ಭಾರತದಲ್ಲೇ ಮೊಬೈಲ್ ತಯಾರಿಸಿಲು ಮುಗಿಬಿದ್ದ ಕಂಪನಿಗಳು: 11 ಲಕ್ಷ ಕೋಟಿ ರೂ. ಪ್ರಸ್ತಾಪ

ನವದೆಹಲಿ, ಆಗಸ್ಟ್‌ 01: ಸ್ಯಾಮ್‌ಸಂಗ್, ಆ್ಯಪಲ್, ಪೆಗಾಟ್ರಾನ್, ವಿಸ್ಟ್ರಾನ್, ಫಾಕ್ಸ್‌ಕಾನ್ ಮತ್ತು ರೈಸಿಂಗ್ ಸ್ಟಾರ್ ಸೇರಿದಂತೆ ಒಟ್ಟಾರೆ 22 ಕಂಪನಿಗಳು ದೇಶದಲ್ಲಿ ಮುಂದಿನ 5 ವರ್ಷಗಳಲ್ಲಿ 11 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ತಯಾರಿಸುವ ಪ್ರಸ್ತಾಪವನ್ನು ಮುಂದಿಟ್ಟಿವೆ ಎಂದು ಕೇಂದ್ರ ದೂರ ಸಂಪರ್ಕ ಮತ್ತು ಐ.ಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆ ಹೆಚ್ಚಿಸಲು ಜಾರಿಗೊಳಿಸಿರುವ ಉತ್ಪಾದನೆ ಸಂಪರ್ಕಿತ ಉತ್ತೇಜನ (ಪಿಎಲ್‌ಎ) ಯೋಜನೆಯಡಿ ಈ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಈ ಒಟ್ಟಾರೆ ಪ್ರಸ್ತಾವನೆಯಲ್ಲಿ ಚೀನಾದ ಯಾವುದೇ ಕಂಪನಿಯಿಂದ ಅರ್ಜಿ ಸಲ್ಲಿಕೆಯಾಗಿಲ್ಲ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

Samsung Foxconn Propose Worth 11 Lakh Crore Mobile Production Under PLI

ಕೇಂದ್ರದ ಪಿಎಲ್ಐ ಯೋಜನೆಯನ್ನು ವಿವರಿಸಲು ಮಾಧ್ಯಮಗಳನ್ನು ಉದ್ದೇಶಿಸಿ ಪ್ರಸಾದ್ ಈ ಹೇಳಿಕೆ ನೀಡಿದ್ದು, ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಉಪಕ್ರಮಗಳು "ಪರಿವರ್ತಕ ಕಾರ್ಯಕ್ರಮಗಳು" ಎಂದು ಹೇಳಿದರು. ಇದರ ಜೊತೆಗೆ ಆಗಸ್ಟ್ 1 ರಿಂದ ಕಂಪನಿಗಳು ಪ್ರೋತ್ಸಾಹ ಧನಕ್ಕೆ ಅರ್ಹವಾಗುತ್ತವೆ ಎಂದು ಹೇಳಿದರು.

11.5 ಲಕ್ಷ ಕೋಟಿ ರೂ.ಗಳಲ್ಲಿ 7 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಮತ್ತು ಘಟಕಗಳನ್ನು ರಫ್ತು ಮಾಡಲಾಗುವುದು ಎಂದು ಅವರು ವಿವರಿಸಿದರು. 3 ಲಕ್ಷಕ್ಕೂ ಹೆಚ್ಚು ಜನರು ನೇರ ಉದ್ಯೋಗ ಪಡೆಯಲಿದ್ದಾರೆ. 9 ಲಕ್ಷಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಪಿಎಲ್ಐಗೆ ಅರ್ಜಿ ಸಲ್ಲಿಸಿದ ಕಂಪನಿಗಳಲ್ಲಿ ಜಾಗತಿಕ ಖ್ಯಾತ ಕಂಪನಿಗಳಾದ ಸ್ಯಾಮ್‌ಸಂಗ್, ಪೆಗಾಟ್ರಾನ್, ವಿಸ್ಟ್ರಾನ್, ಫಾಕ್ಸ್‌ಕಾನ್ ಮತ್ತು ರೈಸಿಂಗ್ ಸ್ಟಾರ್ ಸೇರಿವೆ. ಇನ್ನು ದೇಶೀಯ ಕಂಪನಿಗಳಲ್ಲಿ ಲಾವಾ, ಡಿಕ್ಸನ್, ಮೈಕ್ರೋಮ್ಯಾಕ್ಸ್, ಸೊಹೊ ಮತ್ತು ಆಪ್ಟಿಮಸ್ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+