Good News: 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ RBI ಬಂಪರ್!
RBI Good News: ದೇಶದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಆರ್‌ಬಿಐ ಬಂಪರ್ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಣ್ಣ ಮಕ್ಕಳು ಬಾಲ್ಯದಿಂದಲೇ ಉಳಿತಾಯ ಮಾಡುವುದನ್ನು ಮೈಗೂಡಿಸಿಕೊಳ್ಳುವುದಕ್ಕೆ ಸಹಾಯವಾಗಲಿದೆ. ಅಲ್ಲದೇ ಆರ್‌ಬಿಐನ ಹೊಸ ಕ್ರಮದಿಂದ ಮಕ್ಕಳಿಗೆ ಸಾಕಷ್ಟು ಲಾಭವೂ ಆಗಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ - RBI) ಹೊಸ ಕ್ರಮದಿಂದ ಏನೆಲ್ಲಾ ಬದಲಾಣೆಗಳು ಆಗಲಿವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಮಕ್ಕಳು ಸಣ್ಣ ವಯಸ್ಸಿನಿಂದಲೇ ಹೂಡಿಕೆ ಮಾಡುವುದನ್ನು ಕಲಿತರೆ ಮುಂದೆ ಅವರಿಗೆ ಹಣಕಾಸಿಗೆ ಸಂಬಂಧಿಸಿದಂತೆ ನಿಖರ ಮಾಹಿತಿ ಸಿಗಲಿದೆ. ಅಲ್ಲದೇ ಉಳಿತಾಯ ಹಾಗೂ ವೆಚ್ಚದ ಬಗ್ಗೆಯೂ ಸ್ಪಷ್ಟತೆ ಸಿಗಲಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ. ಅದರ ವಿವರ ನೋಡೋಣ.

ಆರ್‌ಬಿಐ ದೇಶದ ಮಕ್ಕಳಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ದೇಶದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಉಳಿತಾಯ/ಅವಧಿ ಠೇವಣಿ (Savings/Term Deposit) ಖಾತೆಗಳನ್ನು ತಾವೇ ಸ್ವತಂತ್ರವಾಗಿ ಖಾತೆಗಳನ್ನು ತೆಗೆಯುವುದಕ್ಕೆ ಅಥವಾ ನಿರ್ವಹಿಸುವುದಕ್ಕೆ ಅವಕಾಶ ನೀಡಲಾಗಿದೆ. ಈ ಸಂಬಂಧ ಮಹತ್ವದ ಸುತ್ತೋಲೆಯೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದೆ. ಇದರಿಂದ ಇಷ್ಟು ದಿನಗಳ ಕಾಲ ಪೋಷಕರೊಂದಿಗೆ ಸೇವಿಂಗ್ಸ್ ಖಾತೆ ಅಥವಾ ಸೇವಿಂಗ್ಸ್ ಖಾತೆ ಮಾಡಿಸಿಕೊಳ್ಳಲು ಆಗದೆ ಇರುವ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.
10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸ್ವತಂತ್ರವಾಗಿ ಬ್ಯಾಂಕ್ ಖಾತೆಯನ್ನು ತೆರೆಯಲು ಹಾಗೂ ನಿರ್ವಹಿಸಲು ಬ್ಯಾಂಕುಗಳಿಗೆ ಅವಕಾಶ ನೀಡರುವುದಾಗಿ ರಿಸರ್ವ್ ಬ್ಯಾಂಕ್ ಹೇಳಿದೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಅಥವಾ ಅಪ್ರಾಪ್ತ ವಯಸ್ಸಿನ ಮಕ್ಕಳು ಖಾತೆಗಳನ್ನು ಪಡೆಯುವುದಕ್ಕೆ ಹಾಗೂ ನಿರ್ವಹಿಸುವುದಕ್ಕೆ ಕೆಲವೊಂದು ಪ್ರಮುಖ ಪರಿಷ್ಕೃತ ಸೂಚನೆಗಳನ್ನು ನೀಡಲಾಗಿದೆ.
ಆದರೆ ಇದರಲ್ಲಿ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗಿದೆ. ಪೋಷಕರ ಮೂಲಕ ಉಳಿತಾಯ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ಅನುಮತಿಸಬಹುದು ಎಂದು ಹೇಳಲಾಗಿದೆ. ಯಾವ ಷರತ್ತುಗಳನ್ನು ಆರ್‌ಬಿಐ ವಿಧಿಸಿದೆ ಎನ್ನುವ ವಿವರ ನೋಡೋಣ.
* 10 ವರ್ಷ ಮೇಲ್ಪಟ್ಟ ಮಕ್ಕಳು ಪ್ರತ್ಯೇಕವಾಗಿ ಸೇವಿಂಗ್ ಅಕೌಂಟ್ ಹೊಂದುವುದಕ್ಕೆ ಅವಕಾಶ ಇರಲಿದೆ.
* ಪೋಷಕರ ಅನುಮತಿಯೊಂದಿಗೆ ಸೇವಿಂಗ್ಸ್ ಅಕೌಂಟ್ ಪ್ರಾರಂಭಿಸಬಹುದಾಗಿದೆ.
* 10 ವರ್ಷ ಮೇಲ್ಪಟ್ಟವರು ಅಕೌಂಟ್ ಓಪನ್ ಮಾಡಬಹುದು.
* ಎಷ್ಟು ವಹಿವಾಟು ನಡೆಸಬಹುದು ಎನ್ನುವುದು ಸೇರಿದಂತೆ ಹಾಗೂ ಖಾತೆಗಳ ನಿರ್ವಹಣೆಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ಹೇಳಲಾಗಿದೆ.
* ವಹಿವಾಟಿನ ಮೊತ್ತದ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ವಹಸಿಬೇಕು ಎಂದೂ ಸಹ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ.












Click it and Unblock the Notifications