ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಜತೆಗೆ ಕೈ ಜೋಡಿಸಲಿದೆ ರಿಲಯನ್ಸ್ ಜಿಯೊ

ಈಗಾಗಲೇ ವಿಶ್ವದ ಆಯ್ದ ದೇಶಗಳಲ್ಲಿ ಆ್ಯಂಡ್ರಾಯ್ಡ್ ಒನ್ ಆಪರೇಟಿಂಗ್ ಸಿಸ್ಟಂ ಫೋನುಗಳನ್ನು ಪರಿಚಯಿಸಿರುವ ಗೂಗಲ್ ಸಂಸ್ಥೆಗೆ ಭಾರತದಲ್ಲಿ ಹೊಸ ಮಾರುಕಟ್ಟೆ ವೃದ್ಧಿಸುವ ಕನಸು ಸಾಕಾರವಾಗುವ ಸಾಧ್ಯತೆ.

|
Google Oneindia Kannada News

ನವದೆಹಲಿ, ಮಾರ್ಚ್ 14: ಕಳೆದ ವರ್ಷ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸುವ ಮೂಲಕ 10 ಕೋಟಿ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದ್ದ ರಿಲಯನ್ಸ್ ಜಿಯೋ, ಇದೀಗ, ಮತ್ತೊಂದು ದಾಪುಗಾಲಿಡುವ ಪ್ರಯತ್ನಕ್ಕೆ ಕೈ ಹಾಕಿದೆ.

ಜಗತ್ತಿನ ದೈತ್ಯ ಸಾಫ್ಟ್ ವೇರ್ ಕಂಪನಿಯಾದ ಗೂಗಲ್ ಜತೆಗೆ ಕೈ ಜೋಡಿಸಲು ಚಿಂತನೆ ನಡೆಸಿರುವ ರಿಲಯನ್ಸ್ ಜಿಯೋ, ಇದೇ ವರ್ಷಾಂತ್ಯಕ್ಕೆ ಭಾರತದಲ್ಲಿ ಹೊಸ ಫೋನ್ ಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

Reliance Jio to team up with Google for 4G-VoLTE smartphone

ಈಗಾಗಲೇ ವಿಶ್ವದ ಆಯ್ದ ದೇಶಗಳಲ್ಲಿ ಆ್ಯಂಡ್ರಾಯ್ಡ್ ಒನ್ ಆಪರೇಟಿಂಗ್ ಸಿಸ್ಟಂ ಸಾಫ್ಟ್ ವೇರ್ ಗಳುಳ್ಳ ಫೋನುಗಳನ್ನು ಬಿಡುಗಡೆ ಮಾಡುವ ಮೂಲಕ ಆ್ಯಂಡ್ರಾಯ್ಡ್ ಫೋನ್ ಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸಲು ಸೃಷ್ಟಿಸುವ ಸನ್ನಾಹದಲ್ಲಿರುವ ಗೂಗಲ್ ಕಂಪನಿಯು ಇದೀಗ ಜಿಯೊ ಜತೆಗೆ ಕೈ ಜೋಡಿಸಿ ಅದೇ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಆಲೋಚಿಸುತ್ತಿದೆ ಎಂದೂ ಹೇಳಲಾಗಿದೆ.

ಈ ಯೋಜನೆ ಸಾಧ್ಯವಾದರೆ, ಆ್ಯಂಡ್ರಾಯ್ಡ್ ಒನ್ ಸಾಫ್ಟ್ ವೇರ್ ನ ಮೂರನೇ ಆವೃತ್ತಿಯ ಫೋನುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಎರಡೂ ಕಂಪನಿಗಳು ಮಾತುಕತೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.

English summary
Reliance Jio, which kicked up a huge storm in the Indian telecom sector late last year with its promotional offers, is reportedly working with search engine giant Google to make smartphones in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X