• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರದಲ್ಲಿ ಬದಲಾವಣೆ ಇಲ್ಲ: ಆರ್‌ಬಿಐನ ಪ್ರಮುಖ ನಿರ್ಧಾರಗಳು ಇಲ್ಲಿದೆ

|
Google Oneindia Kannada News

ನವದೆಹಲಿ, ಡಿಸೆಂಬರ್ 04: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ಮಾಡಿದ್ದು ರೆಪೋ ದರವನ್ನು ಬದಲಾಯಿಸದೇ ಇರಲು ನಿರ್ಧರಿಸಿದೆ. ಹೀಗಾಗಿ ರೆಪೋ ದರದಲ್ಲಿ ಸದ್ಯ ಇರುವ ಶೇಕಡಾ 4ರಷ್ಟು ದರವನ್ನು ಮುಂದುವರಿಸಿದೆ.

ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಭೆ ಡಿಸೆಂಬರ್ 2 ರಂದು ಪ್ರಾರಂಭವಾಯಿತು, ಸುದೀರ್ಘ ಪರಿಶೀಲನೆ ಬಳಿಕ ಇಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ರೆಪೋ ದರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಎಂಪಿಸಿಯ ಎಲ್ಲ ಸದಸ್ಯರು ಯಥಾಸ್ಥಿತಿಯನ್ನು ರೆಪೊ ದರದಲ್ಲಿ ಇರಿಸಲು ಪರವಾಗಿದ್ದರು.

ರೆಪೊ ದರ ಯಥಾಸ್ಥಿತಿ ಮುಂದುವರೆದರ ಪರಿಣಾಮ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಬದಲಾಯಿಸುವುದಿಲ್ಲ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಅಂದರೆ, ಸಾಲದ ಬಡ್ಡಿದರಗಳು ಇನ್ನು ಮುಂದೆ ವೇಗವಾಗಿ ಕುಸಿಯುವ ನಿರೀಕ್ಷೆಯಿಲ್ಲ.

ರೆಪೊ ದರವು ಆರ್‌ಬಿಐ ಬ್ಯಾಂಕುಗಳಿಗೆ ಸಾಲ ನೀಡುವ ದರವಾಗಿದೆ. ಈ ಸಾಲದೊಂದಿಗೆ ಬ್ಯಾಂಕುಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ಕಡಿಮೆಯಾದ ರೆಪೊ ದರ ಎಂದರೆ ಗೃಹ ಸಾಲಗಳು, ವಾಹನ ಸಾಲಗಳು ಸೇರಿದಂತೆ ಅನೇಕ ರೀತಿಯ ಸಾಲಗಳು ಅನೇಕ ಬ್ಯಾಂಕಿನಿಂದ ಅಗ್ಗವಾಗುತ್ತವೆ.

ರೆಪೋ ದರದ ಜೊತೆಗೆ ರಿವರ್ಸ್ ರೆಪೋ ದರದಲ್ಲೂ(3.35) ಆರ್‌ಬಿಐ ಯಾವುದೇ ಬದಲಾವಣೆ ಮಾಡಿಲ್ಲ. ಅದರ ಹೆಸರೇ ಸೂಚಿಸುವಂತೆ, ಇದು ರೆಪೊ ದರದ ಹಿಮ್ಮುಖವಾಗಿದೆ. ಬ್ಯಾಂಕುಗಳು ತಮ್ಮ ಪರವಾಗಿ ಆರ್‌ಬಿಐನಲ್ಲಿ ಠೇವಣಿ ಇರಿಸಿದ ಹಣಕ್ಕೆ ಬಡ್ಡಿಯನ್ನು ಪಡೆಯುವ ದರ ಇದು.

ಮಾರುಕಟ್ಟೆಗಳಲ್ಲಿ ಹಣದ ದ್ರವ್ಯತೆಯನ್ನು ನಿಯಂತ್ರಿಸಲು ರಿವರ್ಸ್ ರೆಪೊ ದರವನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚು ಹಣವಿದ್ದಾಗಲೆಲ್ಲಾ, ಆರ್‌ಬಿಐ ರಿವರ್ಸ್ ರೆಪೊ ದರವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಹೆಚ್ಚಿನ ಬಡ್ಡಿ ಗಳಿಸಲು ಬ್ಯಾಂಕ್ ತನ್ನ ಹಣವನ್ನು ಆರ್‌ಬಿಐನಲ್ಲಿ ಠೇವಣಿ ಇಡುತ್ತದೆ.

ಇನ್ನು ಹೆಚ್ಚಿನ ವಲಯಗಳು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿರುವುದರಿಂದ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. 2021 ರ ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯನ್ನು ಶೇಕಡಾ ಮೈನಸ್ 7.5 ರಷ್ಟು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಕ್ಯೂ 3 ರ ಜಿಡಿಪಿ ಬೆಳವಣಿಗೆಯನ್ನು ಶೇ. + 0.1ರಷ್ಟು ಮತ್ತು ಕ್ಯೂ 4 ಶೇಕಡಾ + 0.7ರಷ್ಟು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಯೋಜಿಸುತ್ತಿದೆ ಎಂದು ಅವರು ಹೇಳಿದರು. ಸೆಂಟ್ರಲ್ ಬ್ಯಾಂಕ್ ಮಾರ್ಚ್ ಅಂತ್ಯದಿಂದ ರೆಪೊ ದರವನ್ನು 115 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿ ಬೆಳವಣಿಗೆಯನ್ನು ಬೆಂಬಲಿಸಿತು.

English summary
RBI Monetary Policy Highlights - 4 December 2020. Check out the highlights and key decisions in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X