ರತನ್ ಟಾಟಾ ಅವರ ಸ್ಫೂರ್ತಿದಾಯಕ ನುಡಿಮುತ್ತುಗಳಿವು-ಅನುಸರಿಸಿದ್ರೆ ಸಕ್ಸಸ್ ಗ್ಯಾರಂಟಿ.?
Ratan Tata: ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ (86) ಅವರು ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಇವರನ್ನು ಕಳೆದು ದೇಶದ ಉದ್ಯಮ ವಲಯವೇ ಕುಗ್ಗಿ ಹೋದಂತಾಗಿದೆ. ಇನ್ನೂ ರತನ್ ಟಾಟಾ ಅವರು ಹೇಳಿರುವ ಜೀವನದ ಏಳಿಗೆಯ ನುಡಿಮುತ್ತುಗಳು ಇಲ್ಲಿವೆ ಗಮನಿಸಿ.
ಹಾಡು ಮುಟ್ಟದ ಸೊಪ್ಪಿಲ್ಲ.. ರತನ್ ನೋಡಿರದ ಉದ್ಯಮ್ಯವಿಲ್ಲ ಎನ್ನುವ ಮಾತೇ ಇದೆ. ಇನ್ನು ಜೀವನದಲ್ಲಿ ಎತ್ತರ ಮಟ್ಟಕ್ಕೆ ಬೆಳೆಯಬೇಕೆಂದರೆ ರತನ್ ಟಾಟಾ ಅವರು ಹೇಳಿರುವ ಈ ಉತ್ತಮ ವಾಕ್ಯಗಳನ್ನು ಪಾಲಿಸಿ.

ರತನ್ ಟಾಟಾ ಅವರ ನುಡಿಮುತ್ತುಗಳು
* ಯಾರೂ ಕಬ್ಬಿಣವನ್ನು ನಾಶ ಮಾಡುವುದಿಲ್ಲ, ಆದರೆ ಅದರ ಸ್ವಂತ ತುಕ್ಕು ಅದನ್ನೇ ನಾಶ ಮಾಡಬಹುದು. ಅದೇ ರೀತಿ ಯಾವೊಬ್ಬ ವ್ಯಕ್ತಿಯನ್ನು ನಾಶ ಮಾಡಲು ಸಾಧ್ಯವಿಲ್ಲ, ಆದರೆ ಅವರ ಮನಸ್ಥಿತಿಯಿಂದ ಅದು ಸಾಧ್ಯ.
* ನಾನು ಯಾವಾಗಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದು ನನಗೆ ಅನ್ನಿಸುವುದಿಲ್ಲ. ಆದರೆ, ತೆಗೆದುಕೊಂಡ ನಿರ್ಧಾರಗಳನ್ನು ಸರಿಯಾದ ನಿರ್ಧಾರ ಸಾಬೀತುಪಡಿಸಲು ನಿಷ್ಠೆಯಿಂದ ಪ್ರಯತ್ನಿಸುತ್ತೇನೆ.
* ನೀವು ವೇಗವಾಗಿ ನಡೆಯಬೇಕೆಂದರೆ ದಯವಿಟ್ಟು ಒಬ್ಬರೇ ನಡೆಯಿರಿ. ಆದರೆ, ತುಂಬಾ ದೂರದವರೆಗೆ ನಡೆಯಬೇಕೆಂದುಕೊಂದೆಡೆ, ನೀವು ಇನ್ನೊಬ್ಬರೊಂದಿಗೆ ಹೆಜ್ಜೆ ಹಾಕಿ.
* ನಿಮ್ಮ ಜೊತೆಗಿರುವವರು ಬೆಳೆಯಲು ಪ್ರೋತ್ಸಾಹ ನೀಡಿ. ಅವರಿಗೆ ಪ್ರಶ್ನೆ ಕೇಳಲು ಅವಕಾಶ ಕೊಟ್ಟು, ಅವರಲ್ಲಿರುವ ಹೊಸ ಐಡಿಯಾಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಬಿಡಿ. ಹೊಸ ಆಲೋಚನೆಗಳಿಂದ ಮಾತ್ರ ಅದ್ವಿತೀಯವಾದುದನ್ನು ಸಾಧಿಸಲು ಸಾಧ್ಯ.
