ಹೆಚ್‌ಡಿಎಫ್‌ಸಿ ಬ್ಯಾಂಕ್ ಹೊಸ ಕ್ರೆಡಿಟ್ ಕಾರ್ಡ್‌ಗೆ ಆರ್‌ಬಿಐ ತಡೆ: ಷೇರು ಕುಸಿತ
ನವದೆಹಲಿ, ಡಿಸೆಂಬರ್ 03: ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ತನ್ನ ಡಿಜಿಟಲ್ 2.0 ಕಾರ್ಯಕ್ರಮದಡಿ ಯಾವುದೇ ಹೊಸ ಸೇವೆಯನ್ನು ಪ್ರಾರಂಭಿಸಬಾರದು ಮತ್ತು ಯಾವುದೇ ಗ್ರಾಹಕರಿಗೆ ಹೊಸ ಕ್ರೆಡಿಟ್ ಕಾರ್ಡ್ ನೀಡಬಾರದು ಎಂದು ಆರ್‌ಬಿಐ ಆದೇಶ ಹೊರಡಿಸಿದೆ.
ಪ್ರಾಥಮಿಕ ದತ್ತಾಂಶ ಕೇಂದ್ರದಲ್ಲಿ ವಿದ್ಯುತ್ ವೈಫಲ್ಯದಿಂದಾಗಿ 2020 ರ ನವೆಂಬರ್ 21 ರಂದು ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಪಾವತಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಹೀಗೆ ನಿರ್ದೇಶಿಸಿದೆ. ಈ ಮೂಲಕ ಯಾವುದೇ ಗ್ರಾಹಕರಿಗೆ ಹೊಸ ಕ್ರೆಡಿಟ್ ಕಾರ್ಡ್ ನೀಡಬಾರದು ಎಂದು ಆರ್‌ಬಿಐ ಹೇಳಿದೆ. ಪರಿಣಾಮ ಇಂದು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಶೇಕಡಾ 1.6ರಷ್ಟು ಕುಸಿತ ಕಂಡಿದೆ.
ಇದರ ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಡಿಜಿಟಲ್ ಬ್ಯಾಂಕಿಂಗ್ ವೇದಿಕೆಯಲ್ಲಿ ಇತ್ತೀಚೆಗೆ ಕಾಣುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ದೃಢವಾದ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ.

ಪ್ರಸ್ತುತ ಕ್ರಮಗಳು ಈಗಾಗಲೇ ಬಳಕೆಯಲ್ಲಿರುವ ಕ್ರೆಡಿಟ್ ಕಾರ್ಡ್ ಗ್ರಾಹಕರು, ಡಿಜಿಟಲ್ ಬ್ಯಾಂಕಿಂಗ್ ಚಾನೆಲ್‌ಗಳು ಮತ್ತು ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಭರವಸೆ ನೀಡಿದೆ. ಜೊತೆಗೆ ತನ್ನ ಒಟ್ಟಾರೆ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.












Click it and Unblock the Notifications