ಪೆಪ್ಸಿಯಿಂದ ಸ್ವಾಗ್‍ನೊಂದಿಗೆ ಪ್ರೇಮಿಗಳ ದಿನಾಚರಣೆ
ಬೆಂಗಳೂರು, ಫೆಬ್ರವರಿ 11: ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಿಸಲು ಪೆಪ್ಸಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದಕ್ಕಾಗಿ ಇಂದು ಪೆಪ್ಸಿ ''ಸ್ವಾಗ್ ಸೆ ಸೋಲೋ'' ಬಿಡುಗಡೆ ಮಾಡಿದೆ. ಪೆಪ್ಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್‍ಖಾನ್ ಅವರು ಈ ಸ್ವಾಗ್ ಸೆ ಸೋಲೋದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸ್ವಾಗ್ ಸೆ ಸೋಲೋ ಸಂಗೀತವನ್ನು ಸಿದ್ಧಪಡಿಸಲಾಗಿದೆ.
ಯುವ ಪೀಳಿಗೆಗೆ ಹೇಳಿ ಮಾಡಿಸಿದಂತಿರುವ ಕ್ಯಾಚಿಯಾಗಿರುವ ಈ ಗೀತೆಯನ್ನು ಹೆಸರಾಂತ ಸಂಗೀತ ದಿಗ್ಗಜರು ಸಿದ್ಧಪಡಿಸಿದ್ದಾರೆ. ಇದಕ್ಕೆ ತಾನಿಷ್ಕ್ ಬಾಗ್ಚಿ ಅವರ ಸಂಗೀತ ಸಂಯೋಜನೆ ಇದ್ದರೆ, ರೆಮೋ ಡಿಸೋಜಾ ಕೋರಿಯೋಗ್ರಾಫಿ ನೀಡಿದ್ದಾರೆ. ಯುವ ಸಮುದಾಯ ಕೇಂದ್ರಿತ ಹಾಡು ಇದಾಗಿದ್ದು,'ಹರ್ ಘೂಂಟ್ ಮೇನ್ ಸ್ವಾಗ್' ಎಂಬಲ್ಲಿಂದ ಆರಂಭವಾಗುತ್ತದೆ.
ಭಾರತದಲ್ಲಿ 15-30 ರ ವಯೋಮಾನದ ಪ್ರತಿ 10 ಯುವಕರಲ್ಲಿ 7 ಮಂದಿ ಒಂಟಿಯಾಗಿರುತ್ತಾರೆ. ಅವರಲ್ಲಿ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಈ ಸ್ವಾಗ್ ಸೇ ಸೋಲೋವನ್ನು ಸಿದ್ಧಪಡಿಸಲಾಗಿದ್ದು, ಈ ಮೂಲಕ ಅವರಲ್ಲಿ ಸಂಬಂಧಗಳ ಗಟ್ಟಿತನವನ್ನು ಉತ್ತೇಜಿಸಲಾಗುತ್ತದೆ.

ಈ ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಪೆಪ್ಸಿಕೊ ಇಂಡಿಯಾದ ವಕ್ತಾರರು, ''ಪೆಪ್ಸಿಯ ಸ್ವಾಗ್ ಅಭಿಯಾನವು ಸ್ವಾಗ್ ಸೇ ಸೋಲೋ ಗೀತೆಯೊಂದಿಗೆ 2020 ನೇ ವರ್ಷ ಮುಂದುವರಿಯುತ್ತದೆ. ಈ ಹಿಂದೆ ನಾವು ರಚಿಸಿದ್ದ ಹಾಡು ಅತ್ಯಂತ ಜನಪ್ರಿಯವಾದ ಹಿನ್ನೆಲೆಯಲ್ಲಿ ಸಂಗೀತವು ದೇಶವನ್ನು ಒಟ್ಟಾಗಿ ಪಾಲ್ಗೊಳ್ಳುವಂತೆ ಮಾಡುವ ಒಂದು ಶಕ್ತಿಶಾಲಿ ಅಸ್ತ್ರ ಎಂಬುದನ್ನು ಮನಗಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಜೋಡಿಗಳು ಸಾಂಪ್ರದಾಯಿಕವಾಗಿ ಪ್ರೇಮಿಗಳ ಸಪ್ತಾಹವನ್ನು ಆಚರಣೆ ಮಾಡಲೆಂಬ ಉದ್ದೇಶದಿಂದ ಈ ಸ್ವಾಗ್ ಸೇ ಸೋಲೋ ಹಾಡನ್ನು ಸಿದ್ಧಪಡಿಸಿ ಜನರ ಮುಂದಿಡುತ್ತಿದ್ದೇವೆ. ಈ ಸಂಗೀತದೊಂದಿಗೆ ಯುವ ಪೀಳಿಗೆ ಸಂತಸಪಡಬೇಕು ಮತ್ತು ಒಂಟಿಯಾಗಿದ್ದೇವೆಂಬ ಆತಂಕವಿಲ್ಲದೇ ಸಂಬಂಧದ ಮಾನ್ಯತೆಯೊಂದಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಸಲ್ಮಾನ್‍ಖಾನ್ ಈ ಹಾಡಿನ ಮುಖ್ಯ
ಭೂಮಿಕೆಯಲ್ಲಿದ್ದು, ಇಡೀ ದೇಶ ಈ ಹಾಡಿಗೆ ಹೆಜ್ಜೆ ಹಾಕಲಿದೆ ಎಂಬ ವಿಶ್ವಾಸ ನಮ್ಮದಾಗಿದೆ'' ಎಂದರು.
ಈ ಬಗ್ಗೆ ಮಾತನಾಡಿದ ಪೆಪ್ಸಿಯ ಬ್ರ್ಯಾಂಡ್ ಅಂಬಾಸಿಡರ್ ಸಲ್ಮಾನ್ ಖಾನ್, ''ಸ್ವಾಗ್ ಸೇ ಸೋಲೋ ಒಂದು ಅತ್ಯುತ್ತಮ ಹಾಡಾಗಿದೆ. ವಿಶ್ವಾಸ ತುಂಬುವ ಹಾಡು ಇದಾಗಿದೆ. ಈ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ನಾವೆಲ್ಲಾ ತುಂಬಾ ಸಂತಸಪಟ್ಟಿದ್ದೇವೆ. ಈ ದಿಸೆಯಲ್ಲಿ ನಾನು ಪೆಪ್ಸಿಯೊಂದಿಗೆ ಸಹಯೋಗ ಮಾಡಿಕೊಂಡಿರುವುದು ನನಗೆ ಮತ್ತಷ್ಟು ಸಂತಸವಾಗಿದೆ'' ಎಂದು ತಿಳಿಸಿದರು.
ಟಿ-ಸೀರೀಸ್ ಸಹಯೋಗದೊಂದಿಗೆ ಸ್ವಾಗ್ ಸೇ ಸೋಲೋವನ್ನು ಬಿಡುಗಡೆ ಮಾಡಿದ್ದು, ಪೆಪ್ಸಿ ಮತ್ತು ಟಿ-ಸೀರೀಸ್ ಸಾಮಾಜಿಕ ಮಾಧ್ಯಮದಲ್ಲಿ ಈ ಹಾಡನ್ನು ಬಿತ್ತರ ಮಾಡುತ್ತಿವೆ. ಇದಲ್ಲದೇ, ಗಾನಾ.ಕಾಂದಲ್ಲಿಯೂ ಲಭ್ಯವಿದೆ.












Click it and Unblock the Notifications