ಜಿಯೋ ಗ್ರಾಹಕರಿಗೆ ಆಘಾತ, ಇಂಟರ್ನೆಟ್ ಟ್ಯಾರಿಫ್ ಹೆಚ್ಚಳ
ಬೆಂಗಳೂರು, ಮಾರ್ಚ್ 8: ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ರಿಲಯನ್ಸ್ ಸಂಸ್ಥೆಯ ಜಿಯೋ ಈಗ ತನ್ನ ಗ್ರಾಹಕರ ಮೇಲೆ ನಿಧಾನಗತಿಯಲ್ಲಿ ಹಂತ ಹಂತವಾಗಿ ಎಲ್ಲದ್ದಕ್ಕೂ ಶುಲ್ಕ ವಿಧಿಸತೊಡಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟಾಯ್)ಕ್ಕೆ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದರೆ, ಜಿಯೋ ಗ್ರಾಹಕರು ಇಂಟರ್ನೆಟ್ ಬಳಕೆಗೆ ಹೆಚ್ಚಿನ ಮೊತ್ತ ನೀಡಬೇಕಾಗುತ್ತದೆ.
ಗ್ರಾಹಕರು ಬಳಸುವ ಪ್ರತಿ ಜಿಬಿ ಮೊಬೈಲ್ ಇಂಟರ್ನೆಟ್ ಗೆ ಏಕರೂಪದ ಬೆಲೆ ನಿಗದಿ ಪಡಿಸುವಂತೆ ಟ್ರಾಯ್ ಮುಂದೆ ಜಿಯೋ ಮನವಿ ಮಾಡಿಕೊಂಡಿದೆ.
ಜಿಯೋ ಮಾಡಿಕೊಂಡಿರುವ ಮನವಿಯಲ್ಲಿ 1 ಜಿಬಿ ಇಂಟರ್ನೆಟ್ ಡೇಟಾ ಬಳಕೆಗೆ 15 ರುಪಾಯಿ ನಿಗದಿ ಮಾಡುವಂತೆ ಕೋರಲಾಗಿದೆ. 15 ಜಿಬಿ ಡೇಟಾ ಬಳಕೆ ನಂತರ ಮುಂಬರುವ 6 ರಿಂದ 9 ತಿಂಗಳ ಅವಧಿಯಲ್ಲಿ ಈ ಬೆಲೆಯನ್ನು 20 ರುಪಾಯಿಗೆ ಹೆಚ್ಚಳ ಮಾಡುವಂತೆ ಕೋರಲಾಗಿದೆ.

ಸದ್ಯ 1 ಜಿಬಿ ಡೇಟಾಗೆ 6 ರಿಂದ 9 ರುಪಾಯಿ ನಿಗದಿಪಡಿಸಲಾಗಿದೆ. ಒಂದು ವೇಳೆ ಜಿಯೋ ಪ್ರಸ್ತಾವನೆಗೆ ಟ್ರಾಯ್ ಒಪ್ಪಿಗೆ ಸೂಚಿಸಿದರೆ ಜಿಯೋ ಮಾತ್ರವಲ್ಲದೆ ಉಳಿದ ಟೆಲಿಕಾಂ ಸಂಸ್ಥೆಗಳ ಇಂಟರ್ನೆಟ್ ಡೇಟಾ ಬಳಕೆ ದರ ಕೂಡಾ ಹೆಚ್ಚಾಗಲಿದೆ. ಬಹುತೇಕ ಎಲ್ಲಾ ಡೇಟಾ ಬಳಕೆ ದರ ಎರಡು ಪಟ್ಟು ಅಧಿಕವಾಗಲಿದೆ. ವೋಡಾಫೋನ್ ಐಡಿಯಾ ಈ ಮುಂಚೆ ಟ್ರಾಯ್ ಮುಂದೆ ಇದೇ ರೀತಿ ಪ್ರಸ್ತಾವನೆ ಸಲ್ಲಿಸಿತ್ತು. 1ಜಿಬಿ ಡೇಟಾ ಪ್ಲಸ್ ವಾಯ್ಸ್ ಕರೆಗೆ 6 ರು ಪ್ರತಿ ನಿಮಿಷದಂತೆ ನಿಗದಿಮಾಡುವಂತೆ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications