• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋ ರೀಚಾರ್ಜ್ ಮಾಡಿ ನಾಲ್ಕು ಪಟ್ಟು ಹೆಚ್ಚು ಲಾಭ ಪಡೆಯಿರಿ

|

ಬೆಂಗಳೂರು, ಜೂನ್ 3: ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ, ಜೂನ್ ತಿಂಗಳ ವಿಶೇಷ ರೀಚಾರ್ಜ್ ಪ್ಯಾಕ್ ಆಫರ್ ಪ್ರಕಟಿಸಿದೆ.

ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ರಿಲಯನ್ಸ್ ಇತರೆ ಉತ್ಪನ್ನಗಳ ಲಾಭವನ್ನು ರೀಚಾರ್ಜ್ ಮಾಡಿಸಿಕೊಂಡವರು ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋದ 4X ಆಫರ್ ಬಗ್ಗೆ ಇಲ್ಲಿ ವಿವರವಿದೆ.

ಏರ್‌ಟೆಲ್, ಜಿಯೋ ಬಳಿಕ ವೊಡಾಫೋನ್ ಭರ್ಜರಿ ಆಫರ್: ದಿನಕ್ಕೆ 2ಜಿಬಿ ಡೇಟಾ

ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ರೀಚಾಜ್ ಆಫರ್ ಗಳನ್ನು ನೀಡಲು ಮುಂದಾಗಿದೆ. ಒಮ್ಮೆ ರೀಚಾರ್ಜ್ ಮಾಡಿಸಿದರೆ ಅದಕ್ಕಿಂತ ನಾಲ್ಕು ಪಟ್ಟು ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ಬಳಕೆದಾರರು ಜೂನ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ರಿಲಯನ್ಸ್ ಡಿಜಿಟಲ್, ಎಜಿಯೊ, ಟ್ರೆಂಡ್ಸ್ ಮತ್ತು ಟ್ರೆಂಡ್ಸ್ ಪಾದರಕ್ಷೆಗಳ ತಲಾ ಒಂದು ರಿಯಾಯಿತಿ ಕೂಪನ್ ಪಡೆಯಲಿದ್ದಾರೆ.

ಲಾಕ್ಡೌನ್ ಆಫರ್ : ಜಿಯೋ ರೀಚಾರ್ಜ್ ಮಾಡಿ ಕಮಿಷನ್ ಗಳಿಸಿ

ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳಲು ಜಿಯೋ ಪೋಸ್ (JioPOS) ಆಪ್ ಬಳಸಬಹುದು. ಈಗಾಗಲೇ ಐದು ಲಕ್ಷ ಜನರು ಡೌನ್‌ ಲೋಡ್ ಮಾಡಿದ್ದಾರೆ. ಅಲ್ಲದೇ ಈ ಲಾಕ್ ಡೌನ್ ಸಂದರ್ಭದಲ್ಲಿ ಜಿಯೋ ಬಳಕೆದಾರರಿಗೆ ಸುಲಭ ರೀತಿಯಲ್ಲಿ ರೀಚಾರ್ಜ್ ಮಾಡಿಕೊಳ್ಳಲು ಇದೊಂದು ಉತ್ತಮ ಆಯ್ಕೆಯಾಗಲಿದೆ.

ರೀಚಾರ್ಜ್ ಮಾಡಿಕೊಳ್ಳಲು ಹಲವು ವಿಧಾನ

ರೀಚಾರ್ಜ್ ಮಾಡಿಕೊಳ್ಳಲು ಹಲವು ವಿಧಾನ

ಜಿಯೋ ಬಳಕೆದಾರರು ಜೂನ್‌ನಲ್ಲಿ ರೂ.249 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳನ್ನು ಮಾಡಿಸಿಕೊಂಡಲ್ಲಿ 4X ಹೆಚ್ಚು ಲಾಭದ ಈ ಕೊಡುಗೆ ಅನ್ವಯವಾಗುತ್ತದೆ. ಜಿಯೋ ಬಳಕೆದಾರರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೈಜಿಯೊ, ಜಿಯೋ ಡಾಟ್ ಕಾಮ್, ಜಿಯೋ ಪೋಸ್‌ಲೈಟ್, ಹತ್ತಿರದ ಜಿಯೋ ಸ್ಟೋರ್, ಫೋನ್‌ಪೇ / ಗೂಗಲ್‌ಪೇ / ಪೇಟಿಎಂ / ಅಮೆಜಾನ್ ಪೇ / ಜಿಯೋಮನಿ ಇತ್ಯಾದಿಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದು.

ಮೈಜಿಯೋ ಅಪ್ಲಿಕೇಶನ್‌ನಲ್ಲಿ 'ಕೂಪನ್' ವಿಭಾಗ

ಮೈಜಿಯೋ ಅಪ್ಲಿಕೇಶನ್‌ನಲ್ಲಿ 'ಕೂಪನ್' ವಿಭಾಗ

ಮೈಜಿಯೋ ಅಪ್ಲಿಕೇಶನ್‌ನಲ್ಲಿ 'ಕೂಪನ್' ವಿಭಾಗದ ಅಡಿಯಲ್ಲಿ ನೀವು ಕೂಪನ್‌ಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಕೂಪನ್ ಅನ್ನು 72 ಗಂಟೆಗಳ ಒಳಗೆ ಜಮಾ ಮಾಡಲಾಗುತ್ತದೆ. ರೂ. 249 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಯಶಸ್ವಿಯಾಗಿ ರೀಚಾರ್ಜ್ ಮಾಡಿದವರಿಗೆ ಮಾತ್ರ ದೊರೆಯಲಿದೆ.

ಜಿಯೋ ಹಳೆ, ಹೊಸ ಗ್ರಾಹಕರೆಲ್ಲರಿಗೂ ಆಫರ್ ಲಭ್ಯ

ಜಿಯೋ ಹಳೆ, ಹೊಸ ಗ್ರಾಹಕರೆಲ್ಲರಿಗೂ ಆಫರ್ ಲಭ್ಯ

ಈ ಜಿಯೋ ಹೊಸ ಯೋಜನೆ ಎಲ್ಲಾ ಜಿಯೋ ಬಳಕೆದಾರರಿಗೆ ಲಭ್ಯವಿದೆ, ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವವರಿಗೆ ಮತ್ತು ಹೊಸದಾಗಿ ಜಿಯೋ ಬಳಕೆಯನ್ನು ಆರಂಭಿಸುವವರಿಗೂ ಈ ಯೋಜನೆ ಲಭ್ಯವಿರಲಿದೆ.

ಜಿಯೋ ಬಳಕೆದಾರರು ಜೂನ್ 1 ರಿಂದ 2020 ರ ಜೂನ್ 30ರ ವರೆಗೆ ರೀಚಾರ್ಜ್ ಮಾಡಿಸಿಕೊಂಡರೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಮೈಜಿಯೋದ ಕೂಪನ್ ವಿಭಾಗದಲ್ಲಿ ಕೂಪನ್‌ಗಳು ಲಭ್ಯವಿರುತ್ತವೆ.

ಜಿಯೋ ಅಸೋಸಿಯೇಟ್ ಪ್ರೋಗ್ರಾಂ

ಜಿಯೋ ಅಸೋಸಿಯೇಟ್ ಪ್ರೋಗ್ರಾಂ

ಜಿಯೋ ರೀಚಾರ್ಜ್ ಮಾಡಿ ನಾಲ್ಕು ಪಟ್ಟು ಲಾಭ ಗಳಿಸಿ!

ಹೊಸದಾಗಿ ಜಿಯೋ ಅಸೋಸಿಯೇಟ್ ಪ್ರೋಗ್ರಾಂ ಅನ್ನು ಪರಿಚಯಿಸಿದೆ, ಇದರ ಮೂಲಕ ಯಾವುದೇ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಪರಿಚಯಸ್ಥರಿಗೆ ರೀಚಾರ್ಜ್ ಮಾಡಬಹುದು ಮತ್ತು ಹಾಗೆ ಪ್ರತಿ ಬಾರಿ ರೀಚಾರ್ಜ್ ಮಾಡುವಾಗ ಹಣವನ್ನು ಗಳಿಸಬಹುದು. ಒಮ್ಮೆ ರೀಚಾರ್ಜ್ ಮಾಡಿದರೆ 4% ಕಮೀಷನ್ ಸಹ ಪಡೆಯಬಹುದಾಗಿದೆ.

English summary
Telecom gaint Reliance Jio has announced on recharges of Rs 249 and above will get you 4X Benefit. here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more