ಬಿಜೆಪಿ ದೇಶವನ್ನೇ ನಾಶ ಮಾಡಲಿದೆ: ರಾಹುಲ್ ಗಾಂಧಿ ವಾಗ್ದಾಳಿ
Recommended Video

ಬಿಜೆಪಿ ದೇಶವನ್ನೇ ನಾಶ ಮಾಡಲಿದೆ | Oneindia Kannada
ನವದೆಹಲಿ, ಡಿಸೆಂಬರ್ 11: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿಯು ಆಧುನಿಕ ಭಾರತದ ಎಲ್ಲ ದೇವಸ್ಥಾನಗಳನ್ನು ಬಿಜೆಪಿ ಉರುಳಿಸಿದೆ ಎಂದು ಹರಿಹಾಯ್ದಿದ್ದಾರೆ.
ಊರ್ಜಿತ್ ಪಟೇಲ್ ರಾಜೀನಾಮೆ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಆರ್ ಬಿಐ ಗವರ್ನರ್ ಅವರ ರಾಜೀನಾಮೆಯೊಂದಿಗೆ ಮತ್ತೊಂದು ಸ್ವತಂತ್ರ ಸಂಸ್ಥೆ ಉರುಳಿದಂತಾಗಿದೆ ಎಂದು ಹೇಳಿದ್ದಾರೆ.
ಆಧುನಿಕ ಭಾರತದ ಎಲ್ಲ ದೇವಾಲಯಗಳನ್ನೂ ಬಿಜೆಪಿ ಉರುಳಿಸಿದೆ. ಇದು ಮುಂದುವರಿದರೆ ಬಿಜೆಪಿ ಭಾರತವನ್ನೇ ನಾಶಪಡಿಸುವುದು ಖಚಿತ ಎಂದು ರಾಹುಲ್ ಟೀಕಿಸಿದ್ದಾರೆ.

ಆರ್ ಬಿಐ ಸಂಸ್ಥೆಯನ್ನು ರಕ್ಷಿಸುತ್ತಿದ್ದ ಕಾರಣಕ್ಕೆ ಅದರ ಗವರ್ನರ್ ರಾಜೀನಾಮೆ ನೀಡಬೇಕಾಗಿದೆ. ನಿಮ್ಮನ್ನು ಉಳಿಸಿಕೊಳ್ಳಲು ಆರ್ ಬಿಐ ಮೀಸಲು ನಿಧಿಯನ್ನು ಬಳಸಿಕೊಳ್ಳುವುದು ದೇಶಕ್ಕೆ ವಿರುದ್ಧವಾದುದು ಎಂದು ರಾಹುಲ್ ಸೋಮವಾರ ಹೇಳಿದ್ದರು.












Click it and Unblock the Notifications