ರಿಲಯನ್ಸ್ ಫೌಂಡೇಶನ್ ಶಿಕ್ಷಕ ಪ್ರಶಸ್ತಿಗಳ ಘೋಷಣೆ
ಮುಂಬಯಿ, 14ನೇ ನವೆಂಬರ್ 2018: ಕಲಿಸುವಿಕೆಯ ಕ್ಷೇತ್ರದಲ್ಲಿ ಉದ್ಯೋಗಾವಾಕಾಶಗಳು, ಪ್ರತಿಫಲ ಹಾಗೂ ಮನ್ನಣೆಯನ್ನು ಒದಗಿಸುವ ಕೆಲಸದಲ್ಲಿ ದೇಶದ ಒಳಗೂ ಹೊರಗೂ ದಾಪುಗಾಲಿನಿಂದ ಬೆಳೆಯುತ್ತಿರುವ ಭಾರತ-ಮೂಲದ ಖಾಸಗಿ ಶಿಕ್ಷಕ ಪ್ರಮಾಣೀಕರಣ ಸಂಸ್ಥೆ ಸೆಂಟರ್ ಫಾರ್ ಟೀಚರ್ ಅಕ್ರಿಡಿಟೇಶನ್ (ಸೆಂಟಾ) ಜೊತೆಗೆ ರಿಲಯನ್ಸ್ ಫೌಂಡೇಶನ್ ಒಂದು ಬಹುವಾರ್ಷಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಸಹಭಾಗಿತ್ವದ ಅಂಗವಾಗಿ, ಸೆಂಟಾ ಟೀಚಿಂಗ್ ಪ್ರೊಫೆಶನಲ್ಸ್ ಒಲಿಂಪಿಯಾಡ್‌ನ (ಟಿಪಿಓ) ಪ್ರಧಾನ ಪ್ರಾಯೋಜಕತ್ವವನ್ನು ರಿಲಯನ್ಸ್ ಫೌಂಡೇಶನ್ ಪಡೆದುಕೊಂಡಿದೆ. ಶಿಕ್ಷಕರಿಗಾಗಿ ನಡೆಯುವ ಈ ವಾರ್ಷಿಕ ರಾಷ್ಟ್ರೀಯ ಸ್ಪರ್ಧೆಯ ನಾಲ್ಕನೇ ಆವೃತ್ತಿ ಡಿಸೆಂಬರ್ 8, 2018ರಂದು (ಶನಿವಾರ) ಭಾರತದಾದ್ಯಂತ 46 ನಗರಗಳಲ್ಲಿ ಹಾಗೂ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ.
ಪ್ರಾಥಮಿಕದಿಂದ ಹಿರಿಯ ಸೆಕೆಂಡರಿವರೆಗೆ ಟಿಪಿಓ 2018 ಸ್ಪರ್ಧೆಯು 21 ವಿಷಯ ವಿಭಾಗಗಳಲ್ಲಿ ಲಭ್ಯವಿದೆ; ಮಾಧ್ಯಮಿಕ ಶಾಲೆ, ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ವಿಭಾಗಗಳು ಪ್ರಸ್ತುತ ಇಂಗ್ಲಿಷ್ ಮಾಧ್ಯಮದಲ್ಲಿದ್ದರೆ, ಪ್ರಾಥಮಿಕ ಶಾಲೆಯ ಪರೀಕ್ಷಾ ವಿಭಾಗ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು ಮತ್ತು ತೆಲುಗು ಮಾಧ್ಯಮಗಳಲ್ಲಿ ಲಭ್ಯವಿದೆ.
ಈ ರಾಷ್ಟ್ರೀಯ ಸ್ಪರ್ಧೆಯ 1000 ವಿಜೇತರು ಇದೀಗ ರಿಲಯನ್ಸ್ ಫೌಂಡೇಶನ್ ಟೀಚರ್ ಅವಾರ್ಡ್‌ಗಳನ್ನು ಪಡೆಯಲಿದ್ದಾರೆ - ಪ್ರತಿಯೊಂದು ಪುರಸ್ಕಾರವೂ ನಗದು ಬಹುಮಾನ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ.

ರಿಲಯನ್ಸ್ ಸಮೂಹವು ಶಿಕ್ಷಣ ಕ್ಷೇತ್ರದಲ್ಲಿ ಎಡ್-ಟೆಕ್ ವೇದಿಕೆ ಜಿಯೋ ಎಂಬೈಬ್, ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆ, ರಿಲಯನ್ಸ್ ಫೌಂಡೇಷನ್ ಶಾಲೆಗಳು, ಮುಂಬರುವ ಜಿಯೋ ಯೂನಿವರ್ಸಿಟಿ ಮುಂತಾದ ಅನೇಕ ಉಪಕ್ರಮಗಳನ್ನು ಹೊಂದಿದೆ. ಈ ಸಹಯೋಗದೊಂದಿಗೆ, ಶೈಕ್ಷಣಿಕ ವ್ಯವಸ್ಥೆಯ ಪ್ರಮುಖ ಪಾಲುದಾರರಾದ ಶಿಕ್ಷಕರನ್ನು ಬೆಂಬಲಿಸುವುದು ರಿಲಯನ್ಸ್ ಫೌಂಡೇಶನ್ ಗುರಿಯಾಗಿದೆ.
ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಅವಕಾಶಗಳನ್ನು ಒದಗಿಸಲು ಜಿಯೋ ಎಂಬೈಬ್‌ನಂತಹ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುವ ಗುರಿಯನ್ನು ರಿಲಯನ್ಸ್ ಫೌಂಡೇಶನ್ ಇಟ್ಟುಕೊಂಡಿದೆ. ಶಿಕ್ಷಣವನ್ನು ಆಕರ್ಷಣೀಯ ವೃತ್ತಿಯನ್ನಾಗಿಸುವ ಹಾಗೂ ಆ ಮೂಲಕ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಉದ್ದೇಶವಿರುವ ಸೆಂಟಾ ಟಿಪಿಓ ಕಾರ್ಯಕ್ರಮದೊಡನೆ ಕೈಜೋಡಿಸುವ ಉದ್ದೇಶ ರಿಲಯನ್ಸ್ ಫೌಂಡೇಶನ್‌ನದು.
ಈಗಾಗಲೇ ರಾಷ್ಟ್ರವ್ಯಾಪಿಯಾಗಿ ಆಯೋಜಿಸಲಾಗುತ್ತಿರುವ ಸೆಂಟಾ ಟಿಪಿಓ ಕಾರ್ಯಕ್ರಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಹಾಗೂ ದೇಶದೆಲ್ಲೆಡೆಯ ಶಿಕ್ಷಕರು ಭಾಗವಹಿಸುವಂತೆ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಕೂಡ ರಿಲಯನ್ಸ್ ಫೌಂಡೇಶನ್ ಮುಂದಿದೆ.
ಈ ಸಹಯೋಗದ ಕುರಿತು ಮಾತನಾಡಿದ ರಿಲಯನ್ಸ್ ಫೌಂಡೇಶನ್ ನಿರ್ದೇಶಕಿ ಇಶಾ ಅಂಬಾನಿ, "ಶಿಕ್ಷಣವೂ ಸೇರಿದಂತೆ ಭಾರತದ ಬೆಳವಣಿಗೆಯ ಅತಿಪ್ರಮುಖ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸತನದ ಸುಸ್ಥಿರ ಪರಿಹಾರಗಳನ್ನು ಬೆಂಬಲಿಸುವುದು ರಿಲಯನ್ಸ್ ಫೌಂಡೇಶನ್ನಿನ ಗುರಿಯಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅಂತಹ ಶೈಕ್ಷಣಿಕ ಉಪಕ್ರಮಗಳನ್ನು ದೊಡ್ಡದಾಗಿ ಬೆಳೆಸಲು ತಂತ್ರಜ್ಞಾನ ನೆರವಾಗುತ್ತದೆ.
ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಶಿಕ್ಷಕರಿಗೆ ತಂತ್ರಜ್ಞಾನ ಹಾಗೂ ಡಿಜಿಟಲ್ ವೇದಿಕೆಗಳ ಶಕ್ತಿಯನ್ನು ಒದಗಿಸಲು, ರಾಷ್ಟ್ರನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುವ ಅವರ ಕೊಡುಗೆಗಳನ್ನು ಪುರಸ್ಕರಿಸಲು ನಮ್ಮ ಫೌಂಡೇಶನ್ ಉತ್ಸುಕವಾಗಿದೆ. ಶಿಕ್ಷಕರನ್ನು ಗುರುತಿಸುವ, ಪುರಸ್ಕರಿಸುವ ವೇದಿಕೆಗಳಿಗೆ ಬೆಂಬಲ ನೀಡುವ ನಮ್ಮ ಬದ್ಧತೆಯನ್ನು ಸೆಂಟಾ ಟಿಪಿಓ ಜೊತೆಗಿನ ನಮ್ಮ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.
ಸೆಂಟಾದ ಸ್ಥಾಪಕಿ ಹಾಗೂ ಸಿಇಓ ರಮ್ಯಾ ವೆಂಕಟರಾಮನ್ ಮಾತನಾಡಿ, "ಸೆಂಟಾ ಟಿಪಿಓ ಶಿಕ್ಷಕರನ್ನು ಪುರಸ್ಕರಿಸುವ, ಗುರುತಿಸುವ ಹಾಗೂ ಪ್ರಶಂಸಿಸುವ ಒಂದು ಪ್ರಬಲ ವ್ಯವಸ್ಥೆಯಾಗಿದೆ. ಹೊಸಬರು, ಅನುಭವಿ ಶಾಲಾ ಶಿಕ್ಷಕರು, ಪ್ರಾಂಶುಪಾಲರು, ಟ್ಯೂಶನ್ ಶಿಕ್ಷಕರು, ಬಿ. ಎಡ್. ವಿದ್ಯಾರ್ಥಿಗಳು, ಶಿಕ್ಷಣ ಕ್ಷೇತ್ರದ ಫೆಲೋಗಳು ಮತ್ತು ಸ್ವಯಂಸೇವಕರು, ಬೋಧನೆಯಲ್ಲಿ ಆಸಕ್ತಿಯಿರುವ ಇತರರೂ ಸೇರಿದಂತೆ ಹಲವಾರು ಹಿನ್ನೆಲೆಗಳಿಂದ ಬಂದವರು ಇದರಲ್ಲಿ ಭಾಗವಹಿಸುತ್ತಾರೆ.
ಸರಕಾರಿ ಮತ್ತು ಖಾಸಗಿ ಶಾಲೆಗಳಿಂದ, ಸಿಬಿಎಸ್‌ಇ, ಐಸಿಎಸ್‌ಇ, ಸ್ಟೇಟ್ ಬೋರ್ಡ್‌ಗಳು, ಐಬಿ, ಐಜಿಸಿಎಸ್‌ಇ ಮತ್ತಿತರ ಎಲ್ಲ ಬೋರ್ಡ್‌ಗಳಿಂದ ಬರುವ ಶಿಕ್ಷಕರನ್ನು ನಾವಿಲ್ಲಿ ನೋಡಬಹುದು. ರಿಲಯನ್ಸ್ ಫೌಂಡೇಶನ್ ಜೊತೆಗಿನ ಸಹಯೋಗದಿಂದ ಈ ಉಪಕ್ರಮಕ್ಕೆ ಹೆಚ್ಚಿನ ಬೆಂಬಲ ದೊರೆತಿದೆ, ಮತ್ತು ನಾವು ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು ತಲುಪಲು-ಪುರಸ್ಕರಿಸಲು ಸಾಧ್ಯವಾಗಿದೆ. ಆ ಮೂಲಕ ವೃತ್ತಿಯಲ್ಲಿನ ಹೆಮ್ಮೆಯೂ ಹೆಚ್ಚುವಂತಾಗಿದೆ" ಎಂದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications