
'ಗುಡ್‌ಫೆಲೋಸ್' ಸ್ಟಾರ್ಟ್‌ಅಪ್ ಬಿಡಗಡೆ ಮಾಡಿದ ರತನ್ ಟಾಟಾ: ವಿಶೇಷತೆ ಏನು?
ಒಂದು ವರದಿಯ ಪ್ರಕಾರ ಭಾರತದಲ್ಲಿ 1.5 ಕೋಟಿ ವೃದ್ಧರು ಏಕಾಂಗಿಗಳಾಗಿ ವಾಸಿಸುತ್ತಿದ್ದರೆ. ಸಂಗಾತಿಯ ಅಗಲಿಕೆಯಿಂದ ಅಥವಾ ಅನಿವಾರ್ಯ ಕಾರಣಗಳಿಂದಾಗಿ ಕುಟುಂಬಗಳು ಅವರನ್ನು ಒಂಟಿಯನ್ನಾಗಿಸಿ ದೂರದೂರಿನಲ್ಲಿ ವಾಸ ಮಾಡುತ್ತವೆ. ಅವರಲ್ಲಿ ಹಲವರು ಆರೈಕೆ ಮಾಡುವವರನ್ನು ಹೊಂದಿದ್ದಾರೆ ಆದರೆ ಹಿರಿಯರನ್ನು ಒಂಟಿತನ, ಉತ್ತಮ ಜೊತೆಗಾರರ ಕೊರತೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಹದಗೆಡಲು ಕಾರಣವಾಗಿದೆ.
ಇಂತಹ ಹಿರಿಯರ ಒಂಟಿತನ ದೂರವಾಗಿಸಲು, ಎರಡು ತಲೆಮಾರುಗಳ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಒಂದು ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಲಾಗಿದೆ. ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಹಿರಿಯ ನಾಗರಿಕರಿಗಾಗಿ ಭಾರತದ ಒಡನಾಡಿ ಸ್ಟಾರ್ಟ್ಅಪ್‌ಗೆ ಬಂಡವಾಳ ಹೂಡಿದ್ದಾರೆ.
ಜನಸೇವಕ ತಿಳಿದಿರಿ; ವೃದ್ಧರ ಪಿಂಚಣಿ ಸೇರಿದಂತೆ 80 ಸರಕಾರಿ ಸೇವೆಗಳು ನಿಮ್ಮ ಮನೆಬಾಗಿಲಿಗೆ
ಗುಡ್‌ಫೆಲೋಸ್, ಎನ್ನುವ ಸ್ಟಾರ್ಟ್ಅಪ್ ಅನ್ನು ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದ ಶಂತನು ನಾಯ್ಡು ರೂಪಿಸಿದ್ದಾರೆ. 28 ವರ್ಷದ ಇವರು, ರತನ್ ಟಾಟಾ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.
ಗುಡ್‌ಫೆಲೋಸ್‌ನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರತನ್ ಟಾಟಾ, "ನೀವು ಒಡನಾಟಕ್ಕಾಗಿ ಬಯಸಿ ಏಕಾಂಗಿಯಾಗಿ ಸಮಯ ಕಳೆಯುವವರೆಗೆ ಒಂಟಿತನ ಹೇಗಿರುತ್ತದೆ ಎಂದು ನಿಮಗೆ ತಿಳಿಯುವುದಿಲ್ಲ." ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಬೆಂಗಳೂರಿಗೂ ವಿಸ್ತರಣೆ
ಗುಡ್‌ಫೆಲೋಸ್, ಇದು ಹಿರಿಯ ನಾಗರಿಕರಿಗೆ ಸಹಾಯ ಮಾಡಲು, ಒಡನಾಟದ ಸೇವೆಗಳನ್ನು ಒದಗಿಸುವ ಹಿರಿಯ ಒಡನಾಡಿ ಸ್ಟಾರ್ಟ್‌ಅಪ್ ಆಗಿದೆ. ಅಲ್ಪಾವಧಿಯ ಇಂಟರ್ನ್‌ಶಿಪ್‌ಗಳನ್ನು ಮತ್ತು ಪದವೀಧರರಿಗೆ ಗುಡ್‌ಫೆಲೋಸ್, ಉದ್ಯೋಗಗಳನ್ನು ನೀಡುತ್ತದೆ, ಈ ಉದ್ಯಮದಲ್ಲಿ ಅವರ ಜ್ಞಾನವನ್ನು ಅನ್ವಯಿಸಲು ಅನುವು ಮಾಡಿಕೊಡುತ್ತದೆ.
