ಏಪ್ರಿಲ್ 30ರ ತನಕ ಜಿಯೋ ಹ್ಯಾಪಿ ನ್ಯೂ ಇಯರ್ ಯೋಜನೆ ವಿಸ್ತರಣೆ?
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ನೀಡಿರುವ ಹ್ಯಾಪಿ ನ್ಯೂ ಇಯರ್ ಆಫರ್ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು, ನಂತರ ಗ್ರಾಹಕರು ಹಣ ನೀಡಿ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಏಪ್ರಿಲ್ 30ರ ತನಕ ವಿಸ್ತರಣೆ ಸಾಧ್ಯತೆ
ಬೆಂಗಳೂರು, ಮಾರ್ಚ್ 27: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ನೀಡಿರುವ ಹ್ಯಾಪಿ ನ್ಯೂ ಇಯರ್ ಆಫರ್ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದ್ದು, ನಂತರ ಗ್ರಾಹಕರು ಹಣ ನೀಡಿ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ, ಯೋಜನೆಯನ್ನು ಏಪ್ರಿಲ್ 30ರ ತನಕ ವಿಸ್ತರಿಸುವ ಸುಳಿವು ಸಿಕ್ಕಿದೆ.
ಸೆಪ್ಟೆಂಬರ್ 5,2016ರಂದು ಚಾಲನೆ ಸಿಕ್ಕ ಈ ಆಫರ್ ನಲ್ಲಿ ಗ್ರಾಹಕರಿಗೆ ಉಚಿತ ಜಿಯೋ ಸಿಮ್, ಅನಿಯಮಿತ ಇಂಟರ್ನೆಟ್ ಡಾಟಾ, ಉಚಿತ ವಾಯ್ಸ್ ಕಾಲ್ ನೀಡಲಾಯಿತು. [ಟೆಲಿಕಾಂ ಸಮರ : ಜಿಯೋ ಪ್ರೈಮ್ vs ಏರ್ ಟೆಲ್, ವೋಡಾಫೋನ್, ಐಡಿಯಾ]
ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ : ಡಿಸೆಂಬರ್ 01ರಂದು ಚಾಲನೆ ನೀಡಲಾಯಿತು. ಇದರಲ್ಲಿ ಪ್ರತಿ ದಿನ 1 ಜಿಬಿ ಡಾಟಾ ಉಚಿತವಾಗಿದ್ದು, ಮೊದಲ ಬಾರಿಗೆ ಗ್ರಾಹಕರಿಂದ ಹಣ ಪಡೆಯುವ ವ್ಯವಸ್ಥೆಗೆ ರಿಲಯನ್ಸ್ ಕಾಲಿಟ್ಟಿತು. ಈಗ ಈ ಯೋಜನೆ ವಿಸ್ತರಣೆಯಾಗಲಿದೆ.

ಜಿಯೋ ಪ್ರೈಮ್: ಫೆಬ್ರವರಿ 21, 2017ರಂದು ಚಾಲನೆ ಸಿಕ್ಕ ಈ ಆಫರ್ ನಲ್ಲಿ ಪ್ರತಿದಿನ 1 ಜಿಬಿ ಉಚಿತ ಡಾಟಾ 303 ಪ್ರತಿ ತಿಂಗಳ ರೀಚಾರ್ಚ್ ನೊಂದಿಗೆ ಮಾರ್ಚ್ 31, 2017ರ ತನಕ ಲಭ್ಯ. ವಾರ್ಷಿಕ 99ರು ಪಾವತಿಸಿದರೆ ಮಾರ್ಚ್ 31, 2018ರ ತನಕ ಸದಸ್ಯತ್ವ ಖಾತ್ರಿ. ಜತೆಗೆ ಪ್ರತಿ ತಿಂಗಳ 303 ರೀಚಾರ್ಜ್ ನೊಂದಿಗೆ 28 ದಿನಕ್ಕೆ 28ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಿರುತ್ತದೆ.
ಜಿಯೋ ಪ್ರೈಮ್ ನಲ್ಲಿ ಏನೇನಿದೆ? :
• 12 ತಿಂಗಳುಗಳಿಗೆ ಆಫರ್ ಮಾನ್ಯವಾಗಿರುತ್ತದೆ, ಅಂದರೆ 2018ರ ಮಾರ್ಚ್ ತನಕ ಆಫರ್ ಕೇವಲ ಕೆಲವೆ ಆಯ್ದ ಬಳಕೆದಾರರಿಗೆ, ಆಪರೇಟರ್‍ಗಳು ಆಯ್ಕೆ ಮಾಡಿದ (ವಿಭಜಿತ ಆಫರ್) ಬಳಕೆದಾರರಿಗೆ ಮಾತ್ರ ಮಾನ್ಯ.
• 15ನೇ ಮಾರ್ಚ್ 2017ಕ್ಕಿಂತ ಮುನ್ನ ಮೊದಲ ರಿಚಾರ್ಜ್ ಮಾಡಿದರೆ ಮಾತ್ರ ಆಫರ್ ಲಭ್ಯ.
• 4ಜಿ ಹ್ಯಾಂಡ್‍ಸೆಟ್‍ಗಳಿಗೆ ಮಾತ್ರ ಮಾನ್ಯ.
• 3ಜಿ ಬಳಕೆದಾರರಿಗೆ ಆಫರ್ ಮಾನ್ಯವಿರುವುದಿಲ್ಲ
• ಆಯ್ದ ವೃತ್ತಗಳಲ್ಲಿ ಮಾತ್ರ ಲಭ್ಯ 12 ತಿಂಗಳ ಖಾತರಿ ಇಲ್ಲ, ಯಾವುದೇ ವೇಳೆಯಲ್ಲಿ ಪೂರ್ವಸೂಚನೆ ಇಲ್ಲದೆ ಆಫರ್ ಹಿಂದೆಗೆದುಕೊಳ್ಳುವ ಹಕ್ಕನ್ನು ಆಪರೇಟರ್ ಹೊಂದಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications