ಕುಸಿಯಬೇಕಿದ್ದ ರುಪಾಯಿ ಮೇಲೆದ್ದಿದ್ದು ಹೇಗೆ? 10 ಕಾರಣ

Posted By:
Subscribe to Oneindia Kannada

ಹಲವು ದೇಶಗಳ ಕರೆನ್ಸಿ ಮೌಲ್ಯವನ್ನು ಅಮೆರಿಕದ ಡಾಲರ್ ಗೆ ಹೋಲಿಸುವುದನ್ನು ಗಮನಿಸಿರ್ತೀರಿ. ಇದರಿಂದ ಭಾರತ ಕೂಡ ಹೊರತಲ್ಲ. ಅಮೆರಿಕದ ಡಾಲರ್ ಮೌಲ್ಯದ ಎದುರು ಭಾರತದ ರುಪಾಯಿ ಎಷ್ಟಿದೆ ಎಂದು ತಿಳಿದುಕೊಳ್ಳುವುದು ನೇರವಾಗಿ ನಮ್ಮ ಆರ್ಥಿಕತೆಯ ಸ್ಥಿತಿಯನ್ನು ತಿಳಿಯಲು ಇರುವ ಮುಖ್ಯ ಮಾನದಂಡಗಳ ಪೈಕಿ ಒಂದು.

ಕೆಲ ತಿಂಗಳ ಹಿಂದಷ್ಟೇ ಆರ್ಥಿಕ ತಜ್ಞರು ಎಚ್ಚರಿಸುತ್ತಿದ್ದರು. ಡಾಲರ್ ಎದುರು ರುಪಾಯಿ ಎಪ್ಪತ್ತನ್ನು ತಲುಪತ್ತದೆ ಎಂಬ ಎಚ್ಚರಿಕೆ ಅದಾಗಿತ್ತು. ಇನ್ನೂ ಕೆಲವರ ಪ್ರಕಾರ ಅದು ಎಪ್ಪತ್ತೆರಡು ಆಗುತ್ತದೆ ಎಂದಾಗಿತ್ತು. ಈ ವರ್ಷದ ಜನವರಿಯಲ್ಲಿ ಡಾಲರ್ ಎದುರು ರುಪಾಯಿ ಅರವತ್ತೆಂಟು ದಾಟಿತ್ತು. ಅದು ಸಾರ್ವಕಾಲಿಕ ಕನಿಷ್ಠ ಮಟ್ಟದ ಹತ್ತಿರ ಇತ್ತು.

2030ರ ಹೊತ್ತಿಗೆ ಡಾಲರ್-ರುಪಾಯಿ ಮೌಲ್ಯ ಸಮ ಸಮ

ಇದು ಭಾರತದ ರುಪಾಯಿ ಎದುರು ಮಾತ್ರವಲ್ಲ, ಬೇರೆ ದೇಶಗಳ ಕರೆನ್ಸಿ ಎದುರು ಕೂಡ ಡಾಲರ್ ಎತ್ತರಕ್ಕೆ ಜಿಗಿಯುತ್ತಿತ್ತು. ಅದಕ್ಕೆ ಕಾರಣ ಸಹ ಇತ್ತು. ಟ್ರಂಪ್ ಆಡಳಿತದಲ್ಲಿ ಅಮೆರಿಕ ಬೆಳವಣಿಗೆಯತ್ತ ಸಾಗುತ್ತದೆ, ಆರ್ಥಿಕತೆ ಮತ್ತೂ ಬಲಾಢ್ಯವಾಗುತ್ತದೆ ಎಂಬ ವಿಪರೀತ ನಿರೀಕ್ಷೆಯಿತ್ತು.

