ಜಿಯೋದಿಂದ ಭಾರತದ ಜಿಡಿಪಿಯಲ್ಲಿ ಶೇಕಡಾ 5.65ರಷ್ಟು ಏರಿಕೆ

Subscribe to Oneindia Kannada

ನವದೆಹಲಿ, ಏಪ್ರಿಲ್ 8: ಟೆಲಿಕಾಂ ಮಾರುಕಟ್ಟೆಗೆ ರಿಲಯನ್ಸ್ ಜಿಯೋ ಪ್ರವೇಶವಾಗಿದ್ದರಿಂದ ದೇಶದ ಪರ್ ಕ್ಯಾಪಿಟಲ್ ಜಿಡಿಪಿ ಶೇಕಡಾ 5.65 ರಷ್ಟು ಏರಿಕೆಯಾಗಲಿದೆ ಎಂದು ವರದಿಯೊಂದ ಹೇಳಿದೆ. ಜಿಯೋದಿಂದ ಗ್ರಾಹಕರಿಗೆ 1000 ಕೋಟಿ ಡಾಲರ್ ಹಣ ಉಳಿತಾಯವಾಗಿದೆ ಇದೇ ಜಿಡಿಪಿ ಏರಿಕೆಗೆ ಕಾರಣ ಎಂದು ಗುರುಗ್ರಾಮ ಮೂಲದ ಇನ್ಸ್ ಟ್ಯೂಟ್ ಫಾರ್ ಕಾಪಿಟೇಟಿವ್ ನೆಸ್ (ಐಎಫ್ ಸಿ) ಹೇಳಿದೆ.

ಜಿಯೋ ಬಂದ ನಂತರ ಪ್ರತಿ ಜಿಬಿ ಇಂಟರ್ ನೆಟ್ ಬೆಲೆ 152ರಿಂದ 10 ರೂ. ಗೆ ಇಳಿಕೆಯಾಗಿದೆ. ದೊಡ್ಡ ಮಟ್ಟದ ಭಾರತೀಯ ಜನರಿಗೆ ಇದರಿಂದ ಇಂಟರ್ ನೆಟ್ ಸೌಲಭ್ಯ ಸಿಗುವಂತಾಗಿದೆ. ಇದರಿಂದ ದೇಶದ ಮೊಬೈಲ್ ಬಳಕೆ ಅಸಾಧ್ಯವಾಗಿದ್ದ ದೇಶದ ಜನರಿಗೆ ಇಂಟರ್ ನೆಟ್ ಬಳಕೆ ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ಭಾರತದ ಆರ್ಥಿಕತೆಯಲ್ಲಿ ಎಲ್ಲವೂ ಸ್ಥಿರವಾಗಿದ್ದು ವಿಸ್ತಾರವಾದ ನೆಟ್ ವರ್ಕ್ ನಿಂದ ಭಾರತದ ಜಿಡಿಪಿಗೆ ಜಿಯೋ ಉತ್ತೇಜನ ನೀಡಲಿದೆ ಎಂದು ವರದಿ ತಿಳಿಸಿದೆ.

 ‘Reliance Jio’s entry would boost India GDP by 5.65%

ಜಿಯೋ ಆರಂಭವಾದ 6 ತಿಂಗಳಲ್ಲೇ ಭಾರತ ಇಂಟರ್ನೆಟ್ ಡೇಟಾ ಬಳಕೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಏರಿತ್ತು. ಈ ಹಿಂದೆ ಭಾರತದ ಗ್ರಾಹಕರು ಪ್ರತೀ ತಿಂಗಳು 20 ಕೋಟಿ ಡೇಟಾ ಬಳಕೆ ಮಾಡುತ್ತಿತ್ತು. ಜಿಯೋ ಬಳಿಕ ಈ ಪ್ರಮಾಣ 100 ಕೋಟಿಗೆ ಏರಿಕೆಯಾಗಿತ್ತು.

2017 ರ ಅಂತ್ಯಕ್ಕೆ ಜಿಯೋ ಬಳಕೆದಾರರು ತಿಂಗಳಿಗೆ ಸರಾಸರಿ 10 ಜಿಬಿ ಇಂಟರ್ನೆಟ್, 700 ನಿಮಿಷಗಳ ಕರೆ, 134 ಗಂಟೆಗಳ ವಿಡಿಯೋ ಬಳಕೆ ಮಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Jio Infocomm Ltd’s entry in September 2016 led to expand India’s per capita GDP by about 5.65%, says a report of Institute for Competitiveness (IFC).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