಮಕವಾಗಿದೆ. ಮೆಟಾದ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದ ಅಜಿತ್ ಮೋಹನ್ ಅವರು ನವೆಂಬರ್ 3ರಂದು ರಾಜೀನಾಮೆ ನೀಡಿದ್ದರು. ಭಾರತದಲ್ಲಿ ಮೆಟಾ ಪ್ಲಾಟ್‌ಫಾರ್ಮ್‌ನ ಸಾರ್ವಜನಿಕ ನೀತಿ ನಿರ್ದೇಶಕ ರಾಜೀವ್ ಅಗರ್ವಾಲ್ ಕೂಡ ಈ ವಾರದ ಆರಂಭದಲ್ಲಿ ರಾಜೀನಾಮೆ ನೀಡಿದ್ದರು.
ಸಂಧ್ಯಾ ಅವರು ಅವರು ಜನವರಿ 1 2023 ರಂದು ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ. ಅವರು ಮೆಟಾ ಎಪಿಎಸಿಯ ಉಪಾಧ್ಯಕ್ಷ ಡಾನ್ ನಿಯರಿ ಅವರಿಗೆ ವರದಿ ಮಾಡಲಿದ್ದಾರೆ ಹಾಗೂ ಎಪಿಎಸಿ ನಾಯಕತ್ವದ ತಂಡದ ಭಾಗವಾಗುತ್ತಾರೆ. ಡಾನ್ ನಿಯರಿ ಇಂಡಿಯಾ ಆರ್ಗ್ ಮತ್ತು ಕಾರ್ಯತಂತ್ರವನ್ನು ಮುನ್ನಡೆಸಲು ಭಾರತಕ್ಕೆ ಹಿಂತಿರುಗುತ್ತಾರೆ.

ಸಂಧ್ಯಾ ದೇವನಾಥನ್ ಅವರು ಕಂಪೆನಿಯ ಭಾರತದ ಕಾರ್ಯಾಚರಣೆಗಳನ್ನು ಮುನ್ನೆಡೆಸಲಿದ್ದಾರೆ. ಅಲ್ಲದೆ ಭಾರತದ ಪ್ರಮುಖ ಬ್ರ್ಯಾಂಡ್‌ಗಳು ರಚನೆಕಾರರು, ಜಾಹೀರಾತುದಾರರು ಮತ್ತು ಪಾಲುದಾರರೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುತ್ತಾರೆ. ಸಂಧ್ಯಾ ಅವರಿಗೆ 22 ವರ್ಷಗಳ ಬ್ಯಾಂಕಿಂಗ್, ಪೇಮೆಂಟ್ಸ್ ಮತ್ತು ತಂತ್ರಜ್ಞಾನದಲ್ಲಿ ಅಂತಾರಾಷ್ಟ್ರೀಯ ವೃತ್ತಿ ಅನುಭವವಿದ್ದು ಜಾಗತಿಕ ವ್ಯಾಪಾರ ಮುಖ್ಯಸ್ಥರಾಗಿದ್ದರು.
2016ರಲ್ಲಿ ಮೆಟಾಗೆ ಸೇರಿದ್ಧ ಸಂಧ್ಯಾ ಅವರು ಸಿಂಗಪುರ ಮತ್ತು ವಿಯೆಟ್ನಾಂ ವ್ಯವಹಾರಗಳು ಮತ್ತು ತಂಡಗಳು ಮತ್ತು ಆಗ್ನೇಯ ಏಷ್ಯಾದಲ್ಲಿ ಮೆಟಾದ ಇ-ಕಾಮರ್ಸ್ ಉಪಕ್ರಮಗಳನ್ನು ನಿರ್ಮಿಸಲು ಸಹಾಯ ಮಾಡಿದರು. 2020 ರಲ್ಲಿ ಅವರು ಎಪಿಎಸಿಗಾಗಿ ಗೇಮಿಂಗ್ ನೇತೃತ್ವ ವಹಿಸಿದ್ದರು. ಇದು ಮೆಟಾ ಕಂಪೆನಿಯಲ್ಲಿ ಪ್ರಮುಖ ಸ್ಥಾನವಾಗಿದೆ.












Click it and Unblock the Notifications