ಆದರೆ, ಭಾರತದ ರುಪಾಯಿ ಮೈ-ಕೈ ತುಂಬಿಕೊಂಡು ಬಲಿಷ್ಠವಾಯಿತು. ಈ ವರ್ಷದಲ್ಲಿ ಇಲ್ಲಿವರೆಗೆ ಜಗತ್ತಿನಲ್ಲೇ ಅತ್ಯುತ್ತಮವಾದ ಕರೆನ್ಸಿಗಳ ಪೈಕಿ ಭಾರತದ ರುಪಾಯಿ ಕೂಡ ಒಂದು. ಅಮೆರಿಕದ ಡಾಲರ್ ವಿರುದ್ಧ ಆರು ಪ್ರತಿಶತ ಏರಿಕೆ ಕಂಡಿರುವ ರುಪಾಯಿ ಆಗಸ್ಟ್ 4ರಂದು ಡಾಲರ್ ಎದುರು 63.63 ರುಪಾಯಿ ಇದೆ. ಇದು ಎರಡು ವರ್ಷದಲ್ಲೇ ಗರಿಷ್ಠ ಮೌಲ್ಯವಾಗಿದೆ.

ಈ ವರ್ಷ ಇಂಥ ಬೆಳವಣಿಗೆಗಾಗಿ ಕಾರಣವಾದ 10 ಅಂಶಗಳು ಇಲ್ಲಿವೆ

ಕಾರಣ 1: ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳ

ಕಾರಣ 1: ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳ

ವಿದೇಶದಿಂದ ಭಾರತದ ದೇಶೀಯ ಷೇರು ಹಾಗೂ ಬಾಂಡ್ ಮಾರುಕಟ್ಟೆಗೆ ಬರುವ ಬಂಡವಾಳದ ಒಳಹರಿವು ಹೆಚ್ಚಿದೆ. ಭಾರತೀಯ ಬಂಡವಾಳ ಮಾರುಕಟ್ಟೆಯೂ ಈ ವರ್ಷದಲ್ಲಿ ಇಲ್ಲಿವರೆಗೆ 30 ಬಿಲಿಯನ್ ಅಮೆರಿಕ ಡಾಲರ್ ನಷ್ಟು ಹಣವನ್ನು ಆಕರ್ಷಿಸಿದೆ.

ಕಾರಣ 2: ರುಪಾಯಿ ಬಲಿಷ್ಠ

ಕಾರಣ 2: ರುಪಾಯಿ ಬಲಿಷ್ಠ

ಹಣದುಬ್ಬರ ಪ್ರಮಾಣ ಇಳಿಕೆ, ದೇಶಿ ಆರ್ಥಿಕತೆಯ ಬೆಳವಣಿಗೆ, ದಾಖಲೆ ಪ್ರಮಾಣದಲ್ಲಿ ವಿದೇಶಿ ವಿನಿಮಯ ಸಂಗ್ರಹ...ಈ ಎಲ್ಲ ಅಂಶಗಳು ರುಪಾಯಿ ಬಲಿಷ್ಠವಾಗಲು ಕೊಡುಗೆ ನೀಡಿವೆ.

ಕಾರಣ 3: ದೇಶಿ ಷೇರು ಮಾರುಕಟ್ಟೆಯಲ್ಲಿ ಉತ್ತಮ ಚಟುವಟಿಕೆ

ಕಾರಣ 3: ದೇಶಿ ಷೇರು ಮಾರುಕಟ್ಟೆಯಲ್ಲಿ ಉತ್ತಮ ಚಟುವಟಿಕೆ

ಯಾವಾಗ ವಿದೇಶಿ ಬಂಡವಾಳ ಹರಿದುಬಂತೋ ದೇಶಿ ಷೇರು ಮಾರುಕಟ್ಟೆ ಹಲವು ಎತ್ತರಗಳನ್ನು ಕಾಣುತ್ತಿದೆ. ನಿಫ್ಟಿ ಕೂಡ ಏಷ್ಯಾದಲ್ಲೇ ಅತ್ಯುತ್ತಮ ಮಾರುಕಟ್ಟೆಯಾಗಿದ್ದು, ಈ ವರ್ಷ ಇಲ್ಲಿಯವರೆಗೆ ಶೇ ಇಪ್ಪತ್ತರಷ್ಟು ಏರಿಕೆ ಕಂಡಿದೆ.

