ರಾಜೇಶ್ ಎಕ್ಸ್ ಪೋರ್ಟ್ಸ್ ಪಾಲಾದ ಭರ್ಜರಿ ಡೀಲ್
ಬೆಂಗಳೂರು, ನ.30: ವಿಶ್ವದ ಅತಿದೊಡ್ಡ ಚಿನ್ನ ಶುದ್ಧೀಕರಣ ಘಟಕವನ್ನು ಖರೀದಿಸಿದಿಸಿರುವ ಬೆಂಗಳೂರು ಮೂಲದ ಎಕ್ಸ್ ಪೋರ್ಟ್ಸ್ ಸಂಸ್ಥೆ ಈಗ ಮತ್ತೊಂದು ಭರ್ಜರಿ ಡೀಲ್ ಪಡೆದುಕೊಂಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಸಂಸ್ಥೆಯಿಂದ ಸುಮಾರು 1,122 ಕೋಟಿ ರು ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ಯುಎಇ ಮೂಲದ ಗ್ರಾಹಕರಿಗೆ ಚಿನ್ನ ಹಾಗೂ ವಜ್ರಖಚಿತ ಆಭರಣಗಳನ್ನು ವಿನ್ಯಾಸಗೊಳಿಸಿ ಕೊಡುವ ಜವಾಬ್ದಾರಿಯನ್ನು ಎಕ್ಸ್ ಪೋರ್ಟ್ಸ್ ಒಪ್ಪಿಕೊಂಡಿದೆ. [ರಾಜೇಶ್ ಎಕ್ಸ್ ಪೋರ್ಟ್ಸ್ ತೆಕ್ಕೆಗೆ 432 ಕೋಟಿ ಡೀಲ್]
ರಾಜೇಶ್ ಎಕ್ಸ್ ಪೋರ್ಟ್ ಷೇರುಗಳು ಸೋಮವಾರ ಏರಿಕೆ ಕಂಡಿದೆ. ಬಿಎಸ್ ಇ ನಲ್ಲಿ ಶೇ 4.20ರಂತೆ 28.50ರು ನಂತೆ 707.80 ರು ಗೆ ಏರಿದೆ. ಎನ್ ಎಸ್ ಇ ನಲ್ಲಿ 707.30ರು ನಂತೆ ಶೇ 3.91 ಏರಿಕೆ ಕಂಡಿದೆ.

ರಾಜೇಶ್ ಎಕ್ಸ್ ಪೋರ್ಟ್ಸ್ ನ ಬೆಂಗಳೂರು ಘಟಕದಲ್ಲೇ ಈ ವಿನೂತನ ವಿನ್ಯಾಸದ ಆಭರಣಗಳು ತಯಾರಾಗುತ್ತದೆ. ಮಾರ್ಚ್ 31ರೊಳಗೆ ಆರ್ಡರ್ ಪೂರೈಸಬೇಕಿದೆ ಎಂದು ಬಿಎಸ್ ಇಗೆ ರಾಜೇಶ್ ಎಕ್ಸ್ ಪೋರ್ಟ್ಸ್ ಸೋಮವಾರ ತಿಳಿಸಿದೆ. ಕಳೆದ ತಿಂಗಳಷ್ಟೇ 1,360 ಕೋಟಿ ರು ಮೌಲ್ಯದ ಆರ್ಡರ್ ಪಡೆದುಕೊಂಡಿತ್ತು.[ಬೆಂಗಳೂರು ಸಂಸ್ಥೆ ಪಾಲಾದ ಅತಿ ದೊಡ್ಡ ಚಿನ್ನ ಶುದ್ಧೀಕರಣ ಘಟಕ]
ಬೆಂಗಳೂರು ಮೂಲದ ಈ ಸಂಸ್ಥೆ ವಾರ್ಷಿಕವಾಗಿ 250 ಟನ್ ಗಳಷ್ಟು ಚಿನ್ನಾಭರಣವನ್ನು ಮಾರುಕಟ್ಟೆಗೆ ಬಿಡುತ್ತಿದ್ದು, ವಿಶ್ವದ ಅತಿದೊಡ್ಡ ಆಭರಣ ಉತ್ಪಾದನಾ ಸಂಸ್ಥೆಗಳಲ್ಲಿ ಒಂದೆನಿಸಿದೆ. ದೇಶದ 80 ಕಡೆಗಳಲ್ಲಿ ಆಭರಣ ಮಳಿಗೆಗಳನ್ನು ಹೊಂದಿರುವ ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಆಭರಣಗಳಿಗೆ ಯುರೋಪ್ ಹಾಗೂ ಉತ್ತರ ಅಮೇರಿಕದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.
2014-15ರಲ್ಲಿ 655 ಕೋಟಿ ರು ನಿವ್ವಳ ಲಾಭ, 1,204 ಕೋಟಿ ರು ನಿರ್ವಹಣಾ ಲಾಭ ಪಡೆದುಕೊಂಡಿದ್ದು, ಸಂಸ್ಥೆಯ ಆದಾಯ 50,000 ಕೋಟಿ ರುಗಳಷ್ಟಿದೆ. ಸಿನಿಮಾ ತಾರೆಗಳಾದ ಜಯಪ್ರದಾ, ದಿವಂಗತ ವಿಷ್ಣುವರ್ಧನ್ ಅವರು ರಾಜೇಶ್ ಎಕ್ಸ್ ಪೋರ್ಟ್ ನ ಶುಭ್ ಜ್ಯುವೆಲ್ಲರ್ಸ್ ನ ರಾಯಭಾರಿಗಳಾಗಿದ್ದಾರೆ. (ಪಿಟಿಐ)












Click it and Unblock the Notifications