ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3.92 ಲಕ್ಷ ಕೋಟಿ ಸ್ಪೆಕ್ಟ್ರಂ ಹರಾಜು: ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾದಿಂದ ಅರ್ಜಿ ಸಲ್ಲಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಮುಂಬರುವ ತಿಂಗಳಿನಲ್ಲಿ ನಡೆಯಲಿರುವ ಬಹುಕೋಟಿ 3.92 ಲಕ್ಷ ಕೋಟಿ ಸ್ಪೆಕ್ಟ್ರಂ ಹರಾಜಿಗೆ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಅರ್ಜಿ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್‌ 1ರಿಂದ ಪ್ರಾರಂಭಗೊಳ್ಳಲಿರುವ 3.92 ಲಕ್ಷ ಕೋಟಿ ಸ್ಪೆಕ್ಟ್ರಂ ಹರಾಜಿನಲ್ಲಿ ಈ ಟೆಲಿಕಾಂ ಕಂಪನಿಗಳು ಭಾಗಿಯಾಗಲಿದ್ದು, 700 Mhz, 800 Mhz, 900 Mhz, 1800 Mhz 2100 Mhz, 2300 Mhz ಮತ್ತು 2500 Mhz ಸೇರಿದಂತೆ ಏಳು ಆವರ್ತನ ಬ್ಯಾಂಡ್‌ಗಳಲ್ಲಿ ಹರಾಜು ನಡೆಯಲಿದೆ.

ಗುಡ್‌ನ್ಯೂಸ್‌: 150 ಜಿಬಿ ಉಚಿತ ಡೇಟಾ ಪಡೆಯುವುದು ಹೇಗೆ?ಗುಡ್‌ನ್ಯೂಸ್‌: 150 ಜಿಬಿ ಉಚಿತ ಡೇಟಾ ಪಡೆಯುವುದು ಹೇಗೆ?

''ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಸ್ಪೆಕ್ಟ್ರಂ ಹರಾಜಿಗೆ ಅರ್ಜಿ ಸಲ್ಲಿಸಿವೆ'' ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.

Rs 3.92 Lakh Crore Spectrum Auction: Airtel, Jio And Vodafone Submits Applications

ಭಾರ್ತಿ ಏರ್‌ಟೆಲ್‌ನ 900 ಮೆಗಾಹರ್ಟ್ಸ್‌ ಬ್ಯಾಂಡ್‌ನಲ್ಲಿ 12.4 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್ , ರಿಲಯನ್ಸ್ ಕಮ್ಯುನಿಕೇಷನ್ಸ್ 800 ಮೆಗಾಹರ್ಟ್ಸ್‌ ಬ್ಯಾಂಡ್‌ನಲ್ಲಿ 44 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್ ಅಡಿಯಲ್ಲಿ ನವೀಕರಣಕ್ಕೆ ಬರಲಿದೆ. ಕೆಲವು ವಲಯಗಳಲ್ಲಿ ಸ್ಪೆಕ್ಟ್ರಮ್ ನವೀಕರಣಕ್ಕಾಗಿ ಹರಾಜಿನಲ್ಲಿ ನಷ್ಟ ಅನುಭವಿಸುವ ಕಾರಣದಿಂದ ವೊಡಾಫೋನ್ ಐಡಿಯಾ ಭಾಗವಹಿಸದಿರಬಹದು ಎನ್ನಲಾಗಿದೆ.

ಟೆಲಿಕಾಂ ಆಪರೇಟರ್‌ಗಳು 900 ಮೆಗಾಹರ್ಟ್ಸ್‌ ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಪಡೆಯುವ ಮೂಲಕ ಇದನ್ನು 4 ಜಿ ಸೇವೆಗಳಿಗೆ ಬಳಸಲಾಗುತ್ತದೆ.

English summary
Telecom operators Bharti Airtel, Reliance Jio and Vodafone Idea on Tuesday submitted applications to participate in the Rs 3.92 lakh crore spectrum auction
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X