ಕಾರಣ 4: ಸುಧಾರಣಾ ಕ್ರಮದ ಪ್ರಭಾವ

ಕಾರಣ 4: ಸುಧಾರಣಾ ಕ್ರಮದ ಪ್ರಭಾವ

ಜಿಎಸ್ ಟಿ ಜಾರಿ ಸೇರಿದಂತೆ ಹಲವು ಸುಧಾರಣೆಗಳನ್ನು ಕೇಂದ್ರ ಸರಕಾರ ಕೈಗೊಂಡಿರುವುದರಿಂದ ಈ ವರ್ಷ ಭಾರತದ ಜಿಡಿಪಿ ಮತ್ತೆ 7.2ಕ್ಕೆ ಹಿಂತಿರುಗತ್ತದೆ. ಮುಂದಿನ ವರ್ಷ 7.7 ಆಗುತ್ತದೆ ಎಂದು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂ ಎಫ್) ಹೇಳಿದೆ.

ಕಾರಣ 5: ದಾಖಲೆ ವಿದೇಶಿ ವಿನಿಮಯ ಸಂಗ್ರಹ

ಕಾರಣ 5: ದಾಖಲೆ ವಿದೇಶಿ ವಿನಿಮಯ ಸಂಗ್ರಹ

ವಿದೇಶಿ ವಿನಿಮಯ ಸಂಗ್ರಹವು ಜುಲೈ ಹದಿನಾಲ್ಕನೇ ತಾರೀಕಿಗೆ 389 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿತ್ತು. ಕರೆಂಟ್ ಅಕೌಂಟ್ ಡಿಫಿಸಿಟ್ ಜಿಡಿಪಿಯ 0.6ರಷ್ಟು ತಲುಪಿದೆ. 2013ರಲ್ಲಿ ಇದು 4.8ರಷ್ಟಿತ್ತು.

 ಕಾರಣ 6: ಡಾಲರ್ ಎದುರು ಇನ್ನಷ್ಟು ಎತ್ತರಕ್ಕೆ

ಕಾರಣ 6: ಡಾಲರ್ ಎದುರು ಇನ್ನಷ್ಟು ಎತ್ತರಕ್ಕೆ

ರುಪಾಯಿಯ ಬೆಳವಣಿಗೆ ಪ್ರಬಲವಾಗಿರುತ್ತದೆ ಮತ್ತು ಡಾಲರ್ ಎದುರು ಇನ್ನಷ್ಟು ಎತ್ತರಕ್ಕೆ ಏರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೊರ್ಗಾನ್ ಸ್ಟ್ಯಾನ್ಲಿ ಪ್ರಕಾರ, ಡಾಲರ್ ಎದುರು ರುಪಾಯಿ 64ಕ್ಕಿಂತ ಕಡಿಮೆ ಆಗಿರುವುದರಿಂದ ಇನ್ನಷ್ಟು ಪ್ರಬಲವಾಗುವ ಸಾಧ್ಯತೆ ಇದೆ.

ಕಾರಣ 7: ವಿದೇಶಿ ವಿನಿಮಯ ವ್ಯವಹಾರಸ್ಥರ ಮಾತು

ಕಾರಣ 7: ವಿದೇಶಿ ವಿನಿಮಯ ವ್ಯವಹಾರಸ್ಥರ ಮಾತು

ವಿದೇಶಿ ವಿನಿಮಯದ ವ್ಯವಹಾರ ಮಾಡುವವರೂ ಅದೇ ಮಾತನ್ನು ಹೇಳುತ್ತಾರೆ. ಡಾಲರ್ ಎದುರು ರುಪಾಯಿ 64ಕ್ಕಿಂತ ಕಡಿಮೆ ಆಗಿರುವುದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರುಪಾಯಿ ಮತ್ತಷ್ಟು ಗಟ್ಟಿಯಾಗುವುದನ್ನು ನೋಡುತ್ತಿದೆ. ಆದ್ದರಿಂದಲೇ ದೇಶೀ ಕರೆನ್ಸಿ ಮೌಲ್ಯದ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ.

ಕಾರಣ 8: ಹದಿನೈದು ತಿಂಗಳ ಹಿಂದಿನ ಮಟ್ಟಕ್ಕೆ

ಕಾರಣ 8: ಹದಿನೈದು ತಿಂಗಳ ಹಿಂದಿನ ಮಟ್ಟಕ್ಕೆ

ದುರ್ಬಲವಾಗುತ್ತಿರುವ ಅಮೆರಿಕ ಡಾಲರ್ ಹದಿನೈದು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿತು. ಆ ನಂತರ ಮಂಗಳವಾರದಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿತು.