"ಗುಡ್‌ಫೆಲೋಸ್ ಯಶಸ್ವಿ ಬೀಟಾವನ್ನು ಪೂರ್ಣಗೊಳಿಸಲು ಕಳೆದ 6 ತಿಂಗಳ ಸಮಯವನ್ನು ತೆಗೆದುಕೊಂಡಿದೆ ಮತ್ತು ಈಗ ಮುಂಬೈನಲ್ಲಿ ಗುಡ್‌ಫೆಲೋಸ್ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಪುಣೆ, ಚೆನ್ನೈ ಮತ್ತು ಬೆಂಗಳೂರು ನಗರಗಳಿಗೆ
ವಿಸ್ತರಿಸಲಾಗುತ್ತದೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಗುಡ್‌ಫೆಲೋಸ್‌ನಲ್ಲಿ ಉದ್ಯೋಗ ಪಡೆಯಲು ಬಯಸುವ ಯುವ ಪದವೀಧರರಿಂದ 800 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ, ಅದರಲ್ಲಿ 20 ಮಂದಿಯ ಶಾರ್ಟ್‌ಲಿಸ್ಟ್ ಮಾಡಿದ ಸಮೂಹವು ಮುಂಬೈನಲ್ಲಿ ವಯಸ್ಸಾದವರಿಗೆ ಒಡನಾಟವನ್ನು ಒದಗಿಸಿದೆ ಎಂದು ಕಂಪನಿ ತಿಳಿಸಿದೆ.
Breaking; ಹಿರಿಯ ನಾಗರಿಕ ಟಿಕೆಟ್ ರಿಯಾಯಿತಿ ಇಲ್ಲ, ರೈಲ್ವೆ

ಒಂದು ತಿಂಗಳು ಉಚಿತ ಚಂದಾದಾರಿಕೆ
ಗುಡ್‌ಫೆಲೋಸ್‌ನ ವ್ಯವಹಾರ ಮಾದರಿಯು ಫ್ರೀಮಿಯಮ್ ಚಂದಾದಾರಿಕೆ ಮಾದರಿಯಾಗಿದೆ. ಹಿರಿಯ ನಾಗರಿಕರು ಈ ಸೇವೆಯ ಮಾದರಿಯನ್ನು ಅರಿಯಲು ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ಮೊದಲ ತಿಂಗಳು ಉಚಿತ ಚಂದಾದಾರಿಕೆ ಪಡೆಯಬಹುದು. ಅವರ ಅನುಭವಕ್ಕೆ ಬರದೆ ಈ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಕಷ್ಟ ಎನ್ನುವ ಉದ್ದೇಶಕ್ಕೆ ಮೊದಲ ತಿಂಗಳು ಉಚಿತ ಸೇವೆ ನೀಡಲಾಗುತ್ತದೆ.
ಎರಡನೇ ತಿಂಗಳಿನಿಂದ, ಹಿರಿಯ ನಾಗರಿಕರಿಗೆ ಕೈಗೆಟುಕುವಿಕೆಯ ದರದಲ್ಲಿ ಚಂದಾದಾರಿಕೆ ಶುಲ್ಕವನ್ನು ನಿರ್ಧರಿಸಲಾಗಿದೆ. ಎಂದು ಕಂಪನಿ ಹೇಳಿದೆ. ಚಂದಾದಾರಿಕೆ ಪಡೆದ ನಾಗರಿಕರಿಗೆ ಯುವಕರು ಒಡನಾಡಿಗಳಾಗಿರುತ್ತಾರೆ, ಇದು ಅಜ್ಜ ಅಜ್ಜಿಗೆ ಮೊಮ್ಮಕ್ಕಳ ರೀತಿಯ ಸೇವೆಯನ್ನು ನೀಡಲಿದೆ.

ಶಂತನು ನಾಯ್ಡು ಕನಸು ಗುಡ್‌ಫೆಲೋಸ್
"ಸ್ಟಾರ್ಟ್ಅಪ್ ವಿಭಿನ್ನ ಜನರಿಗೆ ಒಡನಾಟವು ವಿಭಿನ್ನ ವಿಷಯಗಳನ್ನು ಅರ್ಥೈಸುತ್ತದೆ ಎಂದು ಒತ್ತಿಹೇಳುತ್ತದೆ. ಕೆಲವರಿಗೆ ಇದು ಚಲನಚಿತ್ರವನ್ನು ನೋಡುವುದು, ಹಿಂದಿನ ಕಥೆಗಳನ್ನು ಹೇಳುವುದು, ವಾಕ್‌ಗೆ ಹೋಗುವುದು ಅಥವಾ ಒಟ್ಟಿಗೆ ಏನನ್ನೂ ಮಾಡದೆ ಶಾಂತವಾಗಿ ಜೊತೆಯಲ್ಲಿ ಕುಳಿತುಕೊಳ್ಳುವುದು ಎಂದರ್ಥ, ನಾವು ಎಲ್ಲವನ್ನೂ ಸರಿಹೊಂದಿಸಲು ಪ್ರಯತ್ನಿಸುತ್ತೇವೆ. ನಮ್ಮ ಉದ್ಯಮದಲ್ಲಿ ರತನ್ ಟಾಟಾ ಅವರ ಹೂಡಿಕೆ ನಮಗೆ ಸಾಕಷ್ಟು ಉತ್ತೇಜನ ನೀಡಿದೆ." ಎಂದು ಗುಡ್‌ಫೆಲೋಸ್‌ನ ಸಂಸ್ಥಾಪಕ ಮತ್ತು ಜನರಲ್ ಮ್ಯಾನೇಜರ್ ಶಾಂತನು ನಾಯ್ಡು ಹೇಳಿದರು.
ಗುಡ್‌ಫೆಲೋಸ್ ಬಳಕೆದಾರರು ತಮ್ಮ ಸಹವರ್ತಿಗಳೊಂದಿಗೆ ಭಾಗವಹಿಸುವುದನ್ನು ಪ್ರೋತ್ಸಾಹಿಸಲು ಮಾಸಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಮತ್ತು ಬಾಂಧವ್ಯವನ್ನು ಹೆಚ್ಚು ಸಂತೋಷದಾಯಕವಾಗಿಸುತ್ತದೆ.

ಸೇವೆ ವಿಸ್ತರಣೆ ಮಾಡಲು ಕಂಪನಿ ಚಿಂತನೆ
ಭವಿಷ್ಯದಲ್ಲಿ, ಭದ್ರತೆ ಅಥವಾ ಕಂಪನಿಯ ಕೊರತೆಯಿಂದಾಗಿ ಪ್ರವಾಸಗಳನ್ನು ಮಾಡುವುದನ್ನು ತಡೆಹಿಡಿಯುವ ಹಿರಿಯರಿಗೆ ಪ್ರಯಾಣದ ಸಹಚರರನ್ನು ನೀಡಲು ಗುಡ್‌ಫೆಲೋಸ್ ಯೋಜಿಸಿದೆ ಮತ್ತು ಇದೇ ರೀತಿಯ ಅಥವಾ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿರುವ ಅಂಗವೈಕಲ್ಯ ಹೊಂದಿರುವ ಜನರಿಗೆ ತನ್ನ ಸೇವೆಗಳನ್ನು ವಿಸ್ತರಿಸಲು ಯೋಜಿಸಿದೆ.
ಹಿರಿಯ ನಾಗರಿಕರು thegoodfellows.in ನಲ್ಲಿ ಸೈನ್ ಅಪ್ ಮಾಡುವ ಮೂಲಕ ಸೇವೆಗಳನ್ನು ಪಡೆಯಬಹುದು ಅಥವಾ +91 8779524307 ಗೆ ಮಿಸ್ಡ್ ಕಾಲ್ ನೀಡಬಹುದು.