ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ 500, 1,000 ತಗೊಳ್ತಿಲ್ಲ

ಪೆಟ್ರೋಲ್ ಬಂಕ್ ಗಳಲ್ಲಂತೂ ವಿಪರೀತ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇಡೀ ದೇಶದಲ್ಲೇ ಇಂಥ ಸ್ಥಿತಿ ಇದೆ. ಇನ್ನು ಲೆಕ್ಕಾಚಾರದಲ್ಲಿ ಹಣ ಖರ್ಚು ಮಾಡುವ, ಅಗತ್ಯ ಕಂಡಾಗ ಮಾತ್ರ ಎಟಿಎಂನಿಂದ ಹಣ ಡ್ರಾ ಮಾಡುವ ವೇತನದಾರರು ಕಂಗಾಲಾಗಿದ್ದಾರೆ.

By ಅನುಷಾ ರವಿ
|
Google Oneindia Kannada News

ಬೆಂಗಳೂರು, ನವೆಂಬರ್ 9: ಬಹುತೇಕ ಕಡೆ ಒಂದೇ ಥರದ ವಾತಾವರಣ. ಸಣ್ಣ ವಾಗ್ವಾದ, ಮಾತುಕತೆ, ಹೀಗೆ ಮಾಡಿದರೆ ಹೇಗೆ ಎಂಬ ಸಿಟ್ಟು..ಈ ದೃಶ್ಯಗಳ ಸ್ಥಳದ ಬದಲಾವಣೆ ಅದರೂ ಮಾತುಕತೆ, ಸಿಟ್ಟು, ಸೆಡವು ಮಾತ್ರ ಒಂದೇ ಥರ ಕಾಣುತ್ತಿದೆ. ನಿಮ್ಮ ಊಹೆ ನಿಜ. 500, 1000ದ ನೋಟು ತಗೊಳ್ತಾನೆ ಇಲ್ಲ ಅನ್ನೋದು ಎಲ್ಲ ಕಡೆ ಕೇಳಿ ಬರುತ್ತಿರುವ ಆರೋಪ.

ಪೆಟ್ರೋಲ್ ಬಂಕ್ ಗಳಲ್ಲಂತೂ ವಿಪರೀತ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇಡೀ ದೇಶದಲ್ಲೇ ಇಂಥ ಸ್ಥಿತಿ ಇದೆ. ಇನ್ನು ಲೆಕ್ಕಾಚಾರದಲ್ಲಿ ಹಣ ಖರ್ಚು ಮಾಡುವ, ತುಂಬ ಅಗತ್ಯ ಕಂಡಾಗ ಮಾತ್ರ ಎಟಿಎಂನಿಂದ ಹಣ ಡ್ರಾ ಮಾಡುವ ವೇತನದಾರರು ಅಕ್ಷರಶಃ ಕಂಗಾಲಾಗಿದ್ದಾರೆ. ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ದುಡ್ಡನ್ನೇ ಕೊಡುತ್ತಿದ್ದಾರೆ.[ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]

Rs 500, 1,000 notes scrapped- Not all petrol bunks are exchanging notes

ಆದರೆ, 72 ಗಂಟೆ ಕಾಲ ಪೆಟ್ರೋಲ್ ಬಂಕ್ ಗಳಲ್ಲಿ ಹಳೆ 500, 1000ದ ನೋಟು ತಗೋಬೇಕು. ಆದರೆ ಕೆಲವು ಬಂಕ್ ಗಳಲ್ಲಿ ಸ್ವೀಕರಿಸುತ್ತಿಲ್ಲ. ಕೆಲವರಂತೂ ತಮ್ಮ ಬಳಿಯಿರುವ ಹಳೇ ನೋಟು ಬಂಕ್ ಗಳಲ್ಲಿ ಬದಲಿಸಿಕೊಳ್ಳಬಹುದು ಅಂತಲೇ ಹೋಗ್ತಿದ್ದಾರೆ. ಬ್ಯಾಂಕ್ ನಲ್ಲಿ ವಿಪರೀತ ಅನ್ನೋಷ್ಟು ಜನ ಸೇರ್ತಾರೆ. ಆದ್ದರಿಂದ ಬಂಕ್ ಸುಲಭದ ಮಾರ್ಗ ಎಂದು ಹಲವರು ಯೋಚಿಸ್ತಿದ್ದಾರೆ.

Rs 500, 1,000 notes scrapped- Not all petrol bunks are exchanging notes

ಬ್ಯಾಂಕ್ ಗಳು ತೆರೆದು, ಅವು ಪುರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸುವವರೆಗೆ ಈ ಸಮಸ್ಯೆ ಹೀಗೆ ಇರುತ್ತೆ. ಇನ್ನು ಬುಧವಾರ ದಿನದ ಆರಂಭದಲ್ಲೇ ಈ ಪರಿಯ ಗೊಂದಲ ಕಾಣಿಸಿಕೊಂಡಿದೆ. ಇನ್ನು ಸಂಜೆ ಹಾಗೂ ರಾತ್ರಿ ವೇಳೆಗೆ ಹೇಗಾಗಬಹುದು ಎಂಬ ಚಿಂತೆ ಎದುರಾಗಿದೆ. ಈ ಸನ್ನಿವೇಶ ಎದುರಿಸುವುದು ದೇಶದಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳಿಗೆ ಸಲೀಸಲ್ಲ.[ಎಲ್ಲರ ಕೈಲೂ ದೊಡ್ಡ ನೋಟು , ದೇಶದೆಲ್ಲೆಡೆ ಎಟಿಎಂಗಳಲ್ಲಿ ನೂಕು ನುಗ್ಗಲು]

English summary
A mad rush was witnessed at petrol bunks across the country following the decision to declare Rs 500 and 1,000 notes as invalid. Several salaried employees who withdrew money from ATMs were seen making a beeline to the petrol bunks with the hope of having the money exchanged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X