ಬರಲಿವೆ ಪೆಪ್ಸಿ, ಕೊಕಾಕೋಲ ಹೆಸರಿನ ರೈಲುಗಳು !?

Posted By: Chethan
Subscribe to Oneindia Kannada

ನವದೆಹಲಿ, ಜ. 9: ಪ್ರಯಾಣಿಕರ ಅಥವಾ ಸರಕು ಸಾಗಣೆ ಟಿಕೆಟ್ ಬೆಲೆ ಏರಿಸದೇ ಇಲಾಖೆಗೆ ಲಾಭ ತರುವ ನಿಟ್ಟಿನಲ್ಲಿ ಪ್ರಮುಖ ರೈಲು ಹಾಗೂ ರೈಲ್ವೇ ನಿಲ್ದಾಣಗಳನ್ನು ಬ್ರಾಂಡಿಂಗ್ ಮಾಡಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ಅದರಂತೆ, ಯಾವುದೇ ಕಾರ್ಪೋರೇಟ್ ಕಂಪನಿಯು ನಿರ್ದಿಷ್ಟ ರೈಲು ಅಥವಾ ರೈಲಿನ ಕೆಲ ಬೋಗಿಗಳ ಮೇಲೆ ತಮ್ಮ ಜಾಹೀರಾತು ಪ್ರಕಟಿಸಲು ಹಕ್ಕುಗಳನ್ನು ನೀಡಲು ನಿರ್ಧರಿಸಲಾಗಿದೆ. ಹಾಗೆ, ಹಕ್ಕುಗಳನ್ನು ಪಡೆದ ನಂತರ ಆಯಾ ರೈಲು ಅಥವಾ ಬೋಗಿಗಳ ಒಳಗೆ ಹಾಗೂ ಮೇಲ್ಮೈಗಳ ಮೇಲೆ ತಮ್ಮ ಕಂಪನಿಯ ಜಾಹೀರಾತು ಪ್ರಕಟಿಸಬಹುದಾಗಿದೆ.

Railways has readied a plan to brand trains

ಈಗಾಗಲೇ ಈ ಕುರಿತಂತೆ ಪ್ರಸ್ತಾವನೆಯನ್ನು ಸಿದ್ಧಗೊಳಿಸಲಾಗಿದ್ದು, ಮುಂದಿನ ವಾರ ನಡೆಯಲಿರುವ ರೈಲ್ವೇ ಮಂಡಳಿಯಲ್ಲಿನ ಸಭೆಯಲ್ಲಿ ಮಂಡಿಸಲಾಗುತ್ತದೆ. ಅಲ್ಲಿ ಅದಕ್ಕೆ ಒಪ್ಪಿಗೆ ಸಿಕ್ಕರೆ ಹಂತಹಂತವಾಗಿ ಈ ಆಲೋಚನೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಉದಾಹರಣೆಗೆ, ಪೆಪ್ಸಿ ಕಂಪನಿಯು ಒಂದು ರೈಲಿನ ಮೇಲಿನ ಜಾಹೀರಾತು ಹಕ್ಕುಗಳನ್ನು ಪಡೆದರೆ, ಇಡೀ ರೈಲು ಪೆಪ್ಸಿ ಜಾಹೀರಾತುಮಯವಾಗಲಿದೆ.

ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೇ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮೋದಿಯವರು ಕಾರ್ಪೊರೇಟ್ ವಲಯವನ್ನು ಬಳಸಿಕೊಂಡು ರೈಲ್ವೇ ಇಲಾಖೆಗೆ ಲಾಭ ತರುವಂಥ ಚಿಂತನೆಗಳನ್ನು ಮಾಡಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದರು. ಅದರಂತೆ, ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ ಎಂದು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A proposal to generate revenue without raising fairs of passengers and service, Railway department came up with special proposal. According to it, corporate companies will be given advertisement rights to brand its products on perticular train.
Please Wait while comments are loading...