• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಷ್ಯಾನೆಟ್ ನ್ಯೂಸ್ ನಿರ್ದೇಶಕ ಹುದ್ದೆ ತ್ಯಜಿಸಿದ ರಾಜೀವ್ ಚಂದ್ರಶೇಖರ್

|
   ರಿಪಬ್ಲಿಕ್ ಟಿವಿಯ ಪೇರೆಂಟ್ ಕಂಪನಿ ಏಷ್ಯಾನೆಟ್ ನ್ಯೂಸ್ ನಿಂದ ಹೊರ ಬಂದ ರಾಜೀವ್ ಚಂದ್ರಶೇಖರ್ | Oneindia Kannada

   ಬೆಂಗಳೂರು, ಏಪ್ರಿಲ್ 2: ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಎಆರ್ ಜಿ ಔಟ್ಲಿಯರ್ ಏಷ್ಯಾನೆಟ್ ನ್ಯೂಸ್ ಪ್ರೈ ಲಿಮಿಟೆಡ್ ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕಂಪೆನಿಯು ಅರ್ನಬ್ ಗೋಸ್ವಾಮಿ ಮುಂದಾಳತ್ವದ ರಿಪಬ್ಲಿಕ್ ಟಿ.ವಿ.ಯ ಮಾಲೀಕತ್ವ ಹೊಂದಿದೆ.

   ಮಾಧ್ಯಮ ಸಂಸ್ಥೆಯ ಮಾಲೀಕರೂ ಆದ ರಾಜೀವ್ ಚಂದ್ರಶೇಖರ್ ಮಾರ್ಚ್ 31ರಂದು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಅವರು ಹೇಳಿಕೆ ನೀಡಿದ್ದು, "ಇತ್ತೀಚೆಗೆ ನಾನು ಬಿಜೆಪಿ ಸಂಸದನಾಗಿ ಆಯ್ಕೆ ಆಗಿದ್ದೇನೆ. ಆ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ. 2006ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸಂಸದನಾಗಿದ್ದೆ. ಯಾವುದೇ ಪಕ್ಷದ ಜತೆ ಗುರುತಿಸಿಕೊಂಡಿರಲಿಲ್ಲ" ಎಂದಿದ್ದಾರೆ.

   ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪರಿಚಯ

   ಆದರೆ, ಈಗ ಬಿಜೆಪಿ ಸದಸ್ಯನಾಗಿದ್ದೇನೆ. ಆದ್ದರಿಂದ ರಿಪಬ್ಲಿಕ್ ಟಿವಿಯ ಬ್ರ್ಯಾಂಡ್ ಹಾಗೂ ತಂಡದ ಹಿತದೃಷ್ಟಿಯಿಂದ ಇನ್ನು ಮುಂದೆ ಆಡಳಿತ ಮಂಡಳಿಯಲ್ಲಿ ನಿರ್ದೇಶಕನಾಗಿ ಮುಂದುವರಿಯುವುದಿಲ್ಲ ಎಂದು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

   Rajeev Chandrasekhar resigns as Board Director from Republic TV’s parent company

   ರಾಜೀವ್ ಚಂದ್ರಶೇಖರ್ ಅವರ ಏಷ್ಯಾನೆಟ್ ಆನ್ ಲೈನ್ ಕಂಪೆನಿ ಎಆರ್ ಜಿ ಔಟ್ಲಿಯರ್ ನಲ್ಲಿ ಮೂವತ್ತು ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿದೆ. ರಾಜೀವ್ ಚಂದ್ರಶೇಖರ್ ಅವರು ಜುಪಿಟರ್ ಕ್ಯಾಪಿಟಲ್ ಲಿಮಿಟೆಡ್ ನ ಸ್ಥಾಪಕರು ಹಾಗೂ ಅಧ್ಯಕ್ಷರು.

   ಈ ಕಂಪೆನಿಯು ಮಲಯಾಳಂ ಸುದ್ದಿ ವಾಹಿನಿ ಏಷ್ಯಾನೆಟ್ ನ್ಯೂಸ್, ಕನ್ನಡ ಪ್ರಭ ದಿನಪತ್ರಿಕೆ, ಸುವರ್ಣ ನ್ಯೂಸ್ ಸುದ್ದಿ ವಾಹಿನಿ ಹಾಗೂ ರೇಡಿಯೋ ಇಂಡಿಗೋದಲ್ಲಿ ಹಣ ಹೂಡಿಕೆ ಮಾಡಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು rajeev chandrasekhar ಸುದ್ದಿಗಳುView All

   English summary
   Ahead of being sworn in as BJP’s Rajya Sabha MP on Tuesday, Rajeev Chandrasekhar resigned as a Board Director from ARG Outlier Asianet News Private Limited, the company that owns Republic TV headed by journalist Arnab Goswami. The media owner-turned-politician resigned from his position on March 31.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more