ಆರ್ ಬಿಐ ಬಡ್ಡಿ ದರ ಯಥಾಸ್ಥಿತಿ: ಸಾರ್ವಜನಿಕ ಹೂಡಿಕೆಗೆ ಉತ್ತೇಜನ
ನವದೆಹಲಿ, ಜೂನ್ , 07: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟ ಮಾಡಿದೆ. ದೇಶದ ಜಿಡಿಪಿ ಏರಿಕೆ ಕಂಡಿದ್ದರೂ ಬಡ್ಡಿ ದರದಲ್ಲಿ ತಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಕಳೆದ ಬಾರಿ ಪ್ರಕಟಿಸಿದ್ದ ಹಣಕಾಸು ನೀತಿಯಲ್ಲಿ ರೆಪೋದರವನ್ನು 25 ಮೂಲಾಂಕ ಕಡಿತ ಮಾಡಲಾಗಿತ್ತು. ಈ ಬಾರಿ ಹಣದುಬ್ಬರದ ಆತಂಕದ ಹಿನ್ನೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.[ದೋಸೆ ಬೆಲೆ ಇಳಿಕೆ ಆಗಿಲ್ಲವೇಕೆ? ಆರ್ ಬಿಐ ಗರ್ವನರ್ ಉತ್ತರ ಇಲ್ಲಿದೆ]

ರಿಸರ್ವ್ ಬ್ಯಾಂಕ್ ನಿಂದ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಶೇ.6.05 ರಲ್ಲೇ ಕಾಯ್ದುಕೊಳ್ಳಲಾಗಿದೆ. ಇನ್ನು ಸಿಆರ್ ಆರ್ ನಲ್ಲಿಯೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಿಂದೆ ಇದ್ದ ಶೇ.4 ರಷ್ಟನ್ನೆ ಕಾಯ್ದುಕೊಳ್ಳಲಾಗಿದೆ.

ಸಾರ್ವಜನಿಕರ ಹೂಡಿಕೆಯನ್ನು ಉತ್ತೇಜಿಸಲು ಕ್ರಮ ಈ ಕ್ರಮ ನೆರವಾಗಲಿದೆ. ಯಾವುದೇ ಬದಲಾವಣೆ ಮಾಡದ ಕಾರಣ ಸಾಲ ನೀಡಿಕೆ ಮತ್ತು ಬಡ್ಡಿ ದರ ಹಿಂದಿನಂತೆಯೇ ಮುಂದುವರಿಯಲಿದೆ ಎಂದು ಆರ್ ಬಿ ಐ ಗವರ್ನರ್ ರಘುರಾಂ ರಾಜನ್ ತಿಳಿಸಿದ್ದಾರೆ.[ಪಾನ್ ನಂಬರ್ ಕಳಕೊಂಡ್ರಾ? ಚಿಂತೆ ಬಿಡಿ, ಇಲ್ಲಿ ನೋಡಿ]

ತೈಲ ದರದಲ್ಲಿ ಆಗುತ್ತಿರುವ ಬದಲಾವಣೆ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದ್ದು ಅದರ ನಿಯಂತ್ರಣಕ್ಕೆ ಪರ್ಯಾಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ರಘುರಾಂ ರಾಜನ್ ತಿಳಿಸಿದ್ದಾರೆ.

ಬದಲಾವಣೆ ಇಲ್ಲ:
ಗೃಹ ಸಾಲ, ವಾಹನ ಸಾಲ ಸೇರಿದಂತೆ ಯಾವ ಸಾಲಗಳ ಮೇಲಿನ ಬಡ್ಡಿಯೂ ಬದಲಾಗುವುದಿಲ್ಲ. ಹಿಂದಿನ ಸಾರಿ 25 ಮೂಲಾಂಕ ಕಡಿತ ಮಾಡಿದ್ದ ಕಾರಣ ಗೃಹ ಸಾಲದ ಬಡ್ಡಿ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು.












Click it and Unblock the Notifications