• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಫ್‌62 ರಿಲಾಯನ್ಸ್‌ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಬಿಡುಗಡೆ

|

ಬೆಂಗಳೂರು, ಫೆ 22: ಹೊಚ್ಚ ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಗೆ ರಿಲಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳು ಆಫ್‌ಲೈನ್‌ ಪಾಲುದಾರರಾಗಿದ್ದು, ಫೆಬ್ರವರಿ 22 ರಿಂದ ರಿಲಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಮಾರಾಟಕ್ಕೆ ಲಬ್ಯವಾಗಲಿದೆ.

ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಸ್ಯಾಮ್‌ಸಂಗ್‌ 7ಎನ್‌ಎಂ ಎಕ್ಸಿನೋಸ್‌ 9825 ಪ್ರೋಸೆಸರ್‌ ಭರಿತ 2.73 ಗಿಗಾಹರ್ಟ್ಸ್ ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 128 ಜಿಬಿ ವಿಸ್ತರಿಸಬಹುದಾದ ಸ್ಟೊರೇಜ್‌ ಮತ್ತು ಕಲರ್ ಸೂಪರ್ ಅಮೊಲೆಡ್‌ ಸ್ಕ್ರೀನ್ ಹೊಂದಿದೆ.

ಇದರ ಜೊತೆಗೆ 7000 ಎಂಎಎಚ್‌ ಬ್ಯಾಟರಿಯಿಂದಾಗಿ ಇದು ಗೇಮಿಂಗ್‌ಗೆ ಅತ್ಯಂತ ಉತ್ತಮವಾದದ್ದಾಗಿದೆ. ಅತ್ಯುತ್ತಮ ಗುಣಮಟ್ಟದ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳು ಮತ್ತು ಫೇಸ್ ಅನ್‌ಲಾಕ್‌ ಆಯ್ಕೆಗಳನ್ನು ಈ ಫೋನ್ ಹೊಂದಿದೆ.

64 ಎಂಪಿ ಹಿಂಬದಿ ಕ್ಯಾಮೆರಾ ಮತ್ತು ಅಲ್ಟ್ರಾ ವೈಡ್‌ ಹಾಗೂ ಮ್ಯಾಕ್ರ ಶೂಟಿಂಗ್‌ ಕೂಡಾ ಇದ್ದು, 6ಜಿಬಿ ರ್‍ಯಾಮ್‌ ಮಾದರಿಗೆ ರೂ. 21,499/-* ಹಾಗೂ 8ಜಿಬಿ ರ್‍ಯಾಮ್‌ ಮಾದರಿಗೆ ರೂ. 23,499/-* ದರದಲ್ಲಿ ಲಭ್ಯವಿದೆ.

ಐಸಿಐಸಿಐ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ರೂ. 2,500/- ಅಥವಾ ರೂ.2,500/- ವರೆಗೆ ಸಿಟಿ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಕ್ರೆಡಿಟ್ ಕಾರ್ಡ್‌ ಇಎಂಐ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಅನ್ನು ರಿಲಯನ್ಸ್ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಖರೀದಿ ಮಾಡುವ ಗ್ರಾಹಕರು, ರೂ. 10,000/- ಮೌಲ್ಯದ ಇತರ ಪ್ರಯೋಜನಗಳೂ ಇರಲಿವೆ. ಈ ಪ್ರಯೋಜನಗಳೆಂದರೆ, ರೂ. 349/- ಪ್ರೀಪೇಯ್ಡ್ ರಿಚಾರ್ಜ್‌ ಮೇಲೆ ರೂ. 3,000/- ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್‌ ಹಾಗೂ ಪಾರ್ಟ್ನರ್ ಬ್ರ್ಯಾಂಡ್‌ಗಳಿಂದ ರೂ. 7,000/- ಮೌಲ್ಯದ ವೋಚರುಗಳು ಲಭ್ಯವಿವೆ. ಈ ಕೊಡುಗೆಯು ಹೊಸ ಮತ್ತು ಪ್ರಸ್ತುತ ಜಿಯೋ ಚಂದಾದಾರರಿಗೆ ಲಭ್ಯವಿದೆ.

ಭಾರತದಲ್ಲಿ ರಿಲಯನ್ಸ್ ಡಿಜಿಟಲ್‌ ಅತಿದೊಡ್ಡ ಎಲೆಕ್ಟ್ರಾನಿಕ್ಸ್‌ ರಿಟೇಲರ್ ಆಗಿದ್ದು, 800 ಕ್ಕೂ ಹೆಚ್ಚು ನಗರಗಳಲ್ಲಿ 450 ಕ್ಕೂ ಹೆಚ್ಚು ದೊಡ್ಡ ಮಟ್ಟದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳನ್ನು ಮತ್ತು ದೇಶದ ಮೂಲೆ ಮೂಲೆಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವ 1800 ಕ್ಕೂ ಹೆಚ್ಚು ಸಣ್ಣ ಮಟ್ಟದ ಮೈ ಜಿಯೋ ಸ್ಟೋರ್‌ಗಳನ್ನು ಇದು ಹೊಂದಿದೆ.

English summary
Reliance Digital and My Jio stores being the only offline partner for availability of Samsung Galaxy F62. The new smartphone will be available at the stores from Monday, February 22, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X