ರಿಲಯನ್ಸ್ ಜಿಯೋ ಎಫೆಕ್ಟ್: ಏರ್ ಟೆಲ್ ಮಾರುಕಟ್ಟೆ ಮೌಲ್ಯ ಪತನ

Posted By:
Subscribe to Oneindia Kannada

ಮುಂಬೈ, ಸೆ.02: ಮುಖೇಶ್ ಅಂಬಾನಿ ನೇತೃತ್ವ ರಿಲಯನ್ಸ್ ಸಂಸ್ಥೆ ಹೊರ ತಂದಿರುವ ಜಿಯೋ ಆಫರ್ ನಿಂದಾಗಿ ದೇಶದ ದೊಡ್ಡ ಟೆಲಿಕಾಂ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ ಕುಸಿಯುತ್ತಿದೆ. ಕಳೆದ ಎರಡು ದಿನಗಳಲ್ಲಿ ಭಾರ್ತಿ ಏರ್ ಟೆಲ್ ಹಾಗೂ ಐಡಿಯಾ ಸೆಲ್ಯುಲಾರ್ ಸಂಸ್ಥೆಗೆ 4,500 ಕೋಟಿ ರು ನಷ್ಟ ಹಾಗೂ ಒಟ್ಟಾರೆ ಮಾರುಕಟ್ಟೆ ಮೌಲ್ಯದಲ್ಲಿ 15,600 ಕೋಟಿ ರು ಕಳೆದುಕೊಂಡಿವೆ.

ರಿಲಯನ್ಸ್ ಗ್ರಾಹಕರಿಗೆ ಉಚಿತ ವಾಯ್ಸ್ ಕಾಲಿಂಗ್, ದೇಶದೆಲ್ಲೆಡೆ ಉಚಿತ ರೋಮಿಂಗ್, ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದ ಡಾಟಾ ಯೋಜನೆ(ಇಂಟರ್ನೆಟ್ ಯೋಜನೆ) ಹೀಗೆ ಅನೇಕ ಆಫರ್ ಗಳನ್ನು ನೀಡಿರುವುದು ಮತ್ತೊಮ್ಮೆ ಟೆಲಿಕಾಂ ಸಂಸ್ಥೆಗಳ ದರ ಸಮರಕ್ಕೆ ನಾಂದಿ ಹಾಡಿದೆ. 50 ರು ಗಳಿಗೆ 1 ಜಿಬಿ ಡಾಟಾ ನೀಡುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಲಾಗಿದೆ. [ರಿಲಯನ್ಸ್ ಜಿಯೋ ಲೋಕಾರ್ಪಣೆ: ಗ್ರಾಹಕರಿಗೆ ವಾಯ್ಸ್ ಕಾಲ್ ಉಚಿತ]

Reliance Jio 4G announcement cost Airtel & Idea Rs 15, 600 crore

ರಿಲಯನ್ಸ್ ಸಂಸ್ಥೆಯ ಜಿಯೋ ಯೋಜನೆಯಿಂದಾಗಿ ಐಡಿಯಾ ಸೆಲ್ಯುಲಾರ್, ಏರ್ ಟೆಲ್ ಹಾಗೂ ವೊಡಾಫೋನ್ ಸಂಸ್ಥೆಗಳು ಭಾರಿ ನಷ್ಟವನ್ನು ಅನುಭವಿಸಿವೆ. ಅಂಬಾನಿ ಅವರು ಹೊಸ ಯೋಜನೆ ಘೋಷಿಸಿದ 2 ದಿನದಲ್ಲಿ ದೊಡ್ಡ ದೊಡ್ಡ ಟೆಲಿಕಾಂ ಸಂಸ್ಥೆಗಳು ಷೇರುಗಳ ಮೌಲ್ಯಗಳು ನೆಲಕಚ್ಚಿವೆ.

ಷೇರುಮಾರುಕಟ್ಟೆಯಲ್ಲಿ ಏರ್ ಟೆಲ್ ಷೇರಿನ ಮೌಲ್ಯದಲ್ಲಿ ಬರೊಬ್ಬರಿ ಶೇ.9ರಷ್ಟು ಇಳಿಕೆಯಾಗಿದ್ದು, ಕೇವಲ 302 ರು.ಗಳಿಗೆ ಏರ್ ಟೆಲ್ ಷೇರುಗಳು ಮಾರಾಟವಾಗುತ್ತಿದೆ. ಇದು ಕಳೆದ 52ವಾರಗಳಲ್ಲೇ ಅತ್ಯಂತ ಕಡಿಮೆ ಮೊತ್ತದ ಮೌಲ್ಯವಾಗಿದೆ. ಇದೇ ರೀತಿ ಐಡಿಯಾ ಸಂಸ್ಥೆಯ ಷೇರುಗಳ ಮೌಲ್ಯ ಕೂಡಾ ಶೇ 10.5 ರಷ್ಟು ಹಾಗೂ ಅನಿಲ್ ಅಂಬಾನಿ ಅವರ ರಿಲಯನ್ಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ 6.5ರಷ್ಟು ಇಳಿಕೆಯಾಗಿದೆ.

ಒಟ್ಟಾರೆ ಭಾರ್ತಿ ಏರ್ ಟೆಲ್ ಹಾಗೂ ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ 15,600 ಕೋಟಿ ರು ಇಳಿಕೆಯಾಗಿದೆ.

59ವರ್ಷ ವಯಸ್ಸಿನ ಮುಖೇಶ್ ಅಂಬಾನಿ ಅವರು 42ನೇ ಆಡಳಿತ ಮಂಡಳಿ ಸಭೆಯಲ್ಲಿ 45 ನಿಮಿಷ ಮಾತನಾಡಿದ್ದು 4ಜಿ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದೆಯಲ್ಲದೆ, ಏರ್ ಟೆಲ್ ಗೆ ಭಾರಿ ಪೆಟ್ಟುಕೊಟ್ಟಿದೆ. ಆದರೆ, ಸಣ್ಣ ಪ್ರಮಾಣದ ಜಾಲ ಹೊಂದಿರುವ ಸಂಸ್ಥೆಗಳಾದ ಒಏರ್ ಸೆಲ್, ಆರ್ ಕಾಮ್, ಟಾಟಾ ಡೊಕೊಮೊ, ಟೆಲ್ ನಾರ್ ತಕ್ಕಮಟ್ಟಿಗೆ ಬಚಾವಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mukesh Ambani's 45 minute speech caused the shares of telecom giants Airtel and Idea to crash. Shares of market leader Bharti Airtel fell over 9 per cent, while Aditya Birla Group-owned Idea Cellular shares sank as much as 11 per cent to 52-week low. Together, the two companies shed around Rs 15,600 crore in market capitalization at the day's lows.
Please Wait while comments are loading...