ಕಾರಣ 9: ಅಮೆರಿಕದ ರಾಜಕೀಯ ಸ್ಥಿತಿ

ಕಾರಣ 9: ಅಮೆರಿಕದ ರಾಜಕೀಯ ಸ್ಥಿತಿ

ಅಮೆರಿಕದ ರಾಜಕೀಯ ಸ್ಥಿತಿ ಹಾಗೂ ಆರ್ಥಿಕ ಅಂಕಿ-ಅಂಶಗಳು ಡಾಲರ್ ಮೌಲ್ಯವು ತೀರಾ ಕುಸಿಯಲು ಕಾರಣವಾಗಿದೆ. ಇದರ ಜತೆಗೆ ಈ ವರ್ಷ ಫೆಡರಲ್ ರಿಸರ್ವ್ ದರ ಏರಿಕೆಯ ನಿರೀಕ್ಷೆ ಕೂಡ ನಕಾರಾತ್ಮಕ ಪರಿಣಾಮ ಬೀರಿದೆ. ಎರಡನೇ ತ್ರೈ ಮಾಸಿಕದಲ್ಲಿ ಅಮೆರಿಕ ಆರ್ಥಿಕತೆ ಚಿಗಿತುಕೊಂಡಂತೆ ಕಂಡುಬಂದಿದ್ದರೂ ಆರ್ಥಿಕತೆಯ ವಿವಿಧ ಅಂಶಗಳು ಆತಂಕಕ್ಕೆ ಕಾರಣವಾಗಿವೆ.

ಟ್ರಂಪ್ ಆಡಳಿತದಿಂದ ತೆರಿಗೆ ಸುಧಾರಣೆ ಆಗಬಹುದು ಹಾಗೂ ಆರ್ಥಿಕತೆ ಬಲ ತುಂಬಬಹುದು ಎಂಬ ನಿರೀಕ್ಷೆ ಇದ್ದು, ಇವೆಲ್ಲ ಡಾಲರ್ ಗೆ ಸಕಾರಾತ್ಮಕ ಅಂಶಗಳಾಗಲಿವೆ.

ಕಾರಣ 10: ಬಂಡವಾಳದ ಒಳಹರಿವಿನಿಂದ ನಿರ್ಧಾರ

ಕಾರಣ 10: ಬಂಡವಾಳದ ಒಳಹರಿವಿನಿಂದ ನಿರ್ಧಾರ

ತಜ್ಞರು ಹೇಳುವ ಪ್ರಕಾರ, ಇಲ್ಲಿಂದ ಮುಂದಕ್ಕೆ ಬಂಡವಾಳದ ಒಳಹರಿವು ಹಾಗೂ ಡಾಲರ್ ನ ಟ್ರೆಂಡ್ ಈ ವರ್ಷದ ರುಪಾಯಿ ಮೌಲ್ಯವನ್ನು ನಿರ್ಧರಿಸುತ್ತದೆ. ಕೆಲವು ಹೂಡಿಕೆದಾರರ ಭರವಸೆ ಏನೆಂದರೆ, ಭಾರತದ ಬಂಡವಾಳ ಮಾರುಕಟ್ಟೆಗೆ ಇನ್ನಷ್ಟು ಹಣ ಹರಿದುಬರಲಿದೆ.

ಜಾಗತಿಕ ಬಂಡವಾಳ ಹೂಡಿಕೆದಾರರು ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಹಾಕಬಹುದಾದ ಮೊತ್ತದ ಮಿತಿ ಮುಗಿದಿದೆ. ಸದ್ಯದ ಮಟ್ಟಿಗೆ ಷೇರು ಮಾರುಕಟ್ಟೆ ಕೂಡ ಸ್ವಲ್ಪ ದುಬಾರಿಯಂತೆ ಗೋಚರಿಸುತ್ತಿದೆ ಎನ್ನುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
So far this year Indian rupee is among the best performing currencies in the world, rising over 6 per cent against the US dollar. It was trading near two-year high of 63.63/dollar on August 4, 2017.
Please Wait while comments are loading...