* ಕಬ್ಬಿಣವನ್ನು ಯಾರೂ ಹಾಳು ಮಾಡಲ್ಲ, ಅದು ತಾನಾಗಿಯೇ ತುಕ್ಕು ಹಿಡಿದು ನಾಶ ಆಗುತ್ತದೆ. ಹಾಗೆಯೇ ಮನುಷ್ಯನನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ಆತ ತನ್ನ ಮನಸ್ಸನ್ನು ಕೀಳುಮಟ್ಟದಲ್ಲಿಟ್ಟುಕೊಂಡರೆ, ಆತ ತಾನಾಗಿಯೇ ನಾಶ ಆಗುತ್ತಾನೆ.
* ನಮ್ಮ ಜೀವನದ ರೇಖೆಯು ಸದಾ ಏರಿಳಿತ ಕಾಣುತ್ತಲೇ ಇರಬೇಕು. ಒಂದು ವೇಳೆ, ಅದು ನೇರವಾಗಿ ಒಂದೇ ದಿಕ್ಕಿನಲ್ಲಿ ಚಲಿಸುತ್ತಿದೆಯೆಂದೆರೆ ನಾವು ಸತ್ತಿದ್ದೇವೆ ಎಂದರ್ಥ. ಹಾಗೆಯೇ ಇಸಿಜಿಯಲ್ಲಿ ನೇರವಾಗಿ ಗೆರೆಗಳು ಬಂದರೆ ಸಾವು ಪಕ್ಕಾ ಎಂದರ್ಥ. ಆದ್ದರಿಂದ, ಜಿವನದಲ್ಲಿ ಏರಿಳಿತಗಳು ಉನ್ನತ ಮಟ್ಟಕ್ಕೇರಲು ಪ್ರಮುಖಪಾತ್ರವಹಿಸುತ್ತವೆ.
* ಅಡ್ಡದಾರಿ ಹಿಡಿದು ಯಶಸ್ಸು ಕಂಡ ವ್ಯಕ್ತಿಯನ್ನು ಇಷ್ಟಪಡಬಹುದು. ಆದರೆ ಆತನನನ್ನು ಎಂದಿಗೂ ಗೌರವಿಸುವುದಿಲ್ಲ.
* ಜನರು ನಿಮ್ಮ ಕಡೆ ಎಸೆಯುವ ಕಲ್ಲುಗಳನ್ನು ನೀವು ತಾಳ್ಮೆಯಿಂದ ಸಂಗ್ರಹಿಸಿ. ಮುಂದೆ ಮನೆ ಕಟ್ಟುವಾಗ ಅವುಗಳೇ ಉಪಯೋಗಕ್ಕೆ ಬರುತ್ತವೆ.
* ಜೀವನದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದರೆ, ಮುಂದೆ ಯಾವುದೇ ಯಶಸ್ಸು ಕಾಣಲು ಸಾಧ್ಯವಿಲ್ಲ.
* ನಿಮ್ಮ ಕೆಲಸ ಹಾಗೂ ಖಾಸಗಿ ಜೀವನ ಇವೆರಡನ್ನೂ ಅರ್ಥಪೂರ್ಣವಾಗಿ ನಿಭಾಯಿಸಿಕೊಂಡು ಹೋಗುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ, ಅವೆರಡೂ ಒಂದಕ್ಕೊಂದು ಪೂರಕವಾಗಿರುತ್ತವೆ.
* ನೀವು ಯಾರೊಂದಿಗಾದರೂ ವ್ಯವಹರಿಸುವಾಗ ಅವರನ್ನು ಗೌರವಿಸುವುದು, ಅವರಲ್ಲಿ ಸಹಾನುಭೂತಿಯನ್ನು ಹೊಂದುವುದನ್ನು ಬಿಡಬೇಡಿ. ಅವುಗಳೇ ನಿಮ್ಮ ಏಳಿಗೆಗೆ ದಾರಿದೀಪವಾಗುತ್ತವೆ.
ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಅವರು ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಇನ್ನು 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 30ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದರೂ ಕೂಡ ಅವರು ಸರಳ ಜೀವನವನ್ನೇ ಅನುಸರಿಸುತ್ತಾ ಬಂದವರಾಗಿದ್ದರು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications