ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ ಬದಲಾವಣೆ, ವಿಥ್ ಡ್ರಾ ಮಿತಿ ಇಳಿಕೆಗೆ ಕಾರಣ ಏನು?

ಬ್ಯಾಂಕ್ ಗಳ ಬಳಿ ಹಣ ವಿತರಿಸುವುದಕ್ಕೆ ಅಗತ್ಯ ಪ್ರಮಾಣದ 50, 100ರ ನೋಟುಗಳು ಇಲ್ಲವೇ ಇಲ್ಲ. ಈ ವರೆಗೆ 500 ರುಪಾಯಿ ಹೊಸ ನೋಟು ಕೈ ಸೇರಿಲ್ಲ.

|
Google Oneindia Kannada News

ಬೆಂಗಳೂರು, ನವೆಂಬರ್ 17: ಬ್ಯಾಂಕ್ ನಲ್ಲಿ ಹಣ ವಿನಿಮಯ ಮಾಡಿಕೊಳ್ಳಬಹುದಾದ ಮೊತ್ತದ ಮಿತಿಯನ್ನು 4,500 ದಿಂದ 2,000ಕ್ಕೆ ಇಳಿಸಿ, ನವೆಂಬರ್ 17ಕ್ಕೆ ಆದೇಶ ಬಂದಿದೆ. ಆದರೆ ಈ ನಿಯಮವು ಜಾರಿಗೆ ಬರುವುದು 18ರಿಂದ. ಇದೇನಪ್ಪಾ ದಿಢೀರ್ ಇಂಥ ನಿರ್ಧಾರ ಬಂತಲ್ಲ ಎಂದು ಗಾಬರಿಯಿಂದ ಹತ್ತಿರದ ಬ್ಯಾಂಕ್ ವೊಂದರ ಬಳಿಗೆ ಹೋದರೆ ಅಲ್ಲಿನ ನೌಕರರೇ ಕಾರಣಗಳು ಇದಿರಬಹುದು ಎಂದು ಬೊಟ್ಟು ಮಾಡುತ್ತಿದ್ದಾರೆ.

ಮೊದಲನೇದಾಗಿ ಬ್ಯಾಂಕ್ ಗಳ ಬಳಿ ಹಣ ವಿತರಿಸುವುದಕ್ಕೆ ಅಗತ್ಯ ಪ್ರಮಾಣದ 50, 100ರ ನೋಟುಗಳು ಇಲ್ಲವೇ ಇಲ್ಲ. ಈ ವರೆಗೆ 500 ರುಪಾಯಿ ಹೊಸ ನೋಟು ಕೈ ಸೇರಿಲ್ಲ. ಅರಕೆರೆ ಮೈಕೋ ಲೇಔಟ್ ಬಳಿಯ ಎಸ್ ಬಿಐ ಶಾಖೆಯ ನಿರ್ವಾಹಕರನ್ನು ಒನ್ ಇಂಡಿಯಾ ಸಂಪರ್ಕಿಸಿದಾಗ, ನಮ್ಮ ಹತ್ತಿರ ಸದ್ಯಕ್ಕೆ ಹಣ ಇಲ್ಲ. ಮಧ್ಯಾಹ್ನದ ಮೇಲೆ ಬನ್ನಿ ಎಂದು ಗ್ರಾಹಕರಿಗೆ ಹೇಳುತ್ತಿದ್ದೇವೆ ಎಂದು ತಿಳಿಸಿದರು.[ಬ್ಯಾಂಕಿನ ಮುಂಭಾಗ ಇಂಕಿಗಾಗಿಯೇ ಕೌಂಟರ್]

Rupee symbol

ಇನ್ನು ಬೆರಳಿಗೆ ಶಾಯಿ ಹಾಕುವ ನಿರ್ಧಾರವನ್ನೇನೋ ಕೈಗೊಂಡರು. ಆದರೆ ಎಲ್ಲ ಬ್ಯಾಂಕ್ ಗಳಲ್ಲೂ ಲಭ್ಯವಾಗಿಲ್ಲ. ಆದ್ದರಿಂದ ಹಲವರು ಅಂಥ ಬ್ಯಾಂಕ್ ಗಳನ್ನೇ ಹುಡುಕಿಕೊಂಡು ಹೋಗ್ತಿದ್ದಾರೆ. ಯಾಕೆ ಅಂಥ ಬ್ಯಾಂಕ್ ಹುಡುಕಿ ಹೋಗಬೇಕು ಅಂತೀರಾ? ಕೆಲವರು ತಮ್ಮ ನೋಟುಗಳನ್ನು ಬದಲಿಸಿಕೊಳ್ಳಲು ಬಡ ಹಾಗೂ ಮಧ್ಯಮ ವರ್ಗದವರನ್ನೇ ಬಳಸಿಕೊಳ್ಳುತ್ತಿದ್ದಾರೆ.

ಅಂಥವರಿಗೆ ನೂರಿನ್ನೂರು ರುಪಾಯಿ ಕೊಟ್ಟು, ಪಾಳಿ ಹಚ್ಚಿಸಿ, ತಮ್ಮ ಲೆಕ್ಕ ನೀಡದ ಹಣವನ್ನು ಬದಲಿಸಿಕೊಳ್ಳುತ್ತಿದ್ದಾರೆ. ಇದು ಗಮನಕ್ಕೆ ಬಂದಿರುವುದರಿಂದ ಶಾಯಿ ಹಾಕುವ ನಿರ್ಧಾರಕ್ಕೆ ಬರಲಾಯಿತು. ಆದರೆ ಎಲ್ಲ ಕಡೆ ವಿತರಿಸಲು ಆಗದ ಕಾರಣಕ್ಕೆ ಇದೀಗ ನೋಟು ಬದಲಿಸಿಕೊಳ್ಳುವ ಮಿತಿಯನ್ನೇ ಕಡಿಮೆ ಮಾಡಿದ್ದಾರೆ.[ಮದುವೆ ಸಮಾರಂಭಗಳಿಗಾಗಿ 2.5 ಲಕ್ಷ ಡ್ರಾ ಮಾಡಬಹುದು]

ಇದೇ ವೇಳೆ ವಾರಕ್ಕೆ ಚೆಕ್ ಮೂಲಕ ಇಪ್ಪತ್ನಾಲ್ಕು ಸಾವಿರ ರುಪಾಯಿ ವಿಥ್ ಡ್ರಾ ಮಾಡಬಹುದು ಎಂಬ ನಿಯಮವಿತ್ತಲ್ಲಾ? ಬ್ಯಾಂಕ್ ಸಿಸ್ಟಮ್ಮೇ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಮೊತ್ತ ಡ್ರಾ ಮಾಡುವುದಕ್ಕೆ ಬಿಡುತ್ತಿಲ್ಲ ಎಂಬುದನ್ನೂ ಬ್ಯಾಂಕ್ ವೊಂದರ ನಿರ್ವಾಹಕಿಯೇ ತಿಳಿಸಿದ್ದಾರೆ.

English summary
Now, old 500, 1000 rupee note exchange and bank deposit withdrawal limit reduced to 2,000. Some of the reasons behind this decision mentioned